ಅನ್ನದಾನೇಶ್ವರ ಮಠವು ಸರ್ವ ಜನಾಂಗದ ಏಳಿಗೆಗೆ ಶ್ರಮಿಸಿದ ಧರ್ಮ ಕ್ಷೇತ್ರವಾಗಿದೆ ಇದೇ ನವೆಂಬರ್ 25 ರಿಂದ ಡಿಸೆಂಬರ್ 26 ರವರೆಗೆ ಪಟ್ಟಣದಲ್ಲಿ ನಡೆಯುವ ಬಸವ ಪುರಾಣವು, ಸೌಹಾರ್ದತೆಯನ್ನು ಎತ್ತಿ ಸಾರುವ ಬಸವ ಪುರಾಣವಾಗಿದೆ ಎಂದು ಹಾಲಕೇರಿಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದರು.
ಈ ಪುರಾಣದ ಮುಖ್ಯ ಉದ್ದೇಶವೇ ಸಮಾಜದಲ್ಲಿ ಸಮಾನತೆ ಸಹಿಷ್ಣುತೆ ಹಾಗೂ ಸೌಹಾರ್ದತೆಯ ಕೊಂಡಿಯನ್ನು ಬಲಪಡಿಸುವುದಾಗಿ ಎಂದರು. ಹೆಚ್ಚಿನ ಸಂಖ್ಯೆಯಲ್ಲಿ ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದರು.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ ಸಿದ್ದಣ್ಣ ಬಂಡಿ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮಲ್ಲಿನ ಸೌಹಾರ್ದತೆಯ ಬೆಸುಗೆಯನ್ನು ಮುಂದಿನ ಯುವ ಪೀಳಿಗೆಗೆ ಹಾಗೂ ಸಮಾಜಕ್ಕೆ ಒಂದು ಮಾದರಿಯಾಗುವಂತೆ ಈ ಪುರಾಣವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಜುಮನ್ ಇಸ್ಲಾಂ ಕಮೀಟಿ ಚೇರಮನ್ನ ಹಸನಸಾಬ ತಟಗಾರ, ಮೌಲಾನ ಶಾಹೀದ ರಜಾ, ಸುಭಾನಸಾಬ ಆರಗಿದ್ದಿ, ದಾದು ಹಣಗಿ, ಮಾಸುಮಲಿ ಮದಗಾರ, ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ್, ಶರಣಪ್ಪ ರೇವಡಿ, ನಾಸೀರ ಸುರಪುರ, ಅಶ್ರಫ ಅಲಿ ಗೋಡೇಕಾರ, ಕಸಾಪ ಅಧ್ಯಕ್ಷ ಎ ಪಿ ಗಾಣಗೇರ, ಸೇರಿದಂತೆ ಸಮಾಜ ಭಾಂದವರು ಉಪಸ್ಥಿತರಿದ್ದರು. ಅಂಜುಮನ್ ಇಸ್ಲಾಂ ಕಮೀಟಿ ನಿರ್ದೇಶಕ ದಾವಲಸಾಬ ತಾಳಿಕೋಟಿ ನಿರೂಪಿಸಿದರು.
***********
Post a Comment