ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಪದ್ಮಶಾಲಿ ಸಮಾಜದ ಮಹಿಳೆ ಮತ್ತು ಚುಟುಕು ಸಾಹಿತ್ಯ ಪರಿಷತ್ ಮಹಿಳಾ ತಾಲೂಕಾಧ್ಯಕ್ಷರಾದ ಶ್ರೀಮತಿ ರೇಣುಕಾ ಏವೂರ್ ಅವರಿಗೆ ಸನ್ಮಾನಿಸಲಾಯ್ತು. ಇಲಕಲ್ ಪಟ್ಟಣದ ಪದ್ಮಶಾಲಿ ಸಮಾಜದ ಹನುಮಂತ್ ವಗ್ಗಾ ಮತ್ತು ಅವರ ಕುಟುಂಬದ ವತಿಯಿಂದ ಸನ್ಮಾನಿಸಲಾಯ್ತು. ಈ ವೇಳೆ ಮಾತನಾಡಿದ ವಗ್ಗಾ, ಪದ್ಮಶಾಲಿ ಸಮಾಜದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಸಮಾಜದಲ್ಲಿ ಮಹಿಳೆಯರು ಎಲ್ಲರಿಗೂ ಮಾದರಿಯಾಗಿದ್ದಾರೆ. ಸ್ವಾವಲಂಬಿ ಜೀವನ ಸಾಗಿಸಲು ಮಹಿಳೆಯರು ಮುಂದೆ ಬರುತ್ತಿದ್ದಾರೆ.
ಜೊತೆಗೆ ಸಮಾಜದಲ್ಲಿನ ಎಲ್ಲ ಮಹಿಳೆಯರ ಪಾಲಿಗೆ ಹೊಸ ಭಾಷ್ಯ ಬರೆದಿದ್ದಾರೆ. ಎಲ್ಲರಿಗೂ ಮಾದರಿಯಾಗಿ, ಪುರುಷ ಪ್ರಧಾನ ಸಮಾಜದಲ್ಲಿ ಹೊಸ ದಾಪುಗಾಲು ಹೊಸತನಕ್ಕೆ ನಾಂದಿ ಎಂದು ಹೇಳಿದ್ದಾರೆ.
Post a Comment