ಗಜೇಂದ್ರಗಡ : ( Oct_07_2024)
ರಾಜ್ಯದ ಅಭಿವೃದ್ಧಿ ಮಾಡಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳುವ ಧಾವಂತದಲ್ಲಿದ್ದಾರೆ. ಕಾಂಗ್ರೆಸ್ ನಲ್ಲಿ ಹತ್ತಾರು ಬಣಗಳಾಗಿವೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಾಲು ಸಾಲು ಮುಖಂಡರು ಪಾಳೆ ನಿಂತಿದ್ದಾರೆ. ಡಿ.ಕೆ ಶಿವಕುಮಾರ್, ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಹೀಗೆ ಕ್ಯಾಬಿನೆಟ್ ದರ್ಜೆಯ ಎಲ್ಲ ಮಿನಿಸ್ಟರ್ಸ್ ಕೂಡ ನಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳುತ್ತಿದ್ದಾರೆ. ದಿನ ಬೆಳಗಾದರೆ ಮತ್ತೊಬ್ಬ ಸಿಎಂ ಅಭ್ಯರ್ಥಿ ಜನನವಾಗುತ್ತಿದ್ದಾರೆ ಕಾಂಗ್ರೆಸ್ ನಲ್ಲಿ. ಸ್ವ ಪಕ್ಷದವರಿಂದಲೇ, ರಾಜ್ಯದ ಅಭಿವೃದ್ಧಿಯಾಗುತ್ತಿಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಕ್ತುಮಸಾಬ್ ಮುಧೋಳ್ ಆರೋಪಿಸಿದರು.
ಗಜೇಂದ್ರಗಡದ ಪಕ್ಷದ ಕಚೇರಿಯಲ್ಲಿ ಕಿರಾ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಮಾಡಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರ್ಚಿ ಉಳಿಸಿಕೊಳ್ಳುವುದೇ ಅವರಿಗೆ ಹರಸಾಹಸವಾಗಿದೆ. ಇದೀಗ ಅವರು ತುಂಬಾ ಚಿಂತಾಕ್ರಾಂತರಾಗಿರುವ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು. ಸಿಎಂ ಕುರ್ಚಿಯಿಂದ ಅವರ ಪಕ್ಷದವರೆ ಇಳಿಸಲಿದ್ದಾರೆ ಎಂದು ಎಂದು ಭವಿಷ್ಯ ನುಡಿದರು.
ರಾಜ್ಯದ ಅಭಿವೃದ್ಧಿಯಾಗಿಲ್ಲ. ಅಭಿವೃದ್ಧಿ ಮಾಡಬೇಕಾದವರು ತಮ್ಮ ತಮ್ಮ ಸ್ಥಾನ ಉಳಿಸಿಕೊಳ್ಳುವುದರಲ್ಲಿ ತಲ್ಲೀನರಾಗಿದಾಗ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಮುಧೋಳ್ ಹೇಳಿದರು.
ಪ್ರತಿಪಕ್ಷದವರು ಕುರ್ಚಿಯಿಂದ ಇಳಿಸಲ್ಲ. ಬದಲಾಗಿ ಅವರೊಂದಿಗಿರುವ ಹಿಂಬಾಲಕರಿಂದಲೇ ಸಿಎಂ ಕುರ್ಚಿ ಕಳೆದುಕೊಳ್ಳಲಿದ್ದರೆ ಎಂದು ಹೇಳಿದರು.
ಇದೇ ಪರಿಸ್ಥಿತಿ ಮುಂದುವರಿದರೇ, ಮುಂಬರುವ ದಿನಗಳಲ್ಲಿ ಮತದಾರರೆ, ಉತ್ತರ ನೀಡಲಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.
Post a Comment