-->
Bookmark

Gajendragad : ವಿಶ್ವಕರ್ಮ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ : ಸಮಾಜದ ಅಧ್ಯಕ್ಷ ವಿರೂಪಾಕ್ಷಪ್ಪ ಬಡಿಗೇರ್

ವಿಶ್ವಕರ್ಮ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ : ಸಮಾಜದ ಅಧ್ಯಕ್ಷ ವಿರೂಪಾಕ್ಷಪ್ಪ ಬಡಿಗೇರ್

ಗಜೇಂದ್ರಗಡ : (Sept_15_2024)

ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಶ್ವಕರ್ಮ ಜಯಂತಿ ಆಚರಣೆಗೆ ಸಕಲ ಸಿದ್ಧತೆಗಳು ನಡೆದಿವೆ. ತಾಲೂಕಾಡಳಿತ ಒಂದೆಡೆ, ಸಜ್ಜಾಗಿದ್ದರೆ, ಮತ್ತೊಂದೆಡೆ, ವಿಶ್ವಕರ್ಮ ಸಮುದಾಯ ಸಹ ಸಕಲ ಸಿದ್ಧತೆ ಮಾಡಿಕೊಂಡಿದೆ. ಸೆಪ್ಟೆಂಬರ್ 17ರ ಮಂಗಳವಾರದಂದು, ಬೆಳ್ಳಂ ಬೆಳಗ್ಗೆ 6 ಗಂಟೆಗೆ ಶ್ರೀ ವಿಶ್ವಕರ್ಮ ಧ್ವಜಾರೋಹಣ ನಡೆಯಲಿದ್ದು, ವಿಶ್ವಕರ್ಮ ಮಹಾರಾಜರ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಭಾವಚಿತ್ರ ಮೆರವಣಿಗೆ ವೇಳೆ, ಡೊಳ್ಳು ಕುಣಿತ, ನಗಾರಿ, ಸೇರಿದಂತೆ ಭಜನಾ ಮಂಡಳಿಗಳಿಂದ ಭಜನೆಯೂ ನಡೆಯಲಿದೆ ಎಂದು ವಿರೂಪಾಕ್ಷಪ್ಪ ಬಡಿಗೇರ್ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದರು. 

ಇನ್ನೂ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತದೆ. ಮೆರವಣಿಗೆಯಲ್ಲಿ ಮಹಿಳೆಯರು, ಪುರುಷರು, ಯುವಕ, ಯುವತಿಯರು, ಮಕ್ಕಳು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಸಹ ಮಾಡಿದ್ದಾರೆ‌. 

ಗಜೇಂದ್ರಗಡ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ವಿರೂಪಾಕ್ಷಪ್ಪ ಕಾ. ಬಡಿಗೇರ್, ಉಪಾಧ್ಯಕ್ಷ ಶೀ ಹನುಮಂತಪ್ಪ ಭೀ. ಮುದಗಲ್ಲ, 
ಪ್ರಧಾನ ಕಾರ್ಯದರ್ಶಿ ಶ್ರೀ ಸೂರ್ಯನಾರಾಯಣ ಈ. ಪತ್ತಾರ್, ಸಹ ಕಾರ್ಯದರ್ಶಿ ಶ್ರೀ ವಸಂತ್ ಮಾ. ಬಡಿಗೇರ್, ಖಜಾಂಚಿ ಶೀ ಮಾನಪ್ಪ ಚಿ. ಕಮ್ಮಾರ್, ಸದಸ್ಯರಾದ  ಸುರೇಶ್ ಹೊರಪೇಟೆ, ಪ್ರಭು ಮ. ಬಡಿಗೇರ್, ಶ್ರೀನಿವಾಸ ರಂ. ಸವದಿ, ಪರುಶುರಾಮ್ ಯ. ಕಮ್ಮಾರ್ (ಕಾಮನೂರ),  ಶ್ರೀನಿವಾಸ ವೆಂ. ಕಮ್ಮಾರ್, ಕೃಷ್ಣ ಅ. ಕಂಚಗಾರ್,  ಮಂಜುನಾಥ ದೇ. ಗುಡೂರ್, ರಾಘವೇಂದ್ರ ಈ. ಹಳ್ಳದ್, ಶರಣಪ್ಪ ಕೃ. ಬಡಿಗೇರ್,  ಹನುಮಂತ ವೀ. ಪತ್ತಾರ್, ಮಂಜುನಾಥ ಈ. ಬಡಿಗೇರ್, ಮೌನೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ದೇವೇಂದ್ರಪ್ಪ ಸೇರಿದಂತೆ ಅನೇಕ ಗಣ್ಯರು, ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Post a Comment

Post a Comment