ಐದು ದಿನವೂ ಪ್ರಸಾದ ಸೇವೆ
ಬಾಗಲಕೋಟೆ : (Sept_11_2024)
ಸದಾ ಕೆಲಸದಲ್ಲಿ ಮಗ್ನರಾಗಿ, ತಮ್ಮನ್ನ ತಾವು ಮರೆತಿರುವಾಗ ಇಂತಹ ಆಧ್ಯಾತ್ಮಿಕ ಕೆಲಸವು ಮನಸ್ಸಿಗೆ ನೆಮ್ಮದಿ ಸಿಗುವುದರ ಜೊತೆಗೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಪ್ರಕಾಶ್ ಬಿರಾದಾರ್ ಹೇಳಿದರು.
ಬಾಗಲಕೋಟೆಯ ಸೆಕ್ಟರ್ ೧೧ ರ ಸರ್ಕಾರಿ ಆಸ್ಪತ್ರೆಯಲ್ಲಿ ಗಣಪತಿ ಪ್ರತಿಷ್ಠಾಪಿಸಿ, ಮಾತನಾಡಿದ ಅವರು, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದ್ದೇವೆ. ಜಗತ್ತಿಗೆ ಒಳಿತಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿರುವುದಾಗಿ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದರು. ಸಾರ್ವಜನಿಕರಿಗೆ ಆರೋಗ್ಯ, ಐಶ್ವರ್ಯವನ್ನ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿರುವುದಾಗಿಯೂ ಇದೆ ವೇಳೆ ಡಾ. ಪ್ರಕಾಶ್ ಬಿರಾದಾರ್ ಹೇಳಿದರು. ಇದೇ ವೇಳೆ, ಸಕಲ ವೈದ್ಯರ ಮತ್ತು ಸಿಬ್ಬಂದಿ ವರ್ಗದವರ ಕೆಲಸವನ್ನ ಹಾಡಿ ಹೋಗಳಿದರು.
ಇನ್ನೂ, ಜಿಲ್ಲಾ ಅರೊಗ್ಯಾಧಿಕಾರಿ ಡಾ. ಪ್ರಕಾಶ್ ಬಿರಾದಾರ್ ಅವರು ಗಣಪತಿ ಪ್ರತಿಷ್ಠಾಪನೆಗೆ ಹೆಚ್ಚಿನ ಮುತುವರ್ಜಿ ವಹಿಸಿ, ಐದು ದಿನದ ಗಣಪತಿಯನ್ನ ಪ್ರತಿಷ್ಠಾಪಿಸಲು ಮುಂದಾಗಿದ್ದು, ಇವರ ಆಧ್ಯಾತ್ಮಿಕತೆಗೆ ಸಾಕ್ಷಿಯಾಗಿದೆ ಎಂದು ವೈದ್ಯೆ ಚೈತ್ರಾ ವಿಶ್ವಬ್ರಾಹ್ಮಣ ತಮ್ಮ ಅನಿಸಿಕೆ ಹಂಚಿಕೊಂಡರು.
ಜಿಲ್ಲಾಸ್ಪತ್ರೆಯಲ್ಲಿ ಪ್ರತಿದಿನ ನೂರಾರು ರೋಗಿಗಳು ಬರುತ್ತಾರೆ. ಅವರಿಗೆ ಉತ್ತಮ ಚಿಕಿತ್ಸೆ ನೀಡುತ್ತಾರೆ. ಗಣಪತಿ ಪ್ರತಿಷ್ಠಾಪನೆಯ ನಂತರ ಇಲ್ಲಿ ಸಾರ್ವಜನಿಕವಾಗಿ ಪ್ರಸಾದ ನೇವೆಯೂ ಉರುತ್ತದೆ. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಸಹ ಗಣಪತಿಯ ಸೇವೆ ಮಾಡುತ್ತಾರೆ. ಸದಾ ಕೆಲಸದಲ್ಲಿ ಮಗ್ನರಾಗಿ, ತಮ್ಮನ್ನ ತಾವು ಮರೆತಿರುವಾಗ ಇಂತಹ ಆಧ್ಯಾತ್ಮಿಕ ಕೆಲಸವು ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಮತ್ತೊಬ್ಬ ಹಿರಿಯ ವೈದ್ಯರು ತಿಳಿಸಿದ್ದಾರೆ.
ಪ್ರತಿದಿನ ನಡೆಯುವ ಪೂಜಾ ಕಾರ್ಯದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಪ್ರಕಾಶ್ ಬಿರಾದಾರ್, ನರ್ಸಿಂಗ್ ಮೇಲಧಿಕಾರಿ ಶೇಖರ್ ಕೊಲ್ಕಾರ್ , ಎಲೆಕ್ಟ್ರಿಷಿಯನ್ ಅಧಿಕಾರಿ ಎಂ. ಅರ್. ಕೆಂಚಿ, ಹಿರಿಯ ಫಾರ್ಮಸಿಸ್ಟ್ ಅಧಿಕಾರಿ ಸುನಿಲ್ ಬುದ್ನಿ, ನರ್ಸಿಂಗ್ ಮೇಲಧಿಕಾರಿ ಹೇಮಾ ಅರಬವ್ವಗೋಳ್, ಸೂಪರಿಂಟೆಂಡೆಂಟ್ ಅಧಿಕಾರಿ ರಾಘವೇಂದ್ರ ಕುಲಕರ್ಣಿ,
ಆಡಳಿತಾಧಿಕಾರಿ ಹೆಚ್.ವಿ ಲಿಂಗಣ್ಣನವರ್, ಆರ್.ಎಂ.ಓ ಡಾ. ಲಕ್ಷ್ಮಿಕಾಂತ್, ಹಿರಿಯ ಪ್ರಯೋಗತಂತ್ರಜ್ಞರಾದ ಬಿ. ಕೆ. ಲಮಾಣಿ, ನರ್ಸಿಂಗ್ ಅಧಿಕಾರಿ ಜಗದೀಶ್ ನಾಲತ್ವಾಡ್, ಫಿಜಿಸಿಯನ್ ವೈದ್ಯ ಡಾ. ಗಿರೀಶ್ ಸಂಗಮ್, ಜನರಲ್ ಸರ್ಜನ್ ವೈದ್ಯ ಡಾ. ರಾಜೇಂದ್ರ ನಾಗಾವಿ, ಚರ್ಮ ರೋಗ ವೈದ್ಯರ ಡಾ. ಪ್ರಭಾಕರ ಮೇಟಿ, ಹಾಗೂ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Post a Comment