ಸಂವಿಧಾನಕ್ಕೆ ಅಗೌರವವು ದೇಶ ದ್ರೋಹ - ಚಿಂತಕ ಬಸವರಾಜ್ ಸುಳಿಭಾವಿ
ಗದಗ : (Nov_28_2024)
"ನಮ್ಮ ಸಂವಿಧಾನ ಯಾರನ್ನು ಅಗೌರವಿಸುವಂತಹದಲ್ಲ, ಎಲ್ಲರನ್ನು ಗೌರವಿಸುವಂತಹದ್ದು. ಎಲ್ಲ ಧರ್ಮಿಯರನ್ನು ಗೌರವಿಸುವಂತಹದ್ದು. ಯಾರಾದರೂ 'ಈ ಸಂವಿಧಾನ ನಮಗೆ ಗೌರವ ಕೊಟ್ಟಿಲ್ಲ' ಎಂದು ಹೇಳಿದರೆ ಅದು ಮೂರ್ಖ ಹೇಳಿಕೆ ಆಗುತ್ತದೆ. ಯಾವ ಸಂವಿಧಾನ ಪ್ರತಿಯೊಬ್ಬರ ಹಕ್ಕನ್ನ ಸಮಾನತೆಯನ್ನ ಪ್ರತಿಪಾದನೆ ಮಾಡಿದೆಯೋ, ಎಲ್ಲರನ್ನು ಸಮಾನವಾಗಿ ಕಾಣಲು ಹೇಳಿದೆಯೋ ಅಂತಹ ಸಂವಿಧಾನ ಗೌರವ ಕೊಟ್ಟಿಲ್ಲ ಎಂದು ಹೇಳುವುದು ಸಂವಿಧಾನ ವಿರೋಧಿಯಷ್ಟೇ ಅಲ್ಲ, ದೇಶ ದ್ರೋಹವು ಆಗುತ್ತದೆ" ಎಂದು ಪ್ರಗತಿಪರ ಚಿಂತಕ ಬಸವರಾಜ್ ಸುಳಿಭಾವಿ ಹೇಳುದರು.
ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ ಎಂದು ಸಂವಿಧಾನದ ವಿರುದ್ಧ ಹೇಳಿಕೆ ನೀಡಿದ ಉಡುಪಿಯ ಪೇಜಾವರ ಸ್ವಾಮಿಯ ಹೇಳಿಕೆ ಖಂಡಿಸಿ ಗದಗ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಈ ದೇಶ ಸಂವಿಧಾನ ಬಂದು 75ನೇ ವಾರ್ಷಿಕೋತ್ಸವದ ಮಾಡಿದ್ದೇವೆ. ಈ ದೇಶಕ್ಕೆ ಸಂವಿಧಾನದಿಂದ ವಿಶೇಷ ಗೌರವ ಸಿಕ್ಕಿದೆ. ಈ ದೇಶವನ್ನು ಹಿಂದೆ ರಾಜ ಪ್ರಭುತ್ವ ಆಳಿದೆ. ಧರ್ಮ ಪ್ರಭುತ್ವ ಆಳಿದೆ. ಆದರೆ, ಪ್ರಜಾಪ್ರಭುತ್ವ ಆಳ್ವಿಕೆಯನ್ನು, ಮೇಲರಿಮೆಯನ್ನ ಸಾರಿದ್ದೆ ಈ ಸಂವಿಧಾನ. ಸಂವಿಧಾನದ ಮೂಲಕ ಪ್ರಜಾಪ್ರಭುತ್ವಕ್ಕೆ ಈ ದೇಶ ಹೊರಳಿದೆ. ಸನಾತನ ಪ್ರಭುತ್ವದಿಂದ, ಧರ್ಮಪ್ರಭುತ್ವದಿಂದ ಆಚೆ ಬಂದು ಪ್ರಜಾಪ್ರಭುತ್ವ ಪರಿಕಲ್ಪನೆ ಕೊಟ್ಟಿದ್ದು ಈ ದೇಶದ ಸಂವಿಧಾನ. ಇಡೀ ವಿಶ್ವದಲ್ಲಿಯೇ ನಮ್ಮ ದೇಶಕ್ಕೆ ಇಷ್ಟು ದೊಡ್ಡ ಪ್ರಜಾಪ್ರಭುತ್ವದ ಗೌರವ ಸಿಕ್ಕಿರುವುದು ಸಂವಿಧಾನದ ಮೂಲಕ" ಎಂದರು.
ಪೇಜಾವರ ಸ್ವಾಮಿಗಳು ದೇಶ ದ್ರೋಹದ ಕೆಲಸ ಮಾಡಿದ್ದಾರೆ. ಸಂವಿಧಾನ ವಿರೋಧಿ ಕೆಲಸ ಮಾಡದ್ದಾರೆ. ಕೂಡಲೇ ದೇಶದ್ರೋಹಿ, ಸಂವಿಧಾನ ವಿರೋಧಿ ಎಂದು ಸರಕಾರ ಪ್ರಕರಣ ದಾಖಲಿಸಬೇಕು. ಎಲ್ಲರನ್ನು ಗೌರವಿಸುವಂತ ಸಂವಿಧಾನವನ್ನ ನಮಗೆ ಗೌರವ ಕೊಟ್ಟಿಲ್ಲ ಎಂದು ಹೇಳುವುದು ದೇಶದ್ರೋಹದ ಕೆಲಸ. ಇಂತಹ ಹೇಳಿಕೆಯನ್ನು ಪೇಜಾವರ ಸ್ವಾಮೀಜಿ ವ್ಯಕ್ತಿಯಾಗಿ ಹೇಳಿದ್ದಲ್ಲ, ಒಂದು ಸಂಸ್ಥೆಯಾಗಿ ಮಾಡಿರುವಂತಹದ್ದು. ಆ ಸಂತರ ಸಭೆಯನ್ನು ಕರೆದವರು ವಿಶ್ವ ಹಿಂದೂ ಪರಿಷತ್ ನವರು.
ಈ ದೇಶದಲ್ಲಿ ಆರ್ ಎಸ್ ಎಸ್ ದ್ವಿಮುಖ ನೀತಿಯನ್ನು ಮಾಡುತ್ತಿದೆ. ಇಲ್ಲಿವರೆಗೂ ಬಿಜೆಪಿ ಸಂಸದರಿಂದ, ಮಂತ್ರಿಗಳಿಂದ ಸಂವಿಧಾನ ವಿರೋಧಿ ಹೇಳಿಕೆಗಳನ್ನ ಕೊಡಿಸುವಂತ ಕೆಲಸ ಮಾಡುತ್ತಿದೆ. ಆರ್ ಎಸ್ ಎಸ್ ನ ಅಂಗಸಂಸ್ಥೆ ವಿಶ್ವ ಹಿಂದೂ ಪರಿಷತ್ತಿನ ರಾಷ್ಟೀಯ ಉಪಾಧ್ಯಕ್ಷ ಪೇಜಾವರ ಸ್ವಾಮೀಜಿ ಸಂತರ ಸಭೆಯೋ, ರಾಜಕೀಯ ಸಭೆಯೋ ಅನುಮಾನ ಕಾಡುತ್ತಿದೆ. ಸಭೆಯಲ್ಲಿ ಪಕ್ಕಾ ರಾಜಕಾರಣಿ ಮಾತನಾಡುವಂತ ಭಾಷೆಯಲ್ಲಿತ್ತು. ಹಾಗೆ ನೋಡಿದರೆ ಸ್ವಾಮೀಜಿ ತಕ್ಷಣವೇ ಪೇಜಾವರ ಮಠವನ್ನು ತ್ಯಜಿಸಿ, ಪಕ್ಷಕ್ಕೆ ಸೇರಬೇಕು. ಬದಲಾಗಿ ಧಾರ್ಮಿಕ ಸ್ವಾಮೀಜಿಯಾಗಿ ಸಂವಿಧಾನ ವಿರೋದಿಸುವ ಹೇಳಿಕೆ ಆತಂಕಕಾರಿಯಾಗಿದ್ದು, ಸಂವಿಧಾನ ಬದಲಾಯಿಸುವೆವು ಎಂಬುದಕ್ಕೆ ನೇರವಾಗಿ ಸಾಂಸ್ತಿಕವಾಗಿ ಹೇಳಿಕೆಗಳನ್ನ ಗಮನಿಸಬೇಕು.
ಈ ರೀತಿ ಹೇಳಿಕೆ ನೀಡುವುದರ ಮೂಲಕ ಈ ದೇಶದಲ್ಲಿ ಮೇಲು ಕೀಳು, ಮನುಸ್ಮೃತಿಯನ್ನು ಮತ್ತೆ ಪ್ರತಿಪಾದನೆ ಮಾಡುತ್ತಿದ್ದಾರೆ. ಇದು ಆರ್ ಎಸ್ ಎಸ್ ಅಜೆಂಡಾ ಆಗಿದ್ದು, ಸಂವಿಧಾನ ನಿರಾಕರಿಸುವ ಕೆಲಸ ಮಾಡುತ್ತಿದ್ದಾರೆ. ಇಂತವರ ವಿರುದ್ಧ ಬಂಡೆಳಬೇಕು" ಎಂದರು.
ಇಂತಹ ಸಂವಿಧಾನ ವಿರೋಧಿ ಹೇಳಿಕೆ ನೀಡುವ ಸ್ವಾಮೀಜಿಗಳನ್ನು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಬಸವರಾಜ್ ಸುಳಿಭಾವಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮುಖಂಡ ಶೇಖಣ್ಣ ಕವಳಿಕಾಯಿ, ಡಿ ಎಸ್ ಎಸ್ ಮುಖಂಡರು ಬಾಲರಾಜ್ ಅರಬರ್, ಆನಂದ ಶಿಂಗಾಡಿ, ನಾಗರಾಜ್ ಗೋಕಾವಿ, ಅನಿಲ್ ಕಾಳೆ, ಪರಶು ಕಾಳೆ, ಮುತ್ತು ಬಿಳಿಯಲಿ, ಶಿವಾನಂದ್ ತಮ್ಮಣ್ಣವರ್, ಬಸವರಾಜ್ ಪೂಜಾರ್ ಉಪಸ್ಥಿತರಿದ್ದರು.
Post a Comment