-->
Bookmark

Gajendragad : ಕೇಶವ ರಾಯಬಾಗಿಯಿಂದ ಸದ್ದಿಲ್ಲದೆ ಸಮಾಜ ಸೇವೆ

Gajendragad : ಕೇಶವ ರಾಯಬಾಗಿಯಿಂದ ಸದ್ದಿಲ್ಲದೆ ಸಮಾಜ ಸೇವೆ 
ಗಜೇಂದ್ರಗಡ : (Oct_21_2024)
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಕೇಶವ ರಾಯಬಾಗಿ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ. ತಂದೆ ರಾಘವೇಂದ್ರ ರಾಯಬಾಗಿ ಅವರು ಹಾಕಿಕೊಟ್ಟ ಮರ್ಗದಲ್ಲೆ ಸಾಗುತ್ತಿದ್ದಾರೆ. ಮೊದಲಿನಿಂದಲೂ ಗೋವುಗಳ ಮೇಲೆ ಅಪಾರ ಆಸಕ್ತಿ ಅಭಿಮಾನ ಕೇಶವ ರಾಯಬಾಗಿ ಅವರದ್ದು. ಗದಗ ಜಿಲ್ಲೆಯಲ್ಲಿ ರೈತಾಪಿ ವರ್ಗ ಹೆಚ್ಚಾಗಿದ್ದು, ಬಸವಣ್ಣನ ಜಯಂತಿಯಂದು ಬಸುಜಯಂತಿ ಎಂದು ತಿಳಿದು ಗೋವುಗಳಿಗೆ ಪೂಜಿಸುವುದನ್ನ ನೋಡಿ ಬೆಳೆದ ಕೇಶವ ರಾಯಬಾಗಿ ಅವರು, ಗೋವುಗಳ ರಕ್ಷಕ ಎಂದ್ರು ತಪ್ಪಲ್ಲ. 
ಗಜೇಂದ್ರಗಡದಲ್ಲಿ ಓಡಾಡಿಕೊಂಡಿದ್ದ ಬೀದಿ ದನಗಳು, ರೋಗಕ್ಕೆ ತುತ್ತಾಗುವುದನ್ನ ನೋಡಿ, ಮನ ಕಲುಕಿತು. ಮೂಕ ಪ್ರಾಣಿಗಳು ರೋದನ ಕಂಡು ಮರಗಿದ ಕೇಶವ ರಾಯಬಾಗಿ ಅವರು, ಅವುಗಳ ರಕ್ಷಣೆಗೆ ಧಾವಿಸಿದರು. 
ಬೀದಿದನಗಳು ಗಾಯಗೊಂಡು, ಚರ್ಮರೋಗ ತಗುಲಿ, ಕಾಲು ಬೇನೆ ರೋಗ ತಗುಲಿ ಪರದಾಡುತ್ತಿದ್ದಾಗ ಆರೋಗ್ಯ ಇಲಾಖೆಗೆ ಸಂಪರ್ಕಿಸಿ, ಮಾತನಾಡಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ದನಕರುಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ ಕೇಶವ ರಾಯಬಾಗಿ. 

ಕೆಲಸದ ಸಮಯದಲ್ಲೂ ಬಿಡುವು‌ ಮಾಡಿಕೊಂಡು ಸದ್ದಿಲ್ಲದೇ, ಸಮಾಜ ಸೇವೆಯಲ್ಲಿ ತೊಡಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. 

ಯುವಕರೊಂದಿಗೆ ತೆರಳಿ ಹಗಲು ರಾತ್ರಿ ಎನ್ನದೆ, ಬೀದಿಗಳಲ್ಲಿ ಸುತ್ತಿ ಗೋವು ರಕ್ಷಣೆಗೆ ಮಾಡುತ್ತಿದ್ದಾರೆ. ಎಸ್.ಎಸ್.ಕೆ ಸಮಾಜದ ಯುವಕರು, ಪುರಸಭೆ ಗಜೇಂದ್ರಗಡ, ಪಶು ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ, ಅವರೊಂದಿಗೆ ಮಧ್ಯ ರಾತ್ರಿ ಎರಡು ಗಂಟೆ ವರೆಗೆ ಗೋವುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡಿದ್ದಾರೆ. 

ಕೇಶವ ರಾಯವಾಗಿ ಕೆಲಸಕ್ಕೆ ಎಸ್.ಎಸ್.ಕೆ ಸಮಾಜ ಮತ್ತು ಗಜೇಂದ್ರಗಡದ ಯುವಕರು ಶ್ಲಾಘಿಸಿದ್ದಾರೆ. ಕೇಶವ ರಾಯಬಾಗಿ ಅವರ ಕಾರ್ಯ ಹೀಗೆ ಮುಂದುವರಿಯಲಿ ಎಂಬ ಆಶಯ ನಮ್ಮದಾಗಿದೆ...
Post a Comment

Post a Comment