-->
Bookmark

Gajendragad :‘ವಿಜಯಪತಾಕೆ’ ಡಬ್ಬಿಂಗ್ ಮುಕ್ತಾಯ

Gajendragad :‘ವಿಜಯಪತಾಕೆ’ ಡಬ್ಬಿಂಗ್ ಮುಕ್ತಾಯ
ಗಜೇಂದ್ರಗಡ : (Sept_30_09_2024)
ಶ್ರೀ ಷಣ್ಮುಖಪ್ಪ. ಆರ್.ಎಲ್ ಅವರ ಶ್ರೀ ಬೊಮ್ಮಸಾಗರ ದುರ್ಗಾದೇವಿ ಪ್ರೊಡಕ್ಷನ್ ಚಿತ್ರನಿರ್ಮಾಣ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ವಿಜಯಪತಾಕೆ’ ಕನ್ನಡ ಚಲನಚಿತ್ರದ ಡಬ್ಬಿಂಗ್ ಕಾರ್ಯ ಮುಕ್ತಾಯವಾಗಿದೆ.
    ಬೆಂಗಳೂರಿನ ಸಿಕೆ ಸ್ಟುಡಿಯೋದಲ್ಲಿ  ಪೋಸ್ಟ್ ಪ್ರೊಡಕ್ಷನ್ ಎಲ್ಲ ಕಾರ್ಯಗಳನ್ನು ಮುಗಿಸಿದ್ದು ಇದೀಗ ಸೆನ್ಸಾರ್‌ಗೆ ಹೊರಟಿದೆ. ಗಜೇಂದ್ರಗಡದ ಆರ್.ಶೈನ್ ನಾಯಕನಾಗಿ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ‘ವಿಜಯಪಾತಕೆ’ ಚಿತ್ರವನ್ನು ಉತ್ತರ ಕರ್ನಾಟಕದವರೇ ನಿರ್ಮಿಸುತ್ತಿರುವದು ಹೆಮ್ಮೆಯ ಸಂಗತಿ.
 ಧಾರವಾಡ ಜಿಲ್ಲೆಯ ನಿಗದಿ, ಬೆಣಕನಕಟ್ಟೆ, ಮುರಕಟ್ಟಿ ಮತ್ತು ಹಳಿಯಾಳ, ದಾಂಡೇಲಿ, ಗದಗ ಜಿಲ್ಲೆಯ ಗಜೇಂದ್ರಗಡ  ,ಭೈರಾಪೂರ ಸುತ್ತಮುತ್ತ, ಕೊಪ್ಪಳ ಜಿಲ್ಲೆಯ ಹನುಮಸಾಗರ, ಚಂದಾಲಿಂಗೇಶ್ವರ ದೇವಸ್ಥಾನ, ಮತ್ತು ಇಲಕಲ್ ತಾಲೂಕಿನ ಸುಕ್ಷೇತ್ರ ಸಿದ್ಧನಕೊಳ್ಳ, ಕರಾವಳಿ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು ನಿರ್ದೇಶಕ ಶೈನ್ ತಿಳಿಸಿದ್ದಾರೆ.   
       ಚಿತ್ರದಲ್ಲಿ ನಾಯಕನಾಗಿ ಆರ್.ಶೈನ್, ನಾಯಕಿಯಾಗಿ ವಾಣಿ ಬಿಜಾಪೂರ  , ಮುಖ್ಯ ಖಳನಾಯಕರಾಗಿ  ಶೋಭರಾಜ್ ಅಭಿನಯಿಸಿದ್ದಾರೆ.ಇನ್ನುಳಿದಂತೆ ಕಲಾವಿದರಾಗಿ ಹರೀಶ್ ಪತ್ತಾರ, ಆನಂದ.ಕೆ, ಸಂಗನಗೌಡ ಕುರುಡಗಿ, ರಾಜಕುಮಾರ ಪಾಟೀಲ್, ಪಾಲಾಕ್ಷ, ಹುಸೇನ್ ಪತ್ತೇಖಾನ್, ನೇತ್ರಾ, ಅನ್ನಪೂರ್ಣ, ಪ್ರಕೃತಿ, ರಮಜಾನಸಾಬ್ ಉಳ್ಳಾಗಡ್ಡಿ, ಮುಂತಾದವರು ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಹಾಗೂ ನಿರ್ದೇಶನ ಆರ್.ಶೈನ್, ಸಂಗೀತ ರಾಘವ್ ಸುಭಾಸ್, ಸಾಹಿತ್ಯ  ಸುಭಾಸ್ ಬೆಟಗೇರಿ, ಹಿನ್ನೆಲೆ ಗಾಯನ ಅಭೀಷೇಕ ಎಮ್ ಆರ್( ಕಾಟೇರಾ ಚಿತ್ರ ಖ್ಯಾತಿಯ ಗಾಯಕ) , ಮೇಘನಾ ಹಳಿಯಾಳ ( ಗರಡಿ ಚಿತ್ರದ ಖ್ಯಾತಿಯ ಗಾಯಕಿ ), ಹಾಗೂ ಸಾತ್ವಿಕ. ಛಾಯಾಗ್ರಹಣ ಗಿರೀಶ್ ಶಿರಗೇನಹಳ್ಳಿ, ಭರತ್, ಶ್ಯಾಮ್, ಸಂಕಲನ ರವಿ ರಾಠೋಡ, ಸಾಹಸ ಸಂತೋಷ ರಾಠೋಡ, ನೃತ್ಯ ಕಂಬಿ ರಾಜು, ವರ್ಣಾಲಂಕಾರ ಶ್ರೀಕಾಂತ್ ಕುಲಕರ್ಣಿ, ವಸ್ತ್ರಾಲಂಕಾರ ಸಾವಿತ್ರಿ ರಂಗ್ರೇಜಿ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ,  ಕ್ರಿಯೇಟಿವ್ ಹೆಡ್ ಸಿ.ಜಿ.ವೆಂಕಟೇಶರಾವ್  ಅವರಿದ್ದಾರೆ. ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕದ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಚಿತ್ರವು ಕರ್ನಾಟಕದಾದ್ಯಂತ ಬಿಡುಗಡೆ ಆಗಲಿದ್ದು, ಪ್ರೇಕ್ಷಕರು ಈ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದು, ನಿರ್ಮಾಪಕ, ನಿರ್ದೇಶಕ ಹಾಗೂ ಚಿತ್ರತಂಡವು ಚಿತ್ರ ಗೆಲ್ಲುವ ನಿರೀಕ್ಷೆಯಲ್ಲಿ ಇದ್ದಾರೆ.
**
ವರದಿ:
ಡಾ.ಪ್ರಭು ಗಂಜಿಹಾಳ
ಮೊ: ೯೪೪೮೭೭೫೩೪೬
Post a Comment

Post a Comment