ಮಹಿಳೆಯರ ಒಳಿತಿಗಾಗಿ ಗೌರಿ ಹುಣ್ಣಿಮೆಯಂದು ಗೌರಿ ದೇವತೆಗೆ ಪೂಜಿಸಿದ್ದೇವೆ ಎಂದು ಬಾಗಲಕೋಟೆ ನಗರದ ಗುರು ಬಾಯಿ ಹೇಳಿದ್ದಾರೆ. ಕಿರಾ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಗುರು ಬಾಯಿ, ಸೆಕ್ಟರ್ ನಂಬರ್ 12 ರಲ್ಲಿ ಗೌರಿ ದೇವತೆ ಇರುವುದು ಇಲ್ಲಿ ಮಾತ್ರ. ಮನೆಯಲ್ಲೆ ನಾವು ಮೂರ್ತಿ ಪ್ರತಿಷ್ಟಾಪನೆ ಮಾಡಿದ್ದೇವೆ ಎಂದರು. ಅಲ್ಲದೇ, ಮೊದಮೊದಲು ಸಣ್ಣ ಪ್ರಮಾಣದಲ್ಲಿ ಜರುಗುತ್ತಿದ್ದ ಪೂಜಾ ಕೈಂಕರ್ಯಗಳು ಈಗ ವಿಜ್ರಂಬಣೆಯಿಂದ ಜರುಗುತ್ವೆ ಎಂದರು. ಮಹಿಳೆಯರ ಒಳಿತಿಗಾಗಿ, ಲೋಕ ಕಲ್ಯಾಣಕ್ಕಾಗಿ ಈ ಬಾರಿ ಕಟ್ಟಿಮನಿ ( ಕುಂಬಾರ ) ಕುಟುಂಬ ಮತ್ತು ವಠಾರದ ಮಹಿಳೆಯರೆಲ್ಲರೂ ಸೇರಿ ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು. ಮನೆಯಲ್ಲಿನ ಪುರುಷರು ಸಹ ಪೂಜೆಗೆ ಸಹಾಯ ಸಹಕಾರ ನೀಡುತ್ತಾರೆ. ಮಹಿಳೆಯಿಂದಲೇ ಜಗತ್ತು. ಮಹಿಳೆಯರಿಗೆ ಗೌರವಿಸಬೇಕು ಅದು ಜಗದ ನಿಯಮ ಎಂದು ಹೇಳಿದ ಗುರುಬಾಯಿ, ಈಗೀಗ ಆಧ್ಯಾತ್ಮಿಕ ಮನೋಭಾಗ ಕಡಿಮೆಯಾಗುತ್ತಿದೆ. ಯುವ ಪೀಳಿಗೆಯನ್ನ ಆಧ್ಯಾತ್ಮಿಕದೆಡೆಗೆ ಕರೆತರುವುದು ಸಹ ಒಂದು ಯಕ್ಷ ಪ್ರಶ್ನೆಯಾಗಿದೆ ಎಂದು ಆಧ್ಯಾತ್ಮಿಕದ ಬಗ್ಗೆ ಮಾತನಾಡಿದರು.
ಕಳೆದ 50 ವರ್ಷಕ್ಕೂ ಮೇಲ್ಪಟ್ಟು ಮನೆಯಲ್ಲೇ ಪೂರ್ತಿ ಪ್ರತಿಷ್ಟಾಪಿಸಿದ್ದಾರೆ. ಪ್ರತಿದಿನವೂ ಪೂಜಾ ಕಾರ್ಯಗಳು ನಡೆಯುತ್ವೆ. ಜೊತೆಗೆ ಗೌರಿ ಹುಣ್ಣಿಮೆಯಂದು ವಿಶೇಷ ಅಲಂಕಾರ ಮಾಡುತ್ತಾರೆ. ಶಕ್ತಿದೇವತೆಯಿಂದ ಸಕಲ ಜೀವರಾಶಿಗಳಿಗೂ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ, ಮಲ್ಲಪ್ಪ ಕಟ್ಟಿಮನಿ ಅವರ ಕುಟುಂಬ.
ಇಂತಹ ಪರಂಪರೆಗಳು ಮುಂದು ವರೆದರೆ, ಅದು ಆಧ್ಯಾತ್ಮ ಬೆಳೆದಂತೆ. ಆಧ್ಯಾತ್ಮವನ್ನ ಬೆಳೆಸುತ್ತಿರುವ ಕಟ್ಟಿಮನಿ ( ಕುಂಬಾರ ) ಕುಟುಂಬಕ್ಕೆ ಶುಭಾಶಯಗಳು...!!!
Post a Comment