ಗಜೇಂದ್ರಗಡ : (Sept_27_09_2024)
ಕ್ರಾಂತಿಸೂರ್ಯ ಜೈಭೀಮ್ ಸೇನೆ ರಾಜ್ಯಾದ್ಯಕ್ಷರಾಗಿ ಅಧಿಕಾರ ವಹಿಸಿದ ನಂತರ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣ ಬದಲಾಗುತ್ತಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ವೃತ್ತ ಅಭಿವೃದ್ಧಿ ಕಾಣದೇ ಮಕಾಗಿದೆ. ಪಟ್ಟಣದ ಹೃದಯ ಭಾಗದಲ್ಲಿದ್ದರೂ, ಮೂಲ ಸೌಕರ್ಯ ಮರಿಚಿಕೆಯಾಗಿದೆ.
ಹೀಗಾಗಿ, ಕ್ರಾಂತಿಸೂರ್ಯ ಜೈ ಭೀಮ್ ಸೇನೆ ಮುಖಂಡರು ಶುಕ್ರವಾರ ಮನವಿ ಸಲ್ಲಿಸಿದರು. ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಬಳಗಾನೂರ್ ಅವರಿಗೆ ಮನವಿ ಸಲ್ಲಿಸಿ, ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದರು. ಈ ವೃತ್ತದಲ್ಲಿ ಹಲವಾರು ವರ್ಷದಿಂದ ನೆನೆಗುದಿಗೆ ಬಿದ್ದ ಅಂಬೇಡ್ಕರ್ ಮೂರ್ತಿ ಪ್ರತಿಷ್ಟಾಪಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣ ಯೋಜನೆ ಹಾಗೂ ಪ್ರಸ್ತುತ ಸಾಲಿನ ಎಸ್ಎಫ್‌ಸಿ ಮತ್ತು ಪುರಸಭೆ ನಿಧಿ ಬಳಸಿಕೊಂಡು ಅಂಬೇಡ್ಕರ್ ಅವರ ಮೂರ್ತಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ, ಕ್ರಾಂತಿಸೂರ್ಯ ಜೈ ಭೀಮ್ ಸೇನೆ ಮುಖಂಡರು ಶುಕ್ರವಾರ ಮನವಿ ಸಲ್ಲಿಸಿದರು. ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಬಳಗಾನೂರ್ ಅವರಿಗೆ ಮನವಿ ಸಲ್ಲಿಸಿ, ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದರು.
ಅಲ್ಲೇ ಸೇವಾಲಾಲ್ ನಗರಕ್ಕೆ ತೆರಳುವಾಗ ರಸ್ತೆ ಮಧ್ಯಭಾಗದಲ್ಲಿ ಹೊಂಡ ನಿರ್ಮಾಣವಾಗಿತ್ತು. ಈ ಘಟನೆ ನಡೆದು, ಹಲವಾರು ತಿಂಗಳುಗಳ ಕಾಲ ಸಮಯ ಕಳೆದರು, ಪುರಸಭೆ ಇತ್ತ ಗಮನ ಹರಿಸಿಲ್ಲ. ತಾಂಡಾ ಅಭಿವೃದ್ಧಿ ಬಿಡಿ, ರಸ್ತೆ ಮಧ್ಯದಲ್ಲಿ ಹೊಂಡ ನಿರ್ಮಾಣವಾದರೂ, ಪುರಸಭೆ ಕಣ್ಮುಚ್ಚಿ ಕುಳಿತಿದೆ. ಹೀಗಾಗಿ, ಡಾ. ಬಿ. ಅರ್. ಅಂಬೇಡ್ಕರ್ ಸರ್ಕಲ್ ಅಭಿವೃದ್ಧಿ ಬಹು ಮುಖ್ಯವಾಗಿದೆ ಎಂದು ಸಂಘಟನೆ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.
ಕನಕಪ್ಪ ಕಲ್ಲವಡ್ಡರ್, ರವಿ ನಿಡಗುಂದಿ, ಅಮಿತ್ ಭಜಂತ್ರಿ, ರಮೇಶ್ ತಳವಾರ್, ದುರುಗಪ್ಪ ಪೂಜಾರ್, ಮಾರುತಿ ಬಂಕದ್, ಶುಭಂ ಮಾರನಾಳ, ಕಿರಣ್ ವಡ್ಡರ್, ಮಾರುತಿ ವಡ್ಡರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Post a Comment