ಗಜೇಂದ್ರಗಡ : (Oct_01_2024)
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಜೆಡಿಎಸ್ ಘಟಕದಿಂದ ಮನವಿ ಸಲ್ಲಿಸಲಾಯ್ತು. ಮಾಜಿ ಸಿಎಂ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಅವಹೇಳನ ಕಾರಿ ಪದ ಬಳಸಿದ ಐ.ಪಿ.ಎಸ್ ಅಧಿಕಾರಿ ಚಂದ್ರಶೇಖರ್ ಅವರನ್ನ ಅಮಾನತು ಮಾಡಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೈ ಮುಧೋಳ್ ತಹಶಿಲ್ದಾರ್ ಮೂಲಕ ಮನವಿ ಸಲ್ಲಿಸಿದರು. ತಹಶಿಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿಪಕ್ಷವನ್ನ ಹಂತ ಹಂತವಾಗಿ ಮುಗಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಅಧಿಕಾರಿಗಳನ್ನ ಮುಂದೆ ಬಿಟ್ಟು ಸರ್ಕಾರ ನಮ್ಮದೇನು ಹಸ್ತಕ್ಷೇಪ ವಿಲ್ಲ ಎಂದು ಹೇಳುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಎಂ.ವೈ ಮುಧೋಳ್ ದೂರಿದರು.
ಇಂತಹ ಅಧಿಕಾರಿಗಳನ್ನ ಸರ್ಕಾರ ಕೂಡಲೆ ಅಮಾನತು ಮಾಡಬೇಕು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ವೈ. ಮುಧೋಳ್, ಗಜೇಂದ್ರಗಡ ತಾಲ್ಲೂಕಾಧ್ಯಕ್ಷರ ಸಂಗಪ್ಪ ಯಲಬುಣಚಿ, ಗಜೇಂದ್ರಗಡ ತಾಲ್ಲೂಕ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಾದಶಾ ಎಂ ಬಾಗವಾನ್, ಮುಖಂಡರಾದ ಕನಕಪ್ಪ ಛಲವಾದಿ, ರಾಜು ಪವಾರ್, ಪಾಂಡು ಬೋಸ್ಲೆ, ಕಳಕಪ್ಪ ಹೊಸಂಗಡಿ, ಸಂಗಪ್ಪ ಪತಂಗರಾಯ, ಹುಸೇನಸಾಬ್ ಮ ಸಾಂಗ್ಲೀಕಾರ್, ಪ್ರಭು ಹಿರೇಮಠ, ಶಂಶುದ್ದೀನ್ ಕಟಂಬ್ಲಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Post a Comment