Gajendragad : ಉದ್ಯೋಗ ತರಬೇತಿ, ಪಾಲ್ಗೊಂಡಿದ್ದ 14 ವಿದ್ಯಾರ್ಥಿಗಳಿಗೆ ಕೆಲಸ : ಸಂತಸ ಹಂಚಿಕೊಂಡ ಬಿ.ಎಸ್.ಎಸ್ ಕಾಲೇಜ್ ಪ್ರಿನ್ಸಿಪಲ್
ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗದ ಸುವರ್ಣವಕಾಶ ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಮತ್ತು ದೇಶಪಾಂಡೆ ಪ್ರತಿಷ್ಠಾನ, ಹುಬ್ಬಳ್ಳಿ ಇವರ ಜಂಟಿ ಆಶ್ರಯದಲ್ಲಿ ನಡೆದ ಕೌಶಲ್ಯವರ್ಧನೆ ತರಬೇತಿಯಡಿಯಲ್ಲಿ ಪಾಲ್ಗೊಂಡಿದ್ದ ಪ್ರಥಮ ತಂಡದ ಎಲ್ಲಾ 14 ವಿದ್ಯಾರ್ಥಿಗಳಿಗೂ ಬೆಂಗಳೂರಿನ ವಿವಿಧ ಕಂಪೆನಿಗಳಲ್ಲಿ ಕೆಲಸಗಳು ದೊರೆತಿವೆ. ಆರಂಭಿಕ ವೇತನ ವಾರ್ಷಿಕ 3 ಲಕ್ಷಗಳಿಂದ 10 ಲಕ್ಷಗಳವರೆಗಿನ ವೇತನಶ್ರೇಣಿಗಳಲ್ಲಿ ವಿದ್ಯಾರ್ಥಿಗಳು ನೇಮಕಗೊಂಡಿದ್ದಾರೆ. ಅವರಲ್ಲಿ ವಾಣಿಜ್ಯ ವಿಭಾಗದ ಕುಮಾರಿ ಕವಿತಾ ನಾಯಕ್ ವಾರ್ಷಿಕ 10 ಲಕ್ಷ ರೂಪಾಯಿಗಳ ವೇತನ ಶ್ರೇಣಿಗೆ ಆಯ್ಕೆಯಾಗಿರುವುದು ಸಂತೋಷದ ವಿಷಯವಾಗಿದೆ.
ಒಂದು ವರ್ಷ ಅವಧಿಯ ಈ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಗಣಕಯಂತ್ರ, ಆಂಗ್ಲಭಾಷಾ ಕೌಶಲ್ಯ, ಮೌಖಿಕ ಮತ್ತು ಲಿಖಿತ ಸಂವಹನ ಕೌಶಲ್ಯ, ಅಂತರ್ಜಾಲದ ಕಲಿಕೆ, ಸಮಾಜ ಸೇವೆ, ನಾಯಕತ್ವದ ಗುಣಗಳು – ಹೀಗೆ ಖಾಸಗಿ ಮತ್ತು ಸರ್ಕಾರಿ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಲು ಬೇಕಾಗುವ ವಿವಿಧ ಕೌಶಲ್ಯಗಳನ್ನು ಕಲಿಸಲಾಗುವುದು. ಪದವಿಯ ನಂತರ ಮುಂದೇನು ಎಂಬ ಪ್ರಶ್ನೆಗೆ ಉತ್ತರವಾಗಿ ಈ ತರಬೇತಿ ರೂಪುಗೊಂಡಿದೆ ಎಂಬ ಅಭಿಪ್ರಾಯವನ್ನು ಸಂದರ್ಶನದ ವೇಳೆಯಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಮಹೇಂದ್ರ ಜಿ ಅವರು ವ್ಯಕ್ತಪಡಿಸಿದರು. ಉದ್ಯೋಗ ಮಾಹಿತಿ ಘಟಕದ ಸಂಚಾಲಕರಾದ ಸಿದ್ದೇಶ ಕೆ ಮತ್ತು ತರಬೇತುದಾರರಾದ ಕುಮಾರಿ ಸ್ನೇಹ ಅವರು ಈ ಸಂದರ್ಭದಲ್ಲಿ ತಮ್ಮ ಸಂತಸ ಹಂಚಿಕೊಂಡರು.
Post a Comment