ಕಾಲಕಾಲೇಶ್ವರ : ( Oct_10_10_2024)
ಕಾಲಕಾಲೇಶ್ವರದ ಅನಿಲ್ ಶಂಕ್ರಪ್ಪ ಮ್ಯಾಗೇರಿ ಇಹಲೋಕ ತ್ಯಜಿಸಿದ್ದಾರೆ. ಅನಿಲ್ ಅವರಿಗೆ 41 ವರ್ಷ ವಯಸ್ಸಾಗಿತ್ತು. ಅಂತಿಮ ವಿಧಿವಿಧಾನ ನಾಳೆ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಸ್ವ ಗ್ರಾಮ ಕಾಲಕಾಲೇಶ್ವರದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕಾಲಕಾಲೇಶ್ವರ ಅಷ್ಟೇ ಅಲ್ಲ, ಸುತ್ತಮುತ್ತಲಿನ ಗ್ರಾಮದ ಜನರೊಂದಿಗೂ ಉತ್ತಮ ಒಡನಾಟ ಹೊಂದಿದ್ದ ಸರಳ ಸಜ್ಜನ ವ್ಯಕ್ತಿಯಾಗಿದ್ದರು. ಅನಿಲ್ ಮ್ಯಾಗೇರಿ ಅವರ ನಿಧನದಿಂದ ಮನೆಯಲ್ಲಿ ನಿರವ ಮೌನ ಆವರಿಸಿದೆ.
ಕಾಲಕಾಲೇಶ್ವರದ ಅರ್ಚಕರಾದ ಮಲ್ಲಯ್ಯಸ್ವಾಮಿ ಗುರುಸ್ಥಳಮಠ, ಸಿದ್ದಪ್ಪ ಬಂಡಿ, ಅಂದಪ್ಪ ಸಂಕನೂರ್, ಗಣೇಶ್ ಗುಗಲೋತ್ತರ್, ಶಶಿಧರ್ ಹೂಗಾರ್, ಗ್ರಾಮ ಪಂಚಾಯತ್ ಸದಸ್ಯ ಮುತ್ತಣ್ಣ ತಳವಾರ್, ಸೋಮಪ್ಪ ರಾಠೋಡ್, ವಿರೇಶ್ ರಾಠೋಡ್, ಕೃಷ್ಣ ರಾಠೋಡ್, ಶಂಕರ್ ರಾಠೋಡ್, ಭೀಮಣ್ಣ ಮ್ಯಾಗೇರಿ, ವಾಸು ಮಾಳೋತ್ತರ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
Post a Comment