ಗಜೇಂದ್ರಗಡ : (Oct_14_2024)
ಮಂಪರು ನಿದ್ದೆಯಲ್ಲಿ ಮಲಗಿದ ರಜ್ಯ ಸರ್ಕಾರ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಕ್ತುಮಸಾಬ್ ಮುಧೋಳ್ ಹೇಳಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ ಮೂರು ತಿಂಗಳಿಂದ ಗೌರವಧನ ಬಿಡುಗಡೆಯಾಗಿಲ್ಲ. ಎಪ್ರಿಲ್ ತಿಂಗಳಿನಿಂದ ಇಲ್ಲಿಯ ವರೆಗೂ ಗ್ಯಾಸ್ ಸಿಲಿಂಡರ್ ಗೆ ಹಣ ನೀಡಿಲ್ಲ. ಅಡುಗೆ ಮಾಡಲು ಬಳಸುವ ತರಕಾರಿಗೆ ದುಡ್ಡು ಕೊಟ್ಟಿಲ್ಲ. ಅಂಗನವಾಡಿಯಲ್ಲಿ ಕೆಲಸ ಮಾಡುವವರೇನು ಶ್ರೀಮಂತ ಕುಟುಂಬದವರಾ. ಬಡ ಅಂಗನವಾಡಿ ನೌಕರರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ. ಇದೆಲ್ಲವನ್ನ ನೋಡಿಯೂ ನೋಡದಂತೆ ಕುಳಿತು ಮೋಜು ನೊಡುತ್ತಿದೆ ಸರ್ಕಾರ ಎಂದು ಮಕ್ತುಮಸಾಬ್ ಮುದೋಳ್ ಗಂಭೀರ ಆರೋಪ ಮಾಡಿದರು.
ಇನ್ನೂ ಎಲ್ಲರೂ ಹಬ್ಬವನ್ನ ಆಚರಿಸಿದರೇ, ಅಂಗನವಾಡಿ ನೌಕರರಿಗೆ ಸಹಾಯಧನ ಬಿಡುಗಡೆ ಮಾಡಿಲ್ಲ. ಸರ್ಕಾರ ನಿದ್ದೆ ಮಾಡುತ್ತಿದೆ. ಮಂಪರು ನಿದ್ದೆಗೆ ಸರ್ಕಾರ ಜಾರಿದೆ ಎಂದು ಮಕ್ತುಮಸಾಬ್ ಮುಧೋಳ್ ಖಾರವಾಗಿಯೇ ಮಾತನಾಡಿದರು.
ಇತ್ತ, ಅಂಗನವಾಡಿ ಬಾಡಿಗೆ ಇರುವ ಕಟ್ಟಡದ ಹಣವನ್ನು ಇಲ್ಲಿಯ ವರೆಗೆ ಬಿಡುಗಡೆ ಮಾಡಿಲ್ಲ. ಕರೆಂಟ್ ಬಿಲ್ ಸಹ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿದರು.
ಮುಂಬರುವ ದಿನಗಳಲ್ಲಿ ಈ ಬಗ್ಗೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಕ್ತುಮಸಾಬ್ ಮುಧೋಳ್ ಸರ್ಕಾರಕ್ಕೆ ಎಚ್ಚರಿಗೆ ಸಂದೇಶ ರವಾನಿಸಿದರು.
Post a Comment