-->
Bookmark

Gajendragad : ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ : ಶೀತಲ್ ಓಲೇಕಾರ್

Gajendragad : ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ : ಶೀತಲ್ ಓಲೇಕಾರ್ 
ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಮಕ್ಕಳೊಂದಿಗೆ ಅಜ್ಜ/ಜ್ಜಿಯರ ದಿನಾಚರಣೆ 
ಗಜೇಂದ್ರಗಡ : (Nov_15_11_2024)

ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಸೈನಿಕ‌ನಗರದ ಬಳಿಯ ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಅಜ್ಜ/ಜ್ಜಿಯರ ದಿನಾಚರಣೆ ಆಚರಿಸಲಾಯ್ತು.  
ಅಜ್ಜ, ಅಜ್ಜಿಯರು ಮಕ್ಕಳೊಂದಿಗೆ ಮಕ್ಕಳಾಗಿ ಕೆಕ್ ಕತ್ತರಿಸಿ, ಖುಷಿ ಪಟ್ಟರು. 


ಬಳಿಕ‌ ಸಂಸ್ಥೆಯ ಅಧ್ಯಕ್ಷ ಸೀತಲ್ ಓಲೇಕಾರ್ ಮಾತನಾಡಿ, ನೆಹರು ಅವರಿಗೆ ಮಕ್ಕಳೆಂದರೆ ಬಲು ಪ್ರೀತಿ.
ಮಕ್ಕಳ ಮನಸ್ಸು ನಿಷ್ಕಲ್ಮಶವಾದುದು ಎಂದರು. ಮಕ್ಕಳೇ ದೇಶದ ಭವಿಷ್ಯ ಎಂದರು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಹಿರಿಯ ಜೀವಿಗಳ ನಡೆದು ಬಂದ ಹಾದಿಯಲ್ಲಿ ಇಂದಿನ ಯುವ ಪ್ರತಿಭೆಗೆ ಹಿರಿಯರ ಮಾರ್ಗದರ್ಶನ ಮುಖ್ಯ ಎಂದರು. ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ. ಕೆಲಸ ಅರಸಿ, ದುಡಿಯಲು ಮನೆಯಲ್ಲಿನ ವಲಸೆ ಹೋಗುತ್ತಿದ್ದಾರೆ. ಇದರಿಂದ ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ ಇದು ಖೇದಕರ ಎಂದರು.‌

ಇನ್ನೂ, ಮಕ್ಕಳೊಂದಿಗೆ ಹಿರಿಯರು ಇರಬೇಕು. ವಯಸ್ಸಾದ ಮೇಲೆ ಮತ್ತೆ ಮಕ್ಕಳಾಗುತ್ತೇವೆ.‌ ವೃದ್ಧರನ್ನು ಅರ್ಥಮಾಡಿಕೊಳ್ಳಬೇಕೆಂದು ಮಕ್ಕಳಿಗೆ, ಪಾಲಕರಿಗೆ, ಪೋಷಕರಿಗೆ ಶೀತಲ್ ಓಲೇಕಾರ್ ಕಿವಿಮಾತು ಹೇಳಿದರು. 

ಇದೇ ವೇಳೆ, ಶಾಲೆಯ ಪ್ರಾಂಶುಪಾಲರಾದ ನಾಜೀಯಾ ಮುದಗಲ್ ಮಾತನಾಡಿ,
ನೆಹರು ಅವರು ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುತ್ತಾ, ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಬಾಳೋಣ ಎಂದು ಹೇಳಿದರು.

ಈ ಮಧ್ಯೆ, ಕಿರಣ ನಿಡಗುಂದಿ  ಹಿರಿಯ ಜೀವಿಗಳ ಜೊತೆ ಮನರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಅನುಷಾ ತಳವಾರ್, ಹೀನಾಕೌಸರ್ ಅರಳಿಕಟ್ಟಿ, ಅಮೃತಾ ಬದಿ, ಶಬೀನಾ ಬೆಳ್ಳಟ್ಟಿ, ರವಿ ನಿಡಗುಂದಿ, ಸಾವಿತ್ರಿ ಹಾವೇರಿ, ಪುಪ್ಪಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Post a Comment

Post a Comment