ಕಾಲು ಬೇನೆ, ಬಾಯಿ ಬೇನೆ ರೋಗ, ಚರ್ಮಗಂಟು ರೋಗ ಬಾರದಿರಲೆಂದು ಗಜೇಂದ್ರಗಡ ಪಟ್ಟಣದಲ್ಲಿ ದನಕರುಗಳಿಗೆ ವ್ಯಾಕ್ಸಿನೇಷನ್ ಹಾಕಲಾಯ್ತು.
ಮಳೆ ಹೆಚ್ಚಾಗಿದ್ದರಿಂದ ದನ ಕರುಗಳಿಗೆ ಈ ರೋಗ ಹರಡುತ್ತದೆ. ಹೀಗಾಗಿ, ಪಶುವೈದ್ಯಾಧಿಕಾರಿ ಶ್ರೀಮತಿ ಜಯಶ್ರೀ ಪಾಟೀಲ್ ನೇತೃತ್ವದ ತಂಡ ರಾತ್ರಿ ಮಳೆಯಲ್ಲೆ ಬೀದಿ ದನಗಳಿಗೆ ಲಸಿಕೆ ಹಾಕಿದ್ದಾರೆ.
ಈ ಹಿಂದೆಯೂ ಸಹ ಸಾಕು ನಾಯಿಗಳಿಗೆ ಮತ್ತು ಬೀದಿನಾಯಿಗಳಿಗೆ ಲಸಿಕೆ ಹಾಕಲಾಗಿತ್ತು.
ಬೀದಿ ದನ ಸಾರ್ವಜನಿಕವಾಗಿ ಎಲ್ಲೆಂದೆಲ್ಲಿ ಓಡಾಡಿಕೊಂಡಿರುವುದರಿಂದ ಬೇರೆ ದನಕರು ಮತ್ತು ಇತರರಿಗೂ ಹರಡದಂತೆ ತಡೆಹಿಡಿಯಲು ಸಹಕಾರಿಯಾಗಿದೆ ಎನ್ನುತ್ತಾರೆ ಪಶುವೈದ್ಯಾಧಿಕಾರಿ, ಶ್ರೀಮತಿ ಡಾ. ಜಯಶ್ರೀ ಪಾಟೀಲ್.
ಇನ್ನೂ, ಮನೆಯಲ್ಲಿ ದನಕರು, ನಾಯಿ, ಬೆಕ್ಕು ಸಾಕಿದ್ದರೇ, ಅವುಗಳನ್ನು ಸಹ ಪಶು ಆಸ್ಪತ್ರೆಗೆ ಕರೆತನ್ನಿ, ಪರೀಕ್ಷೆ ನಡೆಸಿ, ಚಿಕಿತ್ಸೆ ಕೊಡಲಗುತ್ತದೆ ಎಂದು ಶ್ರೀಮತಿ ಡಾ. ಜಯಶ್ರೀ ಪಾಟೀಲ್ ಮಾಹಿತಿ ನೀಡಿದ್ದಾರೆ.
Post a Comment