-->
Bookmark

Vijayapura : ಮನುಷ್ಯರಂತೆ ಬೆಳೆಗಳಿಗೂ ಉತ್ತಮ ಆರೋಗ್ಯ ಕಲ್ಪಿಸಿ : ಅತ್ಯುತ್ತಮ ಬೆಳೆಗೆ ಸಹಕರಿಸುವ ಬಯೊಫಿಟ್ ನ ಅನಿಲ್

Vijayapura : ಮನುಷ್ಯರಂತೆ ಬೆಳೆಗಳಿಗೂ ಉತ್ತಮ ಆರೋಗ್ಯ ಕಲ್ಪಿಸಿ : ಅತ್ಯುತ್ತಮ ಬೆಳೆಗೆ ಸಹಕರಿಸುವ ಬಯೊಫಿಟ್ ನ ಅನಿಲ್ 
ವಿಜಯಪುರ : (Oct_20_2024)

ಮನುಷ್ಯ ಆರೋಗ್ಯ ಕಾಪಾಡಿಕೊಳ್ಳಲು ಹಲವಾರು ಮಾರ್ಗಗಳಿವೆ.‌ ಅನಾರೋಗ್ಯ ಪೀಡಿತರಾದಾಗ Exercise, ಯೋಗ, ಮತ್ತು ಆಸ್ಪತ್ರೆಗೆ ತೆರಳಿ ನಮ್ಮ ಆರೋಗ್ಯ ಸರಿಪಡಿಸಿಕೊಳ್ಳಬಹುದು.‌ ಆದ್ರೆ, ನಾವು ಬೆಳೆದ ಬೆಳೆಗೆ ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ, ಸರಿಯಾದ ಪ್ರಮಾಣದಲ್ಲಿ ಔಷಧೋಪಚಾರ ಮಾಡಿದರೇ, ಮಾತ್ರ ಉತ್ತಮ ಬೆಳೆ ಬರಲು ಸಾಧ್ಯ. ವಿಜಯಪುರ, ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯಲ್ಲಿ ಹಲವರು ರೈತರು ಇವರಿಗೆ ಇವರೇ ದಾರಿ ದೀಪವಾಗಿದ್ದಾರೆ. ಇವರಲ್ಲಿ‌ ಲಭ್ಯ ವಿರುವ ಔಷಧಗಳು ಬೆಳೆಗಳ ಮೇಲೆ‌ ಬಹಳಷ್ಟು ಪ್ರಭಾವ ಬೀರುತ್ತವೆ. ಇದರಿಂದ ಉತ್ತಮ ಅಷ್ಟೆ ಅಲ್ಲ, ಅತ್ಯುತ್ತಮ ಬೆಳೆ‌ ಬೆಳೆದು ಪ್ರಗತಿಪರ ರೈತರು ಎನಿಸಿಕೊಂಡಿದ್ದಾರೆ.‌ 

ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ರೈತ ಕುಟುಂಬದಲ್ಲಿ ಜನಿಸಿದ ಅನಿಲ್ ಪತ್ತಾರ್ ಅವರು, ರೈತರೊಂದಿಗೆ ತಮ್ಮ‌ನ್ನ ತಾವು ಗುರುತಿಸಿಕೊಂಡಿದ್ದಾರೆ. 

ಆದ್ರೆ, ತಮ್ಮನ್ನ ತಾವು ಗುರುತಿಸಿಕೊಳ್ಳಲು ಸಹ ಹಿಂದೇಟು ಹಾಕುತ್ತಾರೆ. ಸುದ್ದಿ, ಪ್ರಚಾರ ಬಯಸದ ಅನಿಲ್ ಪತ್ತಾರ್ ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತೆ ರೈತರು ಇವರ ಮೇಲೆ ನಂಬಿಕೆ ಇಟ್ಟಿದ್ದಾರೆ. ನಂಬಿದವರನ್ನ ಎಂದಿಗೂ ಕೈ ಬಿಡದ ಅನಿಲ್ ರೈತರ ಬೆಳೆಗಳಿಗೆ ರೋಗ ಬಂದ್ರೆ, ಔಷಧ ಮತ್ತು ಇಳುವರಿಗೆ ಬೇಕಾಗುವ ರಸಗೊಬ್ಬರ ವಿತರಿಸುತ್ತಾರೆ. ಇದರಿಂದ ಅದೆಷ್ಟೋ ರೈತರ ಬಾಳು ಹಸನವಾಗಿದೆ.

ಭಾರತ ಸರ್ಕಾರದಿಂದ ಮಾನ್ಯತೆ ಪಡೆದ Biofit ( ಬಯೊಫಿಟ್ ) ಉತ್ಪನ್ನಗಳನ್ನ ರೈತರೆ ಇವರನ್ನ ಸಂಪರ್ಕಿಸಿ ತಮ್ಮ ಬೆಳೆಗಳಿಗೆ ಬೇಕಾದ ಉತ್ಪನ್ನ ಗಳನ್ನ ಕೊಂಡೊಯ್ಯುತ್ತಾರೆ. 

ಕಾಲಕ್ಕೆ ತಕ್ಕಂತೆ ನಾವು Upgrade ಆಗಬೇಕಿದೆ. ಬೆಳೆಗಳಿಗೂ ಇದರ ಅಗತ್ಯತೆ ಇದೆ.‌ ಯಾಕೆ ಅಂದ್ರೆ, ಮಾರುಕಟ್ಟೆಯಲ್ಲಿ ನೂರಾರು ಉತ್ಪನ್ನಗಳಿವೆ. ಯಾವ ಉತ್ಪನ್ನವನ್ನ ನಂಬಬೇಕೆಂದು ರೈತರು ಚಿಂತಿತರಾಗುತ್ತಾರೆ. ಇಂತಹ ಸಂಧರ್ಭದಲ್ಲಿ ಉತ್ತರ ಕರ್ನಾಟಕದ ಮ್ಯಾನೇಜಿಂಗ್ ಕಮಿಟಿ ಮೆಂಬರ್ ಆಗಿರುವ ಅನಿಲ್ ಅವರಂತವರು ನಿಮ್ಮ ಬೆಂಬಲಕ್ಕೆ ಧಾವಿಸುತ್ತಾರೆ. 

ಇನ್ನೂ, ಉತ್ತಮ ಬೆಳೆ ಬಂದಾಗ ರೈತರೇ ಬಯೊಫಿಟ್ ನ ಮ್ಯಾನೇಜಿಂಗ್ ಕಮಿಟಿ ಮೆಂಬರ್ ಆಗಿರುವ ಅನಿಲ್ ಅವರನ್ನ ಸನ್ಮಾನಿಸಿದ ಉದಾಹರಣೆಗಳು ಸಹ ಉಂಟು... 

ಇಂತಹ ಎಲೆಮರೆ ಕಾಯಂತೆ ಹಗಲು ರಾತ್ರಿ ಶ್ರಮಿಸುವ ಅನಿಲ್ ಅವರಿಗೆ ಮುಂಬರುವ ದಿನಗಳು ಒಳ್ಳೆಯದಾಗಲಿ ಎಂದು ರೈತರು ಶುಭ ಹಾರೈಸಿದ್ದಾರೆ.
Post a Comment

Post a Comment