ಲಕ್ಷ್ಮೇಶ್ವರ : (Oct_10_2024)
"ಬದಲಾವಣೆ ಜಗದ ನಿಯಮ" ಎಂಬ ಉಪಶಿರ್ಷಿಕೆಯೊಂದಿಗೆ ಯುವ ನಿರ್ದೇಶಕ ಶಶಾಂಕ್ ಢೇಕಣೆಯವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾಮಾಜಿಕ ಸಂದೇಶ ಸಾರುವ "ಚಿಟ್ಟೆ" ಎಂಬ ಕನ್ನಡ ಕಿರುಚಿತ್ರದ ಮುಹೂರ್ತ ಸಮಾರಂಭ ಲಕ್ಷ್ಮೇಶ್ವರ ನಗರದಲ್ಲಿ ನೆರವೇರಿತು.
ಶ್ರೀಮತಿ ಶಾರದಾ ಬಸನಗೌಡ್ರ ಪಾಟೀಲ ಇವರು ಕ್ಯಾಮೆರಾ ಬಟನ್ ಒತ್ತುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು, ಶ್ರೀ ಸೋಮೇಶ್ವರ ದೇವಸ್ಥಾನದ ಮೊದಲ ದೃಶ್ಯವನ್ನು ಪ್ರತಿಭಾವಂತ ಛಾಯಾಗ್ರಾಹಕ ಪುಣೆಯ ವೀರು ಪಾಟೀಲ್ ಚಿತ್ರೀಕರಿಸಿದರು. ಈ ಸಂದರ್ಭದಲ್ಲಿ ಜಿ.ಎಮ್ ಉಪ್ಪಿನ, ಪ್ರಭಾವತಿ, ವಿಜಯಕುಮಾರ್ ಹಿರೇಮಠ್, ಬಸನಗೌಡ್ರ ಪಾಟೀಲ್, ಶ್ರೀಪಾಲ್ ಗೊಂಗಡಿ, ರೇಣುಕಾ ವೀರನಗೌಡ್ರ ಪಾಟೀಲ್, ಇನ್ನೂ ಅನೇಕರು ಹಾಜರಿದ್ದು ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಕಿರುಚಿತ್ರದಲ್ಲಿ ಕಲಾವಿದರಾಗಿ ಸಾತ್ವಿಕ್ ಢೇಕಣೆ, ಸಿದ್ದುಕೃಷ್ಣ , ಡಿಂಪಲ್, ಮಹೇಶಗೌಡ ಪಾಟೀಲ್, ರಾಧಿಕಾ ಮಹೇಶಗೌಡ, ಗೋವಿಂದ್ ಮಾಂಡ್ರೆ, ಬಸವಂತಪ್ಪ ಹರಕುಣಿ, ಮಾಣಿಕ್ಯ ಚಿಲ್ಲೂರ, ಭೂಪಾಲ್ ಗೊಂಗಡಿ, ಯಲ್ಲಪ್ಪ ಮೇಗುಂಡಿ,ಮಹ್ಮದ್ ಯಾಸೀನ್, ವಿಕ್ರಮ್ ಕುಮಾರ್, ಶಕ್ತಿ ಪ್ರಸಾದ್, ಖಾದರ್ ಸಾಬ್ ಮೊದಲಾದವರು ಇದ್ದಾರೆ, ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ವೀರು ಪಾಟೀಲ್ ಪುಣೆ , ಕಥೆ-ಸಂಭಾಷಣೆ: ಗೋವಿಂದ್ ಮಾಂಡ್ರೆ. ವಿದ್ಯಾ ಮಾಂಡ್ರೆ. ಪ್ರಸಾಧನ, ಶಿಖಾ. ಕೇಶವಿನ್ಯಾಸ , ಅಶೋಕ ಕಾಳಭೈರವ, ಗಾಯತ್ರಿ. ವಸ್ತ್ರವಿನ್ಯಾಸ, ಗುರು ಪಾಟೀಲ್ ಕುಂದಾಪುರ ಸಂಕಲನ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಪತ್ರಿಕಾ ಸಂಪರ್ಕ, ಮಹೇಶಗೌಡ ಪಾಟೀಲ್ ಸಹ ನಿರ್ದೇಶನ ಅವರದಿದ್ದು ಹುಬ್ಬಳ್ಳಿ, ಧಾರವಾಡ, ಲಕ್ಷ್ಮೇಶ್ವರ, ಸಂಶಿ, ಕುಂದಗೋಳ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರದ ನಿರ್ದೇಶಕರಾದ ಶಶಾಂಕ್ ಢೇಕಣೆಯವರು ತಿಳಿಸಿದ್ದಾರೆ. ಬಸವಂತಪ್ಪ ಹರಕುಣಿ, ಶ್ರೀನಿಧಿ. ನಿರ್ಮಾಣ ನಿರ್ವಹಣೆ ,ಶ್ರೀಮತಿ ರೇಖಾ ಸಿದ್ದುಕೃಷ್ಣರವರು ಚಿತ್ರದ ನಿರ್ಮಾಪಕರಾಗಿದ್ದಾರೆ.
**
ವರದಿ:
ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬
Post a Comment