-->
Bookmark

Gajendragad : ಗಾಂಧಿ ತತ್ವ ಸಿದ್ದಾಂತದಿಂದ ಸುಖಕರ ಜೀವನ : ಎಂ. ವೈ ಮುಧೋಳ್

Gajendragad : ಗಾಂಧಿ ತತ್ವ ಸಿದ್ದಾಂತದಿಂದ ಸುಖಕರ ಜೀವನ : ಎಂ. ವೈ ಮುಧೋಳ್ 

ಗಜೇಂದ್ರಗಡ : (Oct_10_2024)

ಗಾಂಧಿ ತತ್ವ ಸಿದ್ದಾಂತಗಳನ್ನ ಅಳವಡಿಸಿಕೊಂಡು ಜೀವನ ನಡೆಸಬೇಕು. ಸತ್ಯದ ಹಾದಿಯ ಮೇಲೆ ನಡೆಯಬೇಕು ಎಂದು ಜೆಡಿಎಸ್ ಗದಗ ಜಿಲ್ಲಾಧ್ಯಕ್ಷ ಎಂ. ವೈ ಮುಧೋಳ್ ಹೇಳಿದ್ದಾರೆ. 

ಗಜೇಂದ್ರಗಡದ ಪಕ್ಷದ ಕಚೆರಿಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಈ ಇಬ್ಬರು ಮಹಾನಾಯಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದ ಅವರು, ಗಾಂಧಿ ತತ್ವ ಸಿದ್ದಾಂತ ಅಳವಡಿಸಿಕೊಳ್ಳಬೇಕು. ಸುಖಕರ ಜೀವನಕ್ಕೆ ಗಾಂಧಿ ತತ್ವಗಳು ಬೇಕು ಎಂದು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಅಲ್ಲದೇ, ನಾಡಿನ ಸಮಸ್ತ ಜನತೆಗೆ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಗೆ ಶುಭ ಕೋರಿದರು. 

 ಗಜೇಂದ್ರಗಡ ತಾಲ್ಲೂಕ ಅಧ್ಯಕ್ಷರಾದ ಸಂಗಪ್ಪ ಯಲಬುಣಚಿ, ಜೆಡಿಎಸ್ ಪಕ್ಷದ ತಾಲ್ಲೂಕ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಾದಶಾ ಬಾಗವಾನ್, ಹುಸೇನಸಾಬ್ ಮ ಸಾಂಗ್ಲೀಕಾರ್, ಬಸನಗೌಡ ಪಾಟೀಲ್, ಸಂಗಪ್ಪ ಪತಂಗರಾಯ, ಕನಕಪ್ಪ ಸಾಗರ, ಶಂಶುದ್ದೀನ್ ಕಟಂಬ್ಲಿ, ರವಿ ಮೋಹಿತೆ ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Post a Comment

Post a Comment