ಗದಗ : (Nov_05_2024)
ಮಾಜಿ ಶಾಸಕರು ತಹಶಿಲ್ದಾರ್ ಕಿರಣಕುಮಾರ್ ಕುಲಕರ್ಣಿ ಅವರಿಗೆ ನಿಂದಿಸಿದ ಘಟನೆ ಜಿಲ್ಲೆಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದೆ. ತಾಲೂಕಿನಾದ್ಯಂತ ಎಲ್ಲೆಡೆ ಇದೆ ಚರ್ಚೆಯಾಗುತ್ತಿದೆ.
ಗಜೇಂದ್ರಗಡದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮಾಜಿ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರೇ, ಮತ್ತೊಂದೆಡೆ, ಗದಗ ಜಿಲ್ಲೆಯಲ್ಲೂ ಕರ್ನಾಟಕ ಸರ್ಕಾರಿ ಕಂದಾಯ ನೌಕರರ ಸಂಘ ಗದಗ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯ್ತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ವರ್ತನೆ ಸಹಿಸಲಾಗದು. ಇದು ಕಾನೂನು ಸುವ್ಯವಸ್ಥೆ ಹದಗೆಡಿಸಲು ನಡೆದ ಘಟನೆ ಎಂದು ಆಕ್ರೋಶ ಹೊರ ಹಾಕಿದರು.
ಗದಗ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
1 comment