ಕಾರುಡಗಿಮಠ ಆಸ್ಪತ್ರೆಯ ಆಡಳಿತ ಚುಕ್ಕಾಣಿ ಪ್ರಶಾಂತ್ ರಾಠೋಡ್ ಅವರ ಕೈಗೆ ಬಂದ ನಂತರ ಆಸ್ಪತ್ರೆ ಮತ್ತು ರೋಗಿಗಳ ಅನ್ಯೋನ್ಯತೆ ಹೆಚ್ಚಾಗಿದೆ. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ರೋಗಿಗಳು ಮಾತ್ರವಲ್ಲದೇ, ಅಕ್ಕಪಕ್ಕದ ತಾಲೂಕು, ಜಿಲ್ಲೆಯ ರೀಗಿಗಳು ಬರುತ್ತಾರೆ. ಆಸ್ಪತ್ರೆ ಡೋಲಾಯಮಾನ ಸ್ಥಿತಿ ತಲುಪಿದಾಗ ಅದಕ್ಕೆ ಒಳ್ಳೆ ರೂಪ, ಸ್ವರೂಪ ಕೊಟ್ಟು ಮತ್ತೆ ಜನ ಸಾಮಾನ್ಯರ ಮನದಲ್ಲಿ ಆತ್ಮ ವಿಶ್ವಾಸ ಮೂಡುವಂತೆ ಮಾಡಿದ್ದು ಬಂಜಾರ ಸಮುದಾಯದ ಮುಂಚೂಣಿ ನಾಯಕ ಪ್ರಶಾಂತ್ ರಾಠೋಡ್ ಅವರು.
ಆಸ್ಪತ್ರೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲು, ಜನ ಸಮಾನ್ಯರೊಂದಿಗೆ ಉತ್ತಮ ಸಂಪರ್ಕ ಹೊಂದುವಂತೆ ನೋಡಿಕೊಂಡಿದ್ದಾರೆ. ಇನ್ನೂ, ಆಸ್ಪತ್ರೆ ಸಿಬ್ಬಂದಿಯಲ್ಲೂ ಸಾಮರಸ್ಯಕ್ಕೆ ಹಾದಿಯಾಗಿದೆ. ಕಳೆದ 6 ತಿಂಗಳಿನಿಂದ ಅಂದ್ರೆ, ಪ್ರಶಾಂತ್ ರಾಠೋಡ್ ಆಡಳಿತ ಚುಕ್ಕಾಣಿ ಹಿಡಿದ ನಂತರ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಅದಿಕ್ಕೆ ಪ್ರಶಾಂತ್ ರಾಠೋಡ್ ಅವರಿಗೆ ಜನ ಸಮಾನ್ಯರು, ರೋಗಿಗಳು, ಬೇರೆ ಊರುಗಳಿಂದ ನೆರವು ಅರಸಿ ಬಂದವರಿಗೆ ಆಶಾ ಕಿರಣವಾಗಿದ್ದಾರೆ ಪ್ರಶಾಂತ್ ರಾಠೋಡ್. ಈ ಮಧ್ಯೆ, ರೋಗಿಗಳು ಸಹ ಪ್ರಶಾಂತ್ ರಾಠೋಡ್ ಅವರ ಕಾರ್ಯ ವೈಖರಿಯನ್ನ ಹಾಡಿ ಹೊಗಳಿದ್ದಾರೆ.
ಹೀಗೆ ಸಾಧನೆಯ ಹಾದಿಯತ್ತ ಸಾಗುತ್ತಿರುವ ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ರಾಠೋಡ್ ಅತ್ತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಶುಭಾಶಯಗಳು ಎಂದಿದ್ದಾರೆ ರಂಜಾನಬಿ ಕರ್ನಾಚಿ...
ರಂಜಾನ್ ಬಿ ಅವರ ಎದೆ ಭಾಗದಲ್ಲಿ ಸಣ್ಣ ಗಡ್ಡೆ ಬೆಳೆದಿತ್ತು. ಅವರು ಬಡ ಕುಟುಂಬ ವಾದ್ದರಿಂದ ಕಾರುಡಗಿಮಠ ಆಸ್ಪತ್ರೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಇದಕ್ಕೆ ಕಾರುಡಗಿಮಠ ಆಸ್ಪತ್ರೆ ಸಂಸ್ಥಾಪಕರು, ಆಸ್ಪತ್ರೆ ನಿರ್ವಾಹಕರಾದ ಪ್ರಶಾಂತ್ ರಾಠೋಡ್, ಸುನಿಲ್ ರಾಠೋಡ್, ಕೊಟ್ರೇಶ್ ಚಿಲಕಾ, ಡಾ. ಅನಿಲಕುಮಾರ್ ತೋಟದ್, ಡಾ. ಸುನಿಲಕುಮಾರ್ ಸಂಗನಾಳ್ ಸೇರಿದಂತೆ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ ರಂಜಾನಬಿ ಕುಟುಂಬ.
Post a Comment