ಗಜೇಂದ್ರಗಡ : (Oct_02_2024)
ಗಾಂಧಿಜಿ ಅಂದ್ರೆ, ಸರಳತೆ, ಗಾಂಧಿ ಜಿ ಅಂದ್ರೆ, ಶಕ್ತಿ, ಗಾಂಧಿ ಜಿ ಅಂದ್ರೆ ಸಾಧನ ಎಂದು ಗಜೇಂದ್ರಗಡದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಲ್ ರಮೇಶ್ ಮರಾಠೆ ಹೇಳಿದರು. ಕಾಲೇಜಿನಲ್ಲಿ ನಡೆದ ಮಹಾತ್ಮಾ ಗಾಂಧಿ ಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ಮಾತನಾಡಿದರು. ಈ ಇಬ್ಬರು ಮಹಾನ್ ನಾಯಕರ ಜೀವನ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಓದು ಬಹಳ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬಸಪ್ಪ J, ರಮೇಶ್ ರಾಯ್ಕರ್, ಯಲ್ಲಪ್ಪ ಕಟ್ಟಿ ಶಿಲ್ಪಾ ದಿವಾನದ್, ಬಸ್ಸಮ್ಮ ತಳವಾರ್, ಆಸೀಫ್ ಮೊಮೀನ್, ಅಲಿ ದಿಂಡವಾಡ್, ಕಳಕಪ್ಪ ರಾಠೋಡ್ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Post a Comment