-->
Bookmark

Gajendragad : ಭಾಷೆ ಉಳಿದರಷ್ಟೆ ಕನ್ನಡಿಗರಿಗೆ ಅಸ್ತಿತ್ವ; ರಾಜ್ಯಾಧ್ಯಕ್ಷ ಮಂಜುನಾಥ ರಾಠೋಡ

Gajendragad : ಭಾಷೆ ಉಳಿದರಷ್ಟೆ ಕನ್ನಡಿಗರಿಗೆ ಅಸ್ತಿತ್ವ; ರಾಜ್ಯಾಧ್ಯಕ್ಷ ಮಂಜುನಾಥ ರಾಠೋಡ
ಗಜೇಂದ್ರಗಡ : (Nov_01_2024)
ಕನ್ನಡದ ಉಳಿವಿಗಾಗಿ ಅನೇಕ ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಲೇ ಇವೆ. ಕನ್ನಡದ ಸ್ವಾಭಿಮಾನಕ್ಕೆ ದಕ್ಕೆ ಬಂದಾಗ ಹೋರಾಟಗಳು ನಡೆಯುತ್ತಿವೆ.  ಮಹದಾಯಿ-ಕಾವೇರಿ ಹೋರಾಟಗಳೇ ಸಾಕ್ಷಿ. ಗೋಕಾಕ್ ಚಳವಳಿಯ ನೆನಪು ಇಂದಿಗೂ ಅಮರವಾಗಿದೆ ಎಂದು ಕ್ರಾಂತಿಸೂರ್ಯ ಜೈಭೀಮ್ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ ರಾಠೋಡ ಹೇಳಿದರು.

ಸಮೀಪದ ಕೊಡಗಾನೂರ ಗ್ರಾಮದಲ್ಲಿ ಶುಕ್ರವಾರ ಕನ್ನಡಪರ ಸಂಘಟನೆಗಳು ಹಾಗೂ ಗ್ರಾಮಸ್ಥರಿಂದ ನಡೆದ ಸಂಭ್ರಮದ ೬೯ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಧ್ವಜಾರೋಹಣ ನಡೆಸುವ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.
ಕನ್ನಡ ಒಂದು ಭಾಷೆ ಮಾತ್ರವಲ್ಲ. ಅದು ನಮ್ಮ ಬದುಕು. ಕವಿಗಳು, ಸಾಹಿತಿಗಳ ಮೂಲಕ ಅಕ್ಷರ ರೂಪದಲ್ಲಿ ಕನ್ನಡ ಭಾಷೆ ಜೀವಂತವಾಗಿದೆ. ಪ್ರತಿಯೊಬ್ಬರು ಕನ್ನಡ ಸಾಹಿತ್ಯ ಓದುವ ಮೂಲಕ ಕನ್ನಡ ಭಾಷೆಂiÀiನ್ನು ಉಳಿಸಿ ಬೆಳಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕರವೇ ತಾಲೂಕ ಅಧ್ಯಕ್ಷ ರಾಚಯ್ಯ ಬಾಳಿಕಾಯಿಮಠ ಮಾತನಾಡಿ, ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಹಾಗೂ ಕನ್ನಡ ನಾಡು ನುಡಿ ಅಭಿವೃದ್ಧಿಗೆ ಕೊಡುಗೆ ನೀಡಿದ ಮಹನೀಯರನ್ನು ನಾವು ಸ್ಮರಿಸಬೇಕು. ಮನೆಗಳಲ್ಲಿ ಪೋಷಕರು ಕನ್ನಡ ಭಾಷೆಯಲ್ಲಿ ಮಾತನಾಡಬೇಕು. ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸುವಂತಾಗಬೇಕು ಎಂದು ಸಲಹೆ ನೀಡಿದರು.

ಸಾನಿಧ್ಯವಹಿಸಿದ್ದ ಚಂದ್ರಶೇಖರಯ್ಯ ಹಿರೇಮಠ, ಎಸ್ಡಿಎಂಸಿ ಅಧ್ಯಕ್ಷ ಹನುಮಂತ ರಾಮಜೀ ಮಾತನಾಡಿ, ಕನ್ನಡ ಏಕೀಕರಣ ಹೋರಾಟದಲ್ಲಿ ಕನ್ನಡ ನಾಡು-ನುಡಿ ಸೇವೆ ಸಲ್ಲಿಸುವಲ್ಲಿ ರೋಣ ತಾಲೂಕಿನ ಪಾತ್ರ ಮಹತ್ವದ್ದಾಗಿದೆ.  ಅಂದಾನಪ್ಪ ದೊಡ್ಡಮೇಟಿ, ಜ್ಞಾನದೇವ ದೊಡ್ಡಮೇಟಿ ಅವರಂತ ಮೇರು ನಾಯಕತ್ವ ಆಲೂರ ವೆಂಕಟರಾಯರು, ಕುವೆಂಪು, ಶಿವರಾಮಕಾರಂತ, ದ.ರಾ.ಬೇಂದ್ರೆ ಸೇರಿದಂತೆ ಹಲವು ಸಾಹಿತಿಗಳು ಕನ್ನಡ ಭಾಷೆ ಬೆಳವಣಿಗೆಗಾಗಿ ಕೊಡುಗೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡಿದ್ದರು’ ಎಂದರು.
 ಇದೇ ಸಂದರ್ಭದಲ್ಲಿ ಬಾಲಚಂದ್ರ ವಾಲ್ಮೀಕಿ, ಗ್ರಾಮ ಪಂಚಾಯಿತಿ ಸದಸ್ಯ ಭರಮಪ್ಪ ಹುಣಸಿಗಿಡದ, ನಿರ್ಮಲಾ ಸೌಲಬಗೌಡ, ಮಾಂತಯ್ಯ ಕಪ್ಲಿಮಠ, ಅಲ್ಲಾಭಕ್ಷಿ ನಧಾಪ, ಅಂದಪ್ಪ ವಾಲ್ಮೀಕಿ, ಶರಣಪ್ಪ ನಡಕಟ್ಟಿನ, ಶಿವಾನಂದ ಹುಯಿಲಗೋಳ,ಬಸುರಾಜ ನಡಕಟ್ಟಿನ, ರಮೇಶ ರಾಮಜಿ ಇತರರು ಇದ್ದರು.
Post a Comment

Post a Comment