ಗಜೇಂದ್ರಗಡ : (Oct_28_2024)
ಮನೆಗೆ ತರಕಾರಿ ತರುವಾಗ ಸ್ವಲ್ಪ ಜಾಗೃತರಾಗಿರಿ. ಮಾರುಕಟ್ಟೆಯಲ್ಲಿರುವ ತರಕಾರಿಲಿ ಏನಾದ್ರೂ, ಇರಬಹುದು. ಯಾಕೆ ಈ ಮಾತು ಅಂದ್ರೆ, ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ರೈತ ಮಾರುಕಟ್ಟೆಗೆ ತಂದ ಹೀರೇಕಾಯಿ ಬುಟ್ಟಿಲಿ ಹಾವು ಕಾಣಿಸಿಕೊಂಡಿದೆ. ಇದರಿಂದ ಸ್ಥಳದಲ್ಲಿ ಕೆಲ ಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.
ಬೆಳ್ಳಂ ಬೆಳಗ್ಗೆ ಎದ್ದು, ತರಕಾರಿ ತರುವಾಗ ನಿಮಗೆ ತರಕಾರಿ ಜೊತೆಗೆ ಹಾವು ಸಿಗಬಹುದು. ಇನ್ಮೆಲೆ ತರಕಾರಿ ಖರೀದಿಸುವಾಗ ಗ್ರಾಹಕರು ಜಾಗೃತರಾಗಿರಿ. ಮಾರಾಟಗಾರರರು ಕೂಡ ಅಷ್ಟೆ. ತರಕಾರಿಯನ್ನ ಒಮ್ಮೆ ಸರಿಯಾಗಿ ಪರೀಕ್ಷಿಸಿಕೊಳ್ಳಿ. ವಿಷಕಾರಿ ಹಾವು ಇದ್ದಲ್ಲಿ, ನಿಮಗೆ ಜೀವಕ್ಕೆ ಹಾನಿಯಾಗಬಹುದು..
ಇದು ವಿಷಕಾರಿ ಹಾವು ಹೌದೋ ಅಲ್ಲವೋ, ಆದ್ರೆ, ಜೀವಕ್ಕೆ ಯಾವುದೇ ಹಾನಿಯಾಗಿಲ್ಲ...
ಹಾವು ಕಾಣಿಸಿಕೊಂಡಿದ್ದು, ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಹಾವಿನ ದೃಶ್ಯ ಸೆರೆಹಿಡಿದಿದ್ದಾರೆ.
Post a Comment