-->
Bookmark

Gajendragad : ಬೀದಿ ವ್ಯಾಪಾರಸ್ಥರಿಗೆ ನೈತಿಕ ಬೆಂಬಲ : ಸಂಜು ಜೋಷಿ

Gajendragad : ಬೀದಿ ವ್ಯಾಪಾರಸ್ಥರಿಗೆ ನೈತಿಕ ಬೆಂಬಲ : ಸಂಜು ಜೋಷಿ 

ಗಜೇಂದ್ರಗಡ : (Oct_22_10_2024)

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಹೊಟ್ಟೆ ಪಾಡಿಗಾಗಿ ದುಡಿಯುವ ಬೀದಿ ವ್ಯಾಪಾರಿಗಳನ್ನ ಬೀದಿಗೆ ತಳ್ಳಿರುವುದನ್ನ ಖಂಡಿಸಿ, ಅಕ್ಟೋಬರ್ 23 ಬುಧವಾರ ದಂದು ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಗೆ ನಮ್ಮ ನೈತಿಕ ಬೆಂಬಲ ಇದೆ ಎಂದು ವಿಶ್ವಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಮತ್ತು ಹೋರಾಟಗಾರ ಸಂಜು ಜೋಶಿ ಹೇಳಿದ್ದಾರೆ. ಮಾನವೀಯ ದೃಷ್ಟಿಯಿಂದ ಬೀದಿ ವ್ಯಾಪಾರಸ್ಥರಿಗೆ ಬೆಳಕಿನ ಹಬ್ಬದ ದೀಪಾವಳಿಗೆ ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗಬೇಕೆಂದು  ಜೋಶಿ ಹೇಳಿದ್ದಾರೆ. ಕಿರಾ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಅವರು, ನಾನು ಬೀದಿಬದಿ ವ್ಯಾಪಾರಸ್ಥ ಅಲ್ಲ. ನಾಳೆ ನಡೆಯಲಿರುವ ಪ್ರತಿಭಟನೆಯು ಬೀದಿಬದಿ ಮತ್ತು ಡಬಲ್ ರೋಡ್ ನ ವ್ಯಾಪಾರಸ್ಥರದ್ದು, ಹೀಗಾಗಿ, ನೈತಿಕ ಬೆಂಬಲ ಇದ್ದೆ ಇದೆ‌. ನಾವು ಅವ್ರಿಗೆ ಸಲಹೆ ಸೂಚನೆ ಕೊಟ್ಟಿದಿವಿ. ಸಾಲಸೋಲ ಮಾಡಿಕೊಂಡು ಸಾಯುವಂತಹ ಗಂಭೀರ ಪರಿಸ್ಥಿತಿಯಲ್ಲಿ ಬೀದಿ ವ್ಯಾಪಾರಸ್ಥರಿದ್ದಾರೆ. 

ಮಾರುಕಟ್ಟೆ ಸ್ಥಳಾಂತರ ಮಾಡುವ ಮೊದಲು ರೂಪುರೇಷೆ ಸಿದ್ದಪಡಿಸಿ, ಸ್ಥಳಾಂತರಿದ್ರೆ, ನಮ್ಮ ಅಭ್ಯಂತರ ವಿರುತ್ತಿರಲಿಲ್ಲ. ಒಮ್ಮಿದೊಮ್ಮೆಲೆ ಅವ್ರನ್ನ ಒಕ್ಕಲೆಬ್ಬಿಸಿ, ವ್ಯಾಪಾರ ವಹಿವಾಟು ಇಲ್ಲದಂತೆ ಮಾಡಿದ್ದಾರೆ. ಕೆಲವೊಬ್ಬರು ಆರಾಮಾಗಿದ್ರೆ, ಮತ್ತೆ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ. ಯಾವುದೇ ಸರ್ಕಾರ ಇದ್ದರೂ, ಮಾನವಿಯದೆ ದೃಷ್ಟಿಯಿಂದ ಸಮಸ್ಯೆ ಬಗೆ ಹರಿಸಬೇಕು. 

ಮೊನ್ನೆ ನಡೆದ ದಸರಾ ಹಬ್ಬದಲ್ಲಿ ಸಹ ಬೀದಿ ವ್ಯಾಪಾರಸ್ಥರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿತ್ತು. ಈಗ, ವರ್ಷದ ದೊಡ್ಡ ಹಬ್ಬ ದೀಪಾವಳಿಕ್ಕೆ ಗಜೇಂದ್ರಗಡದಲ್ಲಿ ವ್ಯಾಪಾರ ವಹಿವಾಡಿಗೆ ಹೆಸರುವಾಸಿಯಾಗಿತ್ತು‌. ಆದ್ರೀಗ, ಬೀದಿ ವ್ಯಾಪಾರಸ್ಥರಿಗೆ ಬೆಳಕಿನ ಹಬ್ಬಕ್ಕಾದ್ರೂ ಅನುಕೂಲ ಮಾಡಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು. 

ಸುತ್ತಮುತ್ತಲಿನ ಹಳ್ಳಿಯಿಂದ ಸಾವಿರಾರು ಜನರು ವ್ಯಾಪಾರ ವಹಿವಾಟಿಗೆ ಬರುತ್ತಿದ್ರು. ಕೇವಲ ಸ್ಥಳೀಯರಿಂದಲೇ ಮಾರುಕಟ್ಟೆ ವ್ಯಾಪಾರ, ವಹಿವಾಟು ನಡೆಯದು. ಬಡ ವ್ಯಾಪಾರಸ್ಥರಿಗೆ ಒಳ್ಳೆಯದಾಗಲಿ ಎಂಬುದು ನಮ್ಮ ಹಾರೈಕೆ ಅಷ್ಟೆ ಎಂದು ವಿಶ್ವಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಸಂಜು ಜೋಶಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
Post a Comment

Post a Comment