-->
Bookmark

Gajendragad :ಸಂಪಾದಕೀಯ : ಉತ್ಸಾಹ ಕಳೆದುಕೊಂಡು ಭ್ರಮನಿರಸನಗೊಂಡ ರೋಣ ಮತ ಕ್ಷೇತ್ರದ ಕಾರ್ಯಕರ್ತರು

Gajendragad :
ಸಂಪಾದಕೀಯ : ಉತ್ಸಾಹ ಕಳೆದುಕೊಂಡು ಭ್ರಮನಿರಸನಗೊಂಡ ರೋಣ ಮತ ಕ್ಷೇತ್ರದ ಕಾರ್ಯಕರ್ತರು 

ಗಜೇಂದ್ರಗಡ : (Oct_08_2024)

ಗದಗ ಜಿಲ್ಲೆಯಲ್ಲೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣದಲ್ಲಿ ಅಗ್ರಮಾನ್ಯ ಸ್ಥಾನ ಗಜೇಂದ್ರಗಡಕ್ಕಿದೆ. ರೋಣ ಮತ ಕ್ಷೇತ್ರದ ಭಾಗವಾಗಿರುವ ಗಜೇಂದ್ರಗಡ ವ್ಯಾಪಾರ ವಹಿವಾಟಿಗೆ ಹೆಸರುವಾಸಿಯಾಗಿರುವುದು ಎಲ್ಲರಿಗೂ ತಿಳಿದಿರುವುದೇ, ಆದ್ರೆ, ರಾಜಕೀಯವಾಗಿ ನೋಡುವುದಾದ್ರೆ, ಎರಡೇ ಪಕ್ಷ ಆಡಳಿತ ನಡೆಸಿವೆ.‌ 

ಒಂದು ಕಾಂಗ್ರೆಸ್ ಮತ್ತೊಂದು ಬಿಜೆಪಿ.‌ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತದಾರರಿಗೆ ಬಹಳಷ್ಟು ಆಶ್ವಾಸನೆ ಕೊಟ್ಟಿತು.‌ ಇದಕ್ಕೆ ಮರುಳಾಗಿ ಬೇರೆ ಬೇರೆ ಪಕ್ಷದಿಂದ ಕಾರ್ಯಕರ್ತರು, ಮುಖಂಡರು ತಂಡೊಪ ತಂಡವಾಗಿ ಕೈ ಪಕ್ಷಕ್ಕೆ ಸೇರ್ಪಡೆಯಾದ್ರು. ಅತ್ಯಂತ ಬಹುಮತದಿಂದ ಗೆದ್ದು, ಸರ್ಕಾರ ರಚಿಸಿದ ಕಾಂಗ್ರೆಸ್ ಪಕ್ಷ, ಕಾರ್ಯಕರ್ತರನ್ನ ಕಡೆಗಣಿಸುತ್ತಿದ್ದಾರೆ ಎಂಬ ಗುಸುಗುಸು ಶುರುವಾಗಿದೆ.

ಮೇಲ್ಮಟ್ಟದಲ್ಲಿರುವ ಕೆಲ‌ ನಾಯಕರು ಸ್ವಲ್ಪ ನಿರಾಳರಾಗಿದ್ದಾರೆ.‌ ಎರಡನೆ ಹಂತದ ನಾಯಕರು  ಸಮಸ್ಯೆಯ ಸುಳಿಯಲ್ಲಿದ್ದಾರೆ. ಇದರಲ್ಲಿ ಸ್ವ ಪಕ್ಷದರದ್ದು ಇದೆ ಪರಿಸ್ಥಿತಿ. ಪಕ್ಷ ಬಿಟ್ಟು ಬಂದವರಿಗಂತು ನುಂಗಲಾರದ ತುತ್ತಾಗಿದೆ ಎನ್ನುತ್ತಾರೆ ವಲಸಿಗರು. 

ಏನೋ Hope ಇಟ್ಕೊಂಡು ಬಂದಿದ್ವಿ, ಆದ್ರೆ, ಅದು ಹುಸಿಯಾಗಿದೆ. ಕಾರ್ಯಕರ್ತರು ತುಂಬಾ ಬೇಸರದಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಪಕ್ಷದಲ್ಲಿ ಕೆಲಸ ಮಾಡಿ ಕೊಡುತ್ತಾರೆ ಅಂತಾ ಪೋಸು ಕೊಟ್ಟು ಹೋದ್ರಿ, ಇವಾಗ ಅನುಭವಿಸಿ ಅಂತಾ ಪಕ್ಷ ಬಿಟ್ಟು ಬಂದವರಿಗೆ ಹಳೆ ಪಕ್ಷದ ಕಾರ್ಯಕರ್ತರು, ಮುಖಂಡರು ಗೇಲಿ ಮಾಡುತ್ತಾರೆ ಎಂಬ ಅಸಮಾಧಾನ ಹೊಗೆಯಾಡುತ್ತಿದೆ ಎಂದು ಕಾರ್ಯಕರ್ತರು ಅಲ್ಲಲ್ಲಿ ಚರ್ಚೆ ಮಾಡುತ್ತಿರುವುದು ಜಗಜ್ಜಾಹಿರವಾಗಿದೆ. 

ಇದೆಲ್ಲ ಬೆಳವಣಿಗೆ ಕಳೆದ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರಿದೆ ಎಂದೆ ಹೇಳಲಾಗುತ್ತಿದೆ. 

ಇನ್ನೊಂದೆ ವರ್ಷದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ‌‌. ಇಂದಲ್ಲ ನಾಳೆ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯೂ ಇದೆ. ಪಟ್ಟಣ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳು ಹತ್ತಿರ ಬರುತ್ತಿವೆ. ಆಗ ಕಾರ್ಯಕರ್ತರು ಏನು ಮಾಡಬಹುದು ಎಂಬ ಕುತೂಹಲ ಸಹ ಹೆಚ್ಚಾಗಿದೆ.
Post a Comment

Post a Comment