ಬೆಂಗಳೂರ : (Oct_10_2024)
ಓಂ ಸಾಯಿ ಸಿನಿಮಾಸ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ‘ಸುಮಾ ದಿ ಫ್ಲವರ್’ ವಿಶ್ವ ವಿಖ್ಯಾತ ಮೈಸೂರು ದಸರಾ ಚಲನಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ.
ಈ ಹಿಂದೆ ಕನ್ನಡದಲ್ಲಿ ‘ಶ್ರೀ ಕಬ್ಬಾಳಮ್ಮನ ಮಹಿಮೆ’, ‘ಮನೆ’, ‘ಬ್ಯಾಂಕ್ ಲೋನ್’, ‘ಸುಳಿ’ ಸೇರಿದಂತೆ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ರಶ್ಮಿ ಎಸ್. ‘ಸುಮಾ ದಿ ಫ್ಲವರ್’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಮೊದಲನೆ ಬಾರಿಗೆ ಮಾನ್ಯತಾ ನಾಯ್ಡು ನಾಯಕಿಯಾಗಿ ಕಾಣಿಸಿಕೊಂಡಿದ್ದು, ಮೈಸೂರು ಮೂಲದ ಪ್ರದೀಪ್ ಗೌಡ ನಾಯಕನಾಗಿ, ಉಳಿದಂತೆ ಜೋ ಸೈಮನ್, ಬಲರಾಜ್ ವಾಡಿ, ವಿಜಯಲಕ್ಷ್ಮೀ ಉಪಾಧ್ಯಾಯ, ಮುರಳೀಧರ್ ಡಿ. ಆರ್, ಕಾವ್ಯ ಪ್ರಕಾಶ್, ಪವಿತ್ರ, ಅವಿನಾಶ ಗಂಜಿಹಾಳ, ಶಿವಕುಮಾರ್ ಆರಾಧ್ಯ , ಹರಿಹರನ್ ಬಿ. ಪಿ,ಸಿದ್ದು ಮಂಡ್ಯ, ವೀರೇಂದ್ರ ಬೆಳ್ಳಿಚುಕ್ಕಿ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿ ಖ್ಯಾತಿಯ ಭೈರವಿ,ಮಂಜುಳಾ ವಿಶೇಷ ಅತಿಥಿ ಪಾತ್ರದಲ್ಲಿ ಡಾ.ವಿ.ನಾಗೇಂದ್ರ ಪ್ರಸಾದ್ , ವೈದ್ಯೆಯಾದ ಡಾ ಶ್ವೇತ (ಗೈನಾಕಲಜಿಸ್ಟ್) ಅಭಿನಯಿಸಿದ್ದಾರೆ.
೧೫ ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಮಂಡ್ಯ, ಮದ್ದೂರು, ಆಲಭುಜನಹಳ್ಳಿ, ಕೆ.ಎಂ.ದೊಡ್ಡಿ, ನಗರಕೆರೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ‘ಸುಮಾ ದಿ ಫ್ಲವರ್’ ’ಸಿನಿಮಾಕ್ಕೆ ದೇವೂ,ಮತ್ತು ಗಗನ್ ಆರ್ ಛಾಯಾಗ್ರಹಣ, ಮುತ್ತುರಾಜ್ ಟಿ. ಸಂಕಲನವಿದೆ. ಹಾಡುಗಳಿಗೆ ವೇದಾಂತ್ ಅತಿಶಯ್ ಜೈನ್ ಸಂಗೀತವಿದ್ದು, ಸತೀಶ್ ಜೋಶಿ ಹಾವೇರಿ ಮತ್ತು ಪ್ರದೀಪ್ ಗೌಡ ಅವರ ಸಾಹಿತ್ಯವಿದೆ. ವೇದಾಂತ್ ಜೈನ್ , ಯೋಗಶ್ರೀ ಹಾಡುಗಳಿಗೆ ಧ್ವನಿನೀಡಿದ್ದು, ಪತ್ರಿಕಾಸಂಪರ್ಕ ಕಾರ್ತಿಕ್ ಸುಧನ್, ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ ಅವರದಿದೆ.ಸಿನಿಮಾಕ್ಕೆ ರಂಗಸ್ವಾಮಿ ಟಿ (ರವಿ) ಸಹ ನಿರ್ಮಾಪಕರಾಗಿದ್ದಾರೆ. ಈಗಷ್ಟೇ ಸಿಂಗಾಪೂರ ಲಾಯನ್ ಇಂಟರ್ ನ್ಯಾಷನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಏಳು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಇದರ ಜೊತೆಗೆ ಈಗ ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಇದೆ ಅಕ್ಟೋಬರ್ ೧೦ ರಂದು ಮೈಸೂರಿನ ಡಿಆರ್ ಸಿ ಯಲ್ಲಿ ಮುಂ.೧೦ಕ್ಕೆ ಪ್ರದರ್ಶನಗೊಳ್ಳುತ್ತಿದ್ದುದು ಚಿತ್ರತಂಡಕ್ಕೆ ಖುಷಿ ತಂದಿದೆ ಎಂದು ನಿರ್ದೇಶಕಿ ರಶ್ಮಿ .ಎಸ್ ಹೇಳಿದ್ದಾರೆ.
-ವರದಿ
ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬
Post a Comment