ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪುತ್ರ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹುಬ್ಬಳ್ಳಿಗೆ ಭೇಟಿ ನೀಡಿದ್ರು. ಹಾವೇರಿಯ ಶಿಗ್ಗಾವಿಗೆ ನಡೆಯಲಿರುವ ಉಪ ಚುನಾವಣೆಗೆ ಜೆಡಿಎಸ್ ಪ್ರಚಾರ ನಡೆಸಿದೆ.
ಶಿಗ್ಗಾವಿ ಮತಕ್ಷೇತ್ರದ ಸದಸ್ಯತ್ವ ಅಭಿಯಾನ ಹಾಗೂ ಉಪಚುನಾವಣೆ ಸಂಬಂಧಿಸಿದ ಚರ್ಚಾ ಕಾರ್ಯಕ್ರಮಕ್ಕೆ ಆಗಮಿಸಿದಾಗ, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಿಖಿಲಕುಮಾರಸ್ವಾಮಿ ಅವರಿಗೆ ಗದಗ ಜಿಲ್ಲಾಧ್ಯಕ್ಷರಾದ ಎಂ. ವೈ. ಮುಧೋಳ್ ಸ್ವಾಗತಿಸಿದರು. ಬಳಿಕ ಗದಗ ಜಿಲ್ಲೆಗೆ ಬರುವಂತೆ ಆಹ್ವಾನಿಸಿದರು. ಮುಧೋಳ್ ಅವರ ಮನವಿ ಸ್ವೀಕರಿಸಿ, ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದೆಲ್ಲೆಡೆ, ಬೂತ್ ಪಟ್ಟದಿಂದ ಪಕ್ಷ ಸಂಘಟಿಸುವ ಕಾರ್ಯ ಮಾಡುತ್ತೇವೆ ಎಂದರು. ಉತ್ತರದ ಪ್ರತಿಯೊಂದು ಕ್ಷೇತ್ರದಲ್ಲೂ ಜೆಡಿಎಸ್ ಪಕ್ಷ ಸಂಘಟಿಸಲಿದ್ದೇವೆ. ಜೆಡಿಎಸ್ ಎಲ್ಲ ಚುನಾವಣೆಯಲ್ಲೂ ಕಿಂಗ್ ಮೇಕರ್ ಆಗಿರುವುದನ್ನ ಸ್ಮರಿಸಿದರು ಎನ್ನಲಾಗಿದೆ. ಜೊತೆಗೆ ಬೆಳಕಿಂ ಹಬ್ಬ ದೀಪಾವಳಿ ಬಳಿಕ, ಗದಗ ಜಿಲ್ಲೆಗೆ ಬರುವುದಾಗಿ ಹೇಳಿದ್ದಾರೆ. ಹೀಗಾಗಿ, ಜಿಲ್ಲಾಧ್ಯಕ್ಷ ಮಕ್ತುಮಸಾಬ್ ಮುದೋಳ್ ಮತ್ತು ಜೆಡಿಎಸ್ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ.
ಇನ್ನೂ, ಶಿಗ್ಗಾವಿಗೆ ನಡೆಯಲುರುವ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಿ, ಮೈತ್ರಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶಬಾಬು, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ್ರ, ಆಲ್ಕೋಡ್ ಹನುಮಂತಪ್ಪ ಅವರು ನಿಖಿಲ್ ಕುಮಾರಸ್ವಾಮಿ ಅವರಿಗೆ ಸಾಥ್ ನೀಡಿದ್ರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಹಾಜಿ ಅಲಿ ಎಚ್. ಕೊಪ್ಪಳ, ರಾಜ್ಯ ವಕ್ತಾರ ವಿ. ಆರ್. ಗೋವಿಂದಗೌಡ್ರ, ಜಿಲ್ಲಾ ಹಿಂದುಳಿದ ಘಟಕದ ಅಧ್ಯಕ್ಷ ತಿಪ್ಪಣ್ಣ ಪುಡೆದ, ಗಜೇಂದ್ರಗಡ ತಾಲೂಕಾಧ್ಯಕ್ಷ ಸಂಗಪ್ಪ ಯಲಬುಣಚಿ, ಶಿರಹಟ್ಟಿ ತಾಲೂಕಾಧ್ಯಕ್ಷರಾದ ಸಿದ್ದಣ್ಣ ಹೊಂಬಾಳಿಮಠ, ಪದಾಧಿಕಾರಿಗಳಾದ ಜಯರಾಜ ವಾಲಿ, ಅಭಿಷೇಕ, ಪ್ರಫುಲ್ ಪುಣೆಕರ್, ಎಂ. ಎಸ್. ಪರ್ವತಗೌಡ, ಜಿ. ಕೆ. ಕೊಳ್ಳಿಮಠ, ಸಂತೋಷ ಪಾಟೀಲ್ ಹಾಗೂ ಅಪಾರ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ರು.
Post a Comment