-->
Bookmark

Gajendragad : ಕಡೆಗೂ 4 ದಿನಗಳ ಬಳಿಕ ಸಿದ್ದಪ್ಪ ಬಂಡಿ ಪರ ಕಾಂಗ್ರೆಸ್ Press meet

Gajendragad : ಕಡೆಗೂ 4 ದಿನಗಳ ಬಳಿಕ ಸಿದ್ದಪ್ಪ ಬಂಡಿ ಪರ ಕಾಂಗ್ರೆಸ್ Press meet 

ಗಜೇಂದ್ರಗಡ : (Nov_07_2024)

ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಮಾಜಿ ಸಚಿವರ ದುರ್ನಡತೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗಿತ್ತು. ಆದ್ರೆ, ಮೊದಲು ಕಾಂಗ್ರೆಸ್ ಮುಖಂಡ ಸಿದ್ದಪ್ಪ ಬಂಡಿ ಮಾತ್ರ ವಿರೋಧ ವ್ಯಕ್ತಪಡಿಸಿದ್ದರು. 

ಈ ಹಿಂದೆ ಕಾಂಗ್ರೆಸ್ ಪ್ರತಿಪಕ್ಷದಲ್ಲಿದ್ದಾಗ ಚುರುಕಾಗಿ ಕೆಲಸ‌ ಮಾಡುತ್ತಿತ್ತು. Press meet ಸೇರಿದಂತೆ ಬೃಹತ್ ಪ್ರತಿಭಟನೆಗಳು ನಡೆಯುತ್ತಿತ್ತು. ಚಾಚು ತಪ್ಪದೆ ಕೆಲಸ ಮಾಡುತ್ತಿದ್ದರು. ಮಾಧ್ಯಮವನ್ನ ಸರಿಯಾಗಿ ಬಳಸಿಕೊಳ್ಳುತ್ತಿದ್ದರು. ಆದ್ರೆ, ಮಾಜಿ ಸಚಿವರ ಮತ್ತು ತಹಶಿಲ್ದಾರ್ ಕಿರಣಕುಮಾರ್ ಕುಲಕರ್ಣಿ ನಡುವಿನ ಘಟನೆ ನಡೆದು ನಾಲ್ಕು ದಿನಗಳಾದ್ರೂ, ಸಿದ್ದಪ್ಪ ಬಂಡಿ ಅವರು ಮಾತ್ರ ವಿರೋಧ ವ್ಯಕ್ತಪಡಿಸಿದ್ದರು. 

ಸಹೋದರರ ನಡುವಿನ ಜಗಳ‌ ನಮಗ್ಯಾಕೆ ಬೇಕು ಎಂಬ ಮನಸ್ಥಿತಿಯಲ್ಲಿದ್ದ ಹಾಗೆ ಕಂಡು ಬಂತು. ಆದ್ರೆ, ಸಿದ್ದಪ್ಪ ಬಂಡಿ ಅವರು, ಪರಿಸ್ಥಿತಿಯನ್ನ ನಿಭಾಯಿಸುವ ಎದೆಗಾರಿಕೆ ಹೊಂದಿರುವುದು ಪ್ಲಸ್ ಪಾಯಿಂಟ್ ಆಗಿದೆ. 

ಈಗ ನಾಲ್ಕು ದಿನಗಳ ಬಳಿಕ ಗಜೇಂದ್ರಗಡದಲ್ಲಿ ಕಾಂಗ್ರೆಸ್ ಎಚ್ಚೆತ್ತುಕೊಂಡ ಹಾಗಾಗಿದೆ. ಸಿದ್ದಪ್ಪ ಬಂಡಿ ಅವರ ಮನೆ ಶಕ್ತಿ ಕೇಂದ್ರವಾಗಿ ಬೆಳೆಯುತ್ತಿದೆ. ಇದನ್ನ  ತಡವಾಗಿ ಅರ್ಥಮಾಡಿಕೊಂಡ ಕಾಂಗ್ರೆಸ್ ತಡವಾಗಿ ತರಾತುರಿಯಲ್ಲಿ ಪ್ರೆಸ್ಮಿಟ್ ಮಾಡಿದೆ ಎಂದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ. 

ಪಟ್ಟಣದಲ್ಲಿ ಸಿದ್ದಪ್ಪ ಬಂಡಿ ಬಿಟ್ಟರೇ, ಉಳಿದ ನಾಯಕರ ಪಾತ್ರ ಅಷ್ಟಕಷ್ಟೆ ಎಂಬಂತಾಗಿದೆ‌. ಬಹಳಷ್ಟು ನಾಯಕರು ತಾವು, ತಮ್ಮ ಕೆಲಸ ಎಂದುಕೊಂಡಿರುವುದನ್ನ ಕಾಂಗ್ರೆಸ್ ಹೈ ಕಮಾಂಡ್ ಸಹ ಗಮನಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳ ಪರಿಣಾಮವನ್ನ ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ.
Post a Comment

Post a Comment