-->
Bookmark

Gajendragad : ತೆಲುಗು ಸಿನೆಮಾ "ರಂಗಸ್ವಾಮಿ"ಯಲ್ಲಿ ಗಜೇಂದ್ರಗಡದ ಪ್ರತಿಭೆ

Gajendragad : ತೆಲುಗು ಸಿನೆಮಾ "ರಂಗಸ್ವಾಮಿ"ಯಲ್ಲಿ ಗಜೇಂದ್ರಗಡದ ಪ್ರತಿಭೆ 
ಗಜೇಂದ್ರಗಡದ ಕೀರ್ತಿ ಹೆಚ್ಚಿಸಿದ ಕೃಷ್ಣವೇಣಿ ಏವೂರ್ 
ಗಜೇಂದ್ರಗಡ : (Oct_21_2024)
ಸಿನೆಮಾ ತಾರೆಯಾಗುವ ಕನಸು ಕಂಡಿದ್ದ 16 ರ ಪೋರಿ ಕೃಷ್ಣ ವೇಣಿಗೆ ತೆಲುಗುವಿನ ಸಾಮಾಜಿಕ ಕಳಕಳಿಯ ಚಿತ್ರ ರಂಗಸ್ವಾಮಿಯಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಎಸ್.ಎಸ್‌ಎಲ್.ಸಿ ಓದುತ್ತಿರುವ ಕೃಷ್ಣ ವೇಣಿ ಶ್ರೀ ಜಗದಂಬಾ ಶಾಲೆಯ ಮತ್ತು ಗಜೇಂದ್ರಗಡದ ಕೀರ್ತಿಯನ್ನ ಹೆಚ್ಚಿಸಿದ್ದಾರೆ.

ಚಿಕ್ಕ ಯವಸ್ಸಿನಲ್ಲಿ ನಟನಾ ಕೌಶಲ್ಯ ಬೆಳೆಸಿಕೊಂಡ ಸ್ಥಳೀಯ ಪ್ರತಿಭೆ ಕೃಷ್ಣವೇಣಿ, ಬಡ ಮಧ್ಯಮ ಕುಟುಂಬದಲ್ಲಿ ಜನಿಸಿದ್ದಾರೆ. ಕೃಷ್ಣ ವೇಣಿಗೆ ತಂದೆತಾಯಿ ಬೆಂಬಲಿಸುತ್ತಾರೆ ಎಂದು ತಮ್ಮ ಮನದಾಳವನ್ನ ಕಿರಾ ನ್ಯೂಸ್ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ. 

ತಂದೆ ಶಂಕರ್ ಏವೂರ್, ಮತ್ತು ತಾಯಿ ರೇಣುಕಾ ಏವೂರ್ ಮಗಳ ಸಾಧನೆಗೆ ಮೆಚ್ಚಿದ್ದಾರೆ. 

ರಂಗಸ್ವಾಮಿ ಸಿನೆಮಾ ಸಾಮಾನಿಕ ಕಳಕಳಿಯ ಮೇಲೆ ಅವಲಂಬಿತವಾಗಿದ್ದು, ಸಾಮಾಜಿಕ ಜವಾಬ್ದಾರಿಯನ್ನ ತೋರಿಸುತ್ತದೆ ಎನ್ನುತ್ತಾರೆ ಚಿತ್ರ ತಂಡ... ಇದೆ ಅಕ್ಟೋಬರ್ 25 ರಂದು ಶುಕ್ರವಾರ ಚಿತ್ರ ತೆರೆಕಾಣಲಿದ್ದು, ಎಲ್ಲರೂ ಚಿತ್ರ ನೋಡಿ ಶುಭ ಹಾರೈಸಿ ಎನ್ನುತ್ತಾರೆ ಕಲಾವಿದರು.‌

ಈ ಮಧ್ಯೆ, ಕೃಷ್ಣ ವೇಣಿ ಸಹ ನನಗೆ ಅವಕಾಶಕೊಟ್ಟ ಚಿತ್ರತಂಡಕ್ಕೆ ಕಿರಾ ನ್ಯೂಸ್ ಕನ್ನಡ ಬಳಗದಿಂದ ಧನ್ಯವಾದ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ನನಗೆ ಸಿನಿ ತಾರೆಯಾಗುವ ಮಹದಾಸೆ ಇದೆ ಎಂದು ಕೃಷ್ಣ ತಮ್ಮ ಮನದಾಳ ಹಂಚಿಕೊಂಡಿದ್ದಾರೆ. 

ಸ್ಥಳೀಯ ಕಲಾವಿದರು ಎತ್ತೆತ್ತರಕ್ಕೆ ಬೆಳೆಯಲಿ ಗಜೇಂದ್ರಗಡದ ಕೀರ್ತಿ "ರಾಯಲ"ಸೀಮೆಯಲ್ಲೂ ಪಸರಿಸಲಿ ಎಂಬುದು ನಮ್ಮ ಆಶಯ...
Post a Comment

Post a Comment