ಬೆಂಗಳೂರು : (Nov_21_11_2024)
ಇದು ಸಿನಿಮಾ ಇಂಡಸ್ಟ್ರಿಯಲ್ಲಿ ಯಾರೂ ಯಾರನ್ನೂ ಕರೆದು ಕರೆದು ಅವಕಾಶ ಕೊಡುವುದಿಲ್ಲ, ನಾವೇ ಸೃಷ್ಟಿಸಿ ಕೊಳ್ಳಬೇಕು ಅಂತಾರೆ ರುದ್ರಾಕ್ಷಪುರಂ ೩ಕಿ.ಮಿ, ತ್ರಿಷಾ, ಈ ಸಿನಿಮಾಗೆ ಕ್ಲೈಮ್ಯಾಕ್ಷ ಇರುವುದಿಲ್ಲ , ಲಿಲ್ಲಿ ಮೊದಲಾದ ಚಿತ್ರಗಳ ನಿರ್ದೇಶಕ ಆರ್. ಕೆ. ಗಾಂಧಿ.
ಒಂದು ಸಿನಿಮಾ ಗೆ ಒಬ್ಬರು, ಇಬ್ಬರು ಅಥವಾ ನಾಲೈದು ಮಂದಿ ನಿರ್ಮಾಪಕರು ಇರುತ್ತಾರೆ, ಆದರೆ ಇಲ್ಲೊಂದು ಚಿತ್ರತಂಡ ಬರೋಬ್ಬರಿ ಮೂವತ್ತು ಮಂದಿ ಕಲಾವಿದ ಹಾಗೂ ತಂತ್ರಜ್ಞರು ಜೊತೆಗೂಡಿ ‘ಸ್ನೇಹಾಲಯಂ’ ಎಂಬ ಸಿನಿಮಾ ತಂಡ ರಚನೆ ಮಾಡಿಕೊಂಡು ನಿರ್ಮಾಣ ಮಾಡುತ್ತಿರುವುದು ವಿಶೇಷ. ‘ಪ್ರೀತಿಸಿ ನೋಡು’ ಸಿನಿಮಾಗೆ ಹೀರೋ ಮಾರ್ವೆಲ್ ಮನುರಥ್, ಈಗಾಗಲೇ ಕನ್ನಡ ಸಿನಿಮಾ ರಂಗದಲ್ಲಿ ಪಬ್ಲಿಸಿಟಿ ಡಿಸೈನರ್ ಆಗಿ,ಪೈಟರ್ ಆಗಿ ಗುರುತಿಸಿಕೊಂಡಿದ್ದಾರೆ. ‘ಪ್ರೀತಿಸಿ ನೋಡು’ ಎಂಬ ಲವ್ ಅಂಡ್ ಆಕ್ಷನ್ ಓರಿಯೆಂಟೆಡ್ ಸಿನಿಮಾ ಮುಖಾಂತರ ಹೀರೋ ಆಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಲಂಕಾಸುರ , ಗುಲಾಲ್ ಮೊದಲಾದ ಸಿನಿಮಾಗಳಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ಸಹನಾಗೌಡ ಈ ಚಿತ್ರಕ್ಕೆ ಹೀರೋಯಿನ್, ಭಲರಾಜ್ ವಾಡಿ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ‘ಪ್ರೀತಿಸಿ ನೋಡು’ ಚಿತ್ರದ ಚಿತ್ರೀಕರಣ ಬೆಂಗಳೂರು ,ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ ಮೊದಲಾದ ಸ್ಥಳಗಳಲ್ಲಿ ನಡೆಯಲಿದೆ. ಚಿತ್ರಕ್ಕೆ ಪ್ರಮೋದ್ ಭಾರತೀಯ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರಿ ಸಂಗೀತ, ತ್ರಿಲ್ಲರ್ ಮಂಜು ಸಾಹಸ. ಎಂ. ಜಿ. ಕಲ್ಲೇಶ್,ಡಾ ಪ್ರಭು ಗಂಜಿಹಾಳ,ಡಾ ವೀರೇಶ್ ಹಂಡಿಗಿ ಪಿ .ಆರ್. ಓ ಆಗಿ ಕಾರ್ಯ ನಿರ್ವಹಿಸುತ್ತಿರುವ ಈ ಚಿತ್ರಕ್ಕೆ ಆರ್. ಕೆ .ಗಾಂಧಿ ಕಥೆ, ಚಿತ್ರಕಥೆ ,ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಉಳಿದ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು ನವೆಂಬರ್ ೨೫ ರಿಂದ ಚಿತ್ರೀಕರಣ ಪ್ರಾರಂಭ ಆಗಲಿದೆ ಎಂದು ನಿರ್ದೇಶಕ ಆರ್.ಕೆ.ಗಾಂಧಿ ಹೇಳಿದ್ದಾರೆ.
**
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬
Post a Comment