ಬೆದರಿಸಿದರೇ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ಗಜೇಂದ್ರಗಡ : (Oct_23_2024)
ಕಳೆದ ನಾಲ್ಕೈದು ವರ್ಷದಿಂದ ಗಜೇಂದ್ರಗಡದಲ್ಲಿ ಕೆಲಸ ಮಾಡುತ್ತಿರುವ ಕೃಷ್ಣ ರಾಠೋಡ್ ಕಳೆದ ಎರಡು ವರ್ಷದ ಹಿಂದೆ ಕಿರಾ ನ್ಯೂಸ್ ಕನ್ನಡ ಪ್ರಾರಂಭಿಸಿದ್ದೇನೆ.
ಯಾವತ್ತಿಗೂ Down to earth ಎಂಬ ಮಾತನ್ನ ಅಣ್ಣ ವಿಜ್ಞಾನಿ ಡಾ. ಜಗನ್ನಾಥ್ ರಾಠೋಡ್ ಅವರಿಂದ ಕಲಿತಿದ್ದೇನೆ. ಗಜೇಂದ್ರಗಡ ಪುರಸಭೆಯ ಮಾಜಿ ಸದಸ್ಯರಾದ ಶ್ರೀಯುತ ಲಿಂಬಣ್ಣ ರಾಠೋಡ್ ಅವರ ಕಿರಿಯ ಪುತ್ರ.
ಕಳೆದ ಒಂದು ವಾರದ ಹಿಂದೆ ಸೈಟ್ ಕೊಡಿಸುವುದಾಗಿ ಪ್ರತಿಷ್ಠಿತರೊಬ್ಬರು ಕರೆ ಮಾಡಿ, ಮಾತನಾಡಿದ್ದರು. ಅವರು ರಾಜ್ಯದ ಒಂದು ರಾಜಕೀಯ ಪಕ್ಷದ ಪ್ರತಿನಿಧಿಯೂ ಹೌದು..
ಅವರ ಮಾತಿಗೆ ಓ...!! ಗೊಡುತ್ತ ಕರೆ ಮಾಡಿದಾಗ ಮಾತನಾಡಿದ ಮೇಲೆ, ಕಿರಾ ನ್ಯೂಸ್ ಕನ್ನಡದ ಸುದ್ದಿಯನ್ನ ( ಸಂಪಾದರಕರ ) ಗಮನಕ್ಕೆ ತರದೆ, ಬೇರೆ ಖಾಸಗಿ ಪತ್ರಿಕೆಯಲ್ಲಿ ಕಿರಾ ನ್ಯೂಸ್ ಕನ್ನಡದಿಂದ ಕದ್ದು, ಪ್ರಕಟಿಸಿರುತ್ತಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಲ್ಲೆಡೆಯಿಂದ ನಾಲ್ಕೈದು ಕರೆಗಳು ಬಂದಿವೆ. ಕಿರಾ ನ್ಯೂಸ್ ಕನ್ನಡದ ಹೆಸರು ಹೇಳಿ ಹಣ ಕೇಳುತ್ತಿದ್ದಾರೆ ಮತ್ತು ಕೃಷ್ಣ ರಾಠೋಡ್ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿವೆ.
ಹೀಗಾಗಿ, ಸರ್ವಜನಿಕರಲ್ಲಿ ಮನವಿ, ಕಿರಾ ನ್ಯೂಸ್ ಕನ್ನಡ ಮತ್ತು ಕೃಷ್ಣ ರಾಠೋಡ್ ಹೆಸರು ಹೇಳಿಕೊಂಡು ಎಲೆಡೆ ರೋಲ್ ಕಾಲ್ ಮಾಡುವುದು...? ಬೆದರಿಸುವುದು...? ಹೆದರಿಸುವುದು...? ಸೇರಿದಂತೆ ಇತರೆ ಯಾವುದೇ ಘಟನೆಗಳು ನಡೆದರೂ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಇಲ್ಲವೇ ಕಿರಾ ನ್ಯೂಸ್ ಕನ್ನಡದ ಸಂಪಾದಕರ ಗಮನಕ್ಕೆ ತನ್ನಿ ಎಂದು ಸಾರ್ವಜನಿಕರಲ್ಲಿ ಕಿರಾ ನ್ಯೂಸ್ ಕನ್ನಡದ ಸಂಪಾದಕರಾದ ಕೃಷ್ಣ ರಾಠೋಡ್ ಮನವಿ ಮಾಡುತ್ತೇವೆ...
Post a Comment