-->
Bookmark

Karwar : ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಿದೆ : ವಿಜ್ಞಾನಿ ಡಾ. ಜೆ.ಎಲ್ ರಾಠೋಡ್

Karwar : ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಿದೆ : ವಿಜ್ಞಾನಿ ಡಾ. ಜೆ.ಎಲ್ ರಾಠೋಡ್ 
ಕಾರವಾರ :(Sept_21_09_2024)

ಕಾರವಾರ ಕಡಲ ಜೀವ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ. ಜಗನ್ನಾಥ್ ಎಲ್ ರಾಠೋಡ್ ಮಾತನಾಡಿ, ಭಾರತದ ಸುಮಾರು ೩೨ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯುವ ಕುರಿತು ತಿಳಿಸಿದರು‌ ೧೪ ಮಿಲಿಯನ್ ಮೆಟ್ರಿಕ್ ಟನ್ ಕಸವೂ ಸಮುದ್ರದ ತಳದಲ್ಲಿ ಸೇರಿದೆ ಹಾಗೂ 5.25 ಟ್ರಿಲಿಯನ್ ದೊಡ್ಡ ಮತ್ತು ಮೈಕ್ರೊ ಪ್ಲಾಸ್ಟಿಕ್ ನೀರಲ್ಲಿ ತೇಲುತ್ತದೆ ಎಂದು ತಿಳಿಸಿದರು. ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ, ಮಾತನಾಡಿದರು. 
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಅಂತಾರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ 475 ಜನರು ಭಾಗವಹಿಸಿದ್ದರು. 
ದಿನದಂದು 508 kg ತ್ಯಾಜ್ಯ ಸಂಗ್ರಹಿಸಿದು. ಪ್ಲಾಸ್ಟಿಕ್ 416 kg, ಮೀನಿನ ಬಲೆಗಳು ಹಾಗೂ ವಿವಿಧ ರೀತಿಯ ಪ್ಲಾಸ್ಟಿಕ್ ವಸ್ತುಗಳು, ಗ್ಲಾಸ್ ತ್ಯಾಜ್ಯ, ಪಾದರಕ್ಷೆಗಳು, ಬಟ್ಟೆ, ಪೇಪರಗಳು ಸೇರಿದಂತೆ ಅನೇಕ ವಸ್ತುಗಳು ಸಿಕ್ಕಿವೆ ಎಂದು ಡಾ. ಜೆ.ಎಲ್. ರಾಠೋಡ್ ಮಾಹಿತಿ ನೀಡಿದರು. 
ಇನ್ನೂ, ಕಾರ್ಯಕ್ರಮವೂ ಭಾರತ ಸರ್ಕಾರ ಭೂ ವಿಜ್ಞಾನ ಇಲಾಖೆ ದೆಹಲಿ ಹಾಗೂ ನ್ಯಾಷನಲ್ ಸೆಂಟರ್‌ ಫಾರ್ ಕೊಸ್ಟಲ್ ರಿಸರ್ಚ್ ಚೆನ್ನೈ ಕಾರ್ಯಕ್ರಮ ಆಯೋಜಿಸಿದೆ ಎಂದು ಡಾ. ಜೆ.ಎಲ್ ರಾಠೋಡ್ ಹೇಳಿದರು. ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಿದೆ ಎಂದು ಪರಿಸರ ಕಾಳಜಿ ಬಗ್ಗೆ ಡಾ. ಜೆ.ಎಲ್ ರಾಠೋಡ್ ಸಂದೇಶ ಸಾರಿದರು.‌
ಇದೇವೇಳೆ, ಉತ್ತರ ಕನ್ನಡ ಜಿಲ್ಲಾಧಿಕಾರಿ ಶ್ರೀಮತಿ ಲಕ್ಷ್ಮೀಪ್ರಿಯಾ ಕೆ ಕಾರ್ಯಕ್ರಮ ಉದ್ಘಾಟಿಸಿ, ಸ್ವಚ್ಛತಾ ಕಾರ್ಯದ ಮಹತ್ವ ವಿವರಿಸಿದರು. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಕೈಗೊಳ್ಳುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. 
ಇನ್ನೂ, ನಿವೃತ್ತ ಐ.ಜಿ ಎಸ್ ವಿ ಬಾಡಕರ್ ಮಾತನಾಡಿ, ಪರಿಸರದ ಸಮತೋಲನದಲ್ಲಿ ಪ್ರತಿ ಜೀವಿಯ ಪಾತ್ರದ ಕುರಿತು ತಿಳಿಸಿದರು. 
ಈ ಕಾರ್ಯಕ್ರಮವನ್ನ ಇಂಡಿಯನ್ ಕೋಸ್ಟಗಾರ್ಡ್ ಕಾರವಾರ, ಕವಿವಿ ಸ್ನಾತಕೋತ್ತರ ಕೇಂದ್ರ ಕಾರವಾರ, ಅರಣ್ಯ ಇಲಾಖೆ ಮತ್ತು ಉತ್ತರ ಕನ್ನಡ ಜಿಲ್ಲಾಡಳಿತ, ಕೊಸ್ಟಲ್ ಸೆಕ್ಯುರಿಟಿ ಪೊಲೀಸ್ ಕಾರವಾರ, ಮೀನುಗಾರಿಕಾ ಇಲಾಖೆ ಸಹಯೋಗದಲ್ಲಿ ನಡೆಯಿತು.
1 comment

1 comment

  • M a v
    M a v
    21 September 2024 at 05:07
    Super
    Reply