ಕನ್ನಡ ನಾಡು ಚಿನ್ನದ ಬೀಡು ಎಂದು ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ ಮತ್ತು ಪುರಸಭೆ ನಾಮ ನಿರ್ದೇಶಿತ ಸದಸ್ಯರಾದ ಮಹಮ್ಮದ್ ರಫೀಕ್ ತೋರಗಲ್ಲ ಹೇಳಿದರು.
ಗಜೇಂದ್ರಗಡದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ದಂದು, ಕನ್ನಡಾಂಬೆಗೆ ನಮಿಸಿ, ಮಾತನಾಡಿದ ಅವರು, ಕನ್ನಡ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಿರುವುದು ವಿಪರ್ಯಾಸ. ಕನ್ನಡ ನಾಡು ಚಿನ್ನದ ಬೀಡು, ಕರುನಾಡಿನಲ್ಲಿ ವ್ಯಾಪಾರ ವಹಿವಾಟಿಗೆ ಉತ್ತರ ಭಾರತದಿಂದ ವಲಸೆ ಬಂದವರೂ ಸಹ ಕನ್ನಡ ಮಾತನಾಡುತ್ತಾರೆ. ಕನ್ನಡ ಎಲ್ಲರಿಗೂ ಅನ್ನವ ನೀಡುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಲವು ಭಾಷೆಯೊಂದಿಗೆ ಕನ್ನಡ ಮಾತನಾಡುತ್ತಾರೆ. ಹಾಗೆಯೇ ಗಜೇಂದ್ರಗಡದಲ್ಲಿ ವಿವಿಧ ಭಾಷಿಕರು ನೆಲೆಸಿದ್ದಾರೆ. ಲಂಬಾಣಿ, ತೆಲುಗು, ಹಿಂದಿ, ಮರಾಠಿ ಹೀಗೆ ವಿವಿಧ ಭಾಷೆ ಮಾತನಾಡಿದರೂ, ಅವರೆಲ್ಲರನ್ನು ಒಂದಾಗಿಸಿರುವುದು ಮಾತ್ರ ಕನ್ನಡ. ಕನ್ನಡದಿಂದ ವಿವಿಧತೆಯಲ್ಲಿ ಏಕತೆಯನ್ನ ಕಂಡುಕೊಂಡು ಮಾದರಿ ಪಟ್ಟಣವಾಗಿದೆ.
ರಾಜ್ಯದ ಉದ್ದಗಲಕ್ಕೂ ಕನ್ನಡ ಎಂದೆಂದಿಗೂ ಒಂದೆ.. ಕನ್ನಡ ನಾಡು, ನುಡಿಗಾಗಿ ಶ್ರಮಿಸಲು ಸಿದ್ದರಿದ್ದೇನೆ ಎಂದು ಮುಹಮ್ಮದ್ ರಫೀಕ್ ತೋರಗಲ್ಲ ಹೇಳಿದರು.
ಕಾರ್ಯಕ್ರಮದಲ್ಲಿ ಶರಣಪ್ಪ ಚಳಗೇರಿ, ಎಫ್.ಎಸ್. ಕರಿದುರಗನವರ್, ಲಾಡಸಾಬ್ ದೊಡ್ಡಮನಿ, ಮಹಮ್ಮದಗೌಸ್ ಅಕ್ಕಿ, ಖಾಜೇಸಾಬ್ ಗೊಲಗೇರಿ, ರಮೇಶ್ ವ್ಯಾಪಾರಿ, ಖಾಜೇಸಾಬ್ ಡಾಲಾಯತ್, ರಮೇಶ್ ರಾಠೋಡ್, ಇರ್ಫಾನ್ ಮನಿಯಾರ್, ಇಬ್ರಾಹಿಂ ಅಕ್ಕಿ, ಪರಶುರಾಮ್ ಮಾಳೋತ್ತರ್, ರಾಜು ಸರಕಾವಸ್, ಮುತ್ತಯ್ಯ ಬಿನ್ನಾಳಮಠ, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಸದಸ್ಯರು, ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.
Post a Comment