-->
Bookmark

Gajendragad : ಪ್ರೀತಿ, ಭಾತೃತ್ವ, ಬಿತ್ತುತ್ತಿರುವ ಹಾಲಕೆರೆಯ ಮ.ನಿ.ಪ್ರ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು

Gajendragad : ಪ್ರೀತಿ, ಭಾತೃತ್ವ, ಬಿತ್ತುತ್ತಿರುವ ಹಾಲಕೆರೆಯ ಮ.ನಿ.ಪ್ರ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು 
ಮೊದಲ ದಿನ ಬಸವ ಪುರಾಣಕ್ಕೆ ಚಾಲನೆ 
ಉತ್ತಮ ಸಮಾಜ ಕಟ್ಟುವ ಕೆಲಸ ಮಾಡುತ್ತಿರುವ ಮ.ನಿ.ಪ್ರ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು 
ಗಜೇಂದ್ರಗಡ : (Nov_26_2024)
ದೇಶಾದ್ಯಂತ ಹಿಂದೂ ಮುಸ್ಲೀಂ ಬಾಂಧವ್ಯಕ್ಕೆ ತೊಂದರೆಯಾಗುವ ಮಾತುಗಳು, ಭಾಷಣಗಳು ಕೇಳಿ ಬಂದರೇ, ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿನ ಹಾಲಕೆರೆ ಮಠ ಮಾತ್ರ ಪ್ರೀತಿಯ ಭಾತೃತ್ವ, ಬಿತ್ತುತ್ತಿದೆ. ಹಾಲಕೆರೆ ಹೆಸರೇ ಹೇಳುವಂತೆ ಇಲ್ಲಿ ಅಕ್ಷರ ದಾಸೋಹ ನಡೆಯುತ್ತದೆ. ಬಡವರ ಅನುಕೂಲಕ್ಕಾಗಿ ಶಿಕ್ಷಣ ಸಂಸ್ಥೆಗಳು ಆರಂಭ ಮಾಡಿದ ಹಾಲಕೆರೆಯ ಅನ್ನದಾನೇಶ್ವರ ಮಠದಿಂದ ಈಗ ಪಟ್ಟಣದಲ್ಲಿ ಬಸವ ಪುರಾಣ ನಡೆಯುತ್ತಿದೆ. ಜಗದ್ಗುರು ಬಸವಣ್ಣನವರ ಬಗ್ಗೆ ಪ್ರತಿನಿತ್ಯ ಹೇಳಬೇಕು. ಯುವ ಸಮೂಹಕ್ಕೆ ಬಸವಣ್ಣನವರ ಬಗ್ಗೆ ಹೇಳುವುದು ಬಹು ಮುಖ್ಯವಾಗಿದೆ. 
ಗಜೇಂದ್ರಗಡದಲ್ಲಿ ಹಿಂದೂಗಳು ಮತ್ತು ಮುಸ್ಲೀಂ ಬಾಂಧವರು ಒಂದೆ ಆಗಿದ್ದಾರೆ. ಹಿಂದೂಗಳ ಕಾರ್ಯಕ್ರಮದಲ್ಲಿ ಮುಸ್ಲೀಂ ಬಾಂಧವರು, ಅಲ್ಪ ಸಂಖ್ಯಾತರ ಕಾರ್ಯಕ್ರಮದಲ್ಲಿ ಹಿಂದೂ ಬಾಂಧವರು ಭಾಗವಹಿಸುತ್ತಾರೆ. ಇದು ಇಲ್ಲಿ ಸರ್ವೇ ಸಾಮಾನ್ಯ. 
ಹಾಲಕೆರೆ ಮಠದ ಪರಮ ಪೂಜ್ಯ ಶ್ರೀಮನ್ ನಿರಂಜನ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು  ಬಸವಣ್ಣನರ ಕಾರ್ಯವನ್ನ ಮಾಡುತ್ತಿದ್ದಾರೆ. ಹಾಲಕೆರೆಯ ಮತ್ತು ಬಸವಣ್ಣನವರ ಸಾಮಾಜಿಕ ಕಾರ್ಯ ಪಕ್ಷಾತೀತ, ಜಾತ್ಯಾತೀತವಾಗಿ ನಡೆಯುತ್ತಿದೆ. 
ಮೊದಲ ದಿನದ ಕಾರ್ಯಕ್ರಮದಲ್ಲಿ ಗಜೇಂದ್ರಗಡದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಇದಾದ ಬಳಿಕ ಎಪಿಎಂಸಿ ಎದುರಿನ ಬಯಲು ಜಾಗೆಯ ವೇದಿಕೆಗೆ ಆಗಮಿಸಿದರು. ಮಠಾಧಿಶರು, ಶಾಸಕರು, ಪಂಚಮಸಾಲಿ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಿದ್ದಪ್ಪ ಬಂಡಿ ಸೇರಿದಂತೆ ಎಲ್ಲ ಸಮಾಜದ ಬಂಧು ಬಾಂಧವರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. 
ನವೆಂಬರ್ 25 ರಿಂದ ಡಿಸೆಂಬರ್ 26ರ ವರೆಗೆ ನಡೆಯುವ ಕಾರ್ಯಕ್ರಮ ಇದಾಗಿದ್ದು, ತಾಲೂಕು ಸೇರಿದಂತೆ ಎಲ್ಲೆಡೆಯಿಂದ ಭಕ್ತಾದಿಗಳು ಆಗಮಿಸುತ್ತಿರುವುದು ಸಂತಸ ತಂದಿದೆ.‌ ಸಮಾಜದ ಏಳ್ಗೆಗಾಗಿ ಇಂತಹ ಕಾರ್ಯಕ್ರಮಗಳು ವರ್ಷಪೂರ್ತಿ ನಡೆದರೂ ತಪ್ಪಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. 
ಹಾಲಕೆರೆ ಅಜ್ಜನವರ ಮತ್ತು ಶ್ರೀಮಠದ ಎಲ್ಲ ಭಕ್ತಾದಿಗಳ ಕಷ್ಟಗಳನ್ನ ದೂರ ಮಾಡಲಿ, ಉತ್ತಮ ಸಮಾಜ ನಿರ್ಮಾಣ ಮಾಡುತ್ತಿರುವ ಶ್ರೀಮಠದ ಕಾರ್ಯಕ್ಕೆ ಕೈ ಜೋಡಿಸೋಣ...
Post a Comment

Post a Comment