-->
Bookmark

Gajendragad : ಬಂಡಿ ಸಹೋದರರ ಸವಾಲ್ : ಪಟ್ಟಣದಲ್ಲಿ ಹಿಡಿತ ಕಳೆದುಕೊಂಡ ಬಿಜೆಪಿ...?

Gajendragad : ಬಂಡಿ ಸಹೋದರರ ಸವಾಲ್ : ಪಟ್ಟಣದಲ್ಲಿ ಹಿಡಿತ ಕಳೆದುಕೊಂಡ ಬಿಜೆಪಿ...?

ಗಜೇಂದ್ರಗಡ : (Nov_06_2024)

ರಾಜ್ಯದ ರಾಜಕೀಯ ಗುದ್ದಾಟ ಗಜೇಂದ್ರಗಡಲ್ಲಿ ನಡೆದಿದೆ. ಈ ಹಿಂದೆ ತೆರೆಮರೆಯಲ್ಲಿದ್ದ ಒಳ ಜಗಳ ಈಗ ಬೀದಿಗೆ ಬಂದಿದೆ ಎಂಬಂತಾಗಿದೆ. 

ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಚಾಣಾಕ್ಷ, ಈ ಹಿಂದೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಕಾರಣಿಕರ್ತ ಮತ್ತು ಸದ್ಯ ರೋಣ ಕ್ಷೇತ್ರದಲ್ಲಿ ಸೂಪರ್ ಶಾಸಕರಾಗಿರುವ ಸಿದ್ದಪ್ಪ ಬಂಡಿ ಕಾಂಗ್ರೆಸ್ ಪಕ್ಷಕ್ಕೆ ಬಂದ ನಂತರ ಗಜೇಂದ್ರಗಡದಲ್ಲಿ ಬಿಜೆಪಿ ಪ್ರಭಾವ ಕಡಿಮೆಯಾಗಿದೆ ಎಂದೆ ಚರ್ಚೆಯಾಗುತ್ತಿದೆ. 

ಪುರಸಭೆ ಚುನಾವಣೆ ಇನ್ನೇನು ಕೆಲವೆ ತಿಂಗಳು ಇದ್ದರೂ, ಬಿಜೆಪಿ ವಶದಲ್ಲಿದ್ದ ಪುರಸಭೆ ಚುಕ್ಕಾಣಿ ಕಾಂಗ್ರೆಸ್ ಪಾಲಾಯ್ತು. ಇದೆಲ್ಲವನ್ನೂ ಪಕ್ಕದಲ್ಲೇ ಇದ್ದುಕೊಂಡು ಬಿಜೆಪಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. 
ಇದೆಲ್ಲವೂ ಮಾಜಿ ಶಾಸಕ ಕಳಕಪ್ಪ ಬಂಡಿ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದೆ ಹೇಳಬಹುದು. ಮಾಜಿ ಶಾಸಕರ ಮನೆಯಲ್ಲಿ ಸದಾ ಜನಜಂಗುಳಿ ಕಂಡು ಬರುತ್ತಿತ್ತು. ಅಧಿಕಾರ ಕಳೆದುಕೊಂಡ ನಂತರ ಜನರು, ಕಾರ್ಯಕರ್ತರು, ಬೆಂಬಲಿಗರು ಕಳಕಪ್ಪ ಬಂಡಿ ಅವರ ಮನೆಯಿಂದ ಸಿದ್ದಪ್ಪ ಬಂಡಿ ಅವರ ಮನೆಗೆ ಶಿಫ್ಟ್ ಆದ್ರು. ಸಿದ್ದಪ್ಪ ಬಂಡಿ ಅವರಿಗೆ ಪಟ್ಟಣದಲ್ಲಿ ಜನ ಬೆಂಬಲ ದಿನಂ ಪ್ರತಿ ಹೆಚ್ಚುತ್ತಲೇ ಇದೆ. ಸಣ್ಣ ಮಕ್ಕಳೊಂದಿಗೂ ಪ್ರೀತಿಯಿಂದ ಬೆರೆಯುವ ಇವರು, ಎಲ್ಲರನ್ನೂ ಒಗ್ಗೂಡಿಸಿ,  ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. 

ಈಗ ಗಜೇಂದ್ರಗಡ ಪಟ್ಟಣದಲ್ಲಿ ಕಾಂಗ್ರೆಸ್ ಬಿಜೆಪಿ ಜಿದ್ದಾ ಜಿದ್ದಿನ ಕಣವಾಗಿದೆ. 

ಒಂದೆಡೆ ಮಾಜಿ ಶಾಸಕರು ಅಧಿಕಾರಿಗಳಿಗೆ ಆವಾಜ್ ಹಾಕಿದ್ದು ತಿಳಿಯುತ್ತಿದ್ದಂತೆ, ಕಾಂಗ್ರೆಸ್ ಮುಖಂಡ ಸಿದ್ದಪ್ಪ ಬಂಡಿ ಅಧಿಕಾರಿಗಳ ಬೆಂಬಲಕ್ಕೆ ನಿಂತರು. ಇದು ಅಧಿಕಾರಿಗಳ ಪಾಲಿಗೆ ಅಮೃತವಾಗಿ ಪರಿಣಮಿಸಿತು. ಪಟ್ಟಣದಿಂದ ಹಿಡಿದು ಜಿಲ್ಲಾಧಿಕಾರಿಗಳ ವರೆಗೂ ಮಾಜಿ ಶಾಸಕರ ವಿರುದ್ಧ ಸರಣಿ ಮನವಿ ಸಲ್ಲಿಸಲಾಯ್ತು. 

ಈ ಮಧ್ಯೆ, ಮಾಜಿ ಶಾಸಕ ಕಳಕಪ್ಪ ಬಂಡಿ‌ ಅವರು, ಇದೆಲ್ಲ ಬೆಳವಣಿಗೆ ರಾಜಕೀಯ ಪ್ರೇರಿತ ಎಂದು ಸಮಜಾಯಿಸಿ ನೀಡಿದರೂ, ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲೇ ಇಲ್ಲ‌‌‌. 

ಇನ್ನೂ, ಸಿದ್ದಪ್ಪ ಬಂಡಿ ಅವರ ಚಾಣಾಕ್ಷತೆಯಿಂದ ಕಮಲ ಪಾಳಯ ಹಲವು ಗ್ರಾಮ ಪಂಚಾಯತಿ ಅಧಿಕಾರ ಕಳೆದುಕೊಂಡಿತು. ಇದೆಲ್ಲದರಿಂದ ಕಮಲ ಪಾಳಯದಲ್ಲಿ ಹತಾಶೆ ಶುರುವಾಗಿದೆ. ಒಂದೊಂದೆ ಮೆಟ್ಟಿಲು ಏರುತ್ತಿದ್ದಂತೆ ಪಟ್ಟಣದಲ್ಲಿ ರಾಜಕೀಯದ ದಿಕ್ಕು ದೆಸೆ ಬದಲಾಗತೊಡಗಿದೆ. 

ಪಟ್ಟಣ ಅಷ್ಟೆ ಅಲ್ಲ ಗದಗ ಜಿಲ್ಲೆಯಲ್ಲೆ ಹಿಡಿತ ಸಾಧಿಸಿರುವ ಸಿದ್ದಪ್ಪ ಬಂಡಿ ವಿರುದ್ಧ ಕಳಕಪ್ಪ ಬಂಡಿ ಅವರ ಆಟ ನಡೆಯುತ್ತಿಲ್ಲ ಎಂಬುದು ಜಗಜ್ಜಾಹಿರಾಗಿದೆ. 

ಇನ್ನೂ, ಕೆಲವೇ ತಿಂಗಳಲ್ಲಿ ಪುರಸಭೆ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ನೇರಾ_ನೇರ ಪೈಪೋಟಿ ನಡೆಸಲಿದೆ‌. ತಮ್ಮ ತಮ್ಮ ಬೆಂಬಲ ಇರುವ ಅಭ್ಯರ್ಥಿಗಳ ಹುಡುಕಾಟ ನಡೆಸಬೇಕಿದೆ. ಸಿದ್ದಪ್ಪ ಬಂಡಿ ಅವರು ರಾಜಕೀಯದಲ್ಲಿ ಈಗ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ. ಆದ್ರೆ, ಅರ್ಹ ಅಭ್ಯರ್ಥಿಗಳ ಹುಡುಕಾಟ ನಡೆಸಬೇಕಿದೆ ಬಿಜೆಪಿ. ಕಮಲ ಪಾಳಯದಲ್ಲಿ ಅಭ್ಯರ್ಥಿಗಳು ಆಯ್ಕೆಯಾಗಿ ಬಂದರೂ, ಸಿದ್ದಪ್ಪ ಬಂಡಿ ಅವರನ್ನ ಕ್ಷೇತ್ರದಲ್ಲಿ ಎದುರು ಹಾಕಿಕೊಳ್ಳುವ ಎದೆಗಾರಿಗೆ ಯಾರಿಗೂ ಇಲ್ಲ ಎಂಬ ಮಾತು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಹೀಗಾಗಿ, ಕಮಲ ಪಾಳಯ ಅಸ್ಥಿತ್ವ ಕಳೆದುಕೊಳ್ಳುವ ಭಿತಿ ಇದೆ ಎಂಬ ಸುದ್ದಿ ಅಲ್ಲಲ್ಲಿ ಹರಿದಾಡುತ್ತಿದೆ. 

ವಿಧಾನಸಭೆ ಚುನಾವಣೆಯಲ್ಲಿ ನಡೆಯುವ ಜಿದ್ದಾಜಿದ್ದು ಗಜೇಂದ್ರಗಡದಲ್ಲಿ ನೋಡಲು ಸಿಗಲಿದೆ ಎಂದೆ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. 
ಅದೇನೇ ಇರಲಿ, ರಾಜಕೀಯ ಚದುರಂಗದಾಟದಲ್ಲಿ ಏಳು ಬೀಳು ಸರ್ವೇ ಸಾಮಾನ್ಯ.

ಇದೆಲ್ಲದರ ನಡುವೆ, ಮುಂದಿನ ನಡೆಯನ್ನ ಜನಸಮಾನ್ಯರು ಕಾತುರದಿಂದ ಕಾಯುತ್ತಿದ್ದಾರೆ...

ಕೃಷ್ಣ ರಾಠೋಡ್, 
ಸಂಪಾದಕರು, ಕಿರಾ ನ್ಯೂಸ್ ಕನ್ನಡ. 
ಫೋನ್ ನಂ : 8197474996
Post a Comment

Post a Comment