-->
Bookmark

Karwar : ರಾಜು ತಾಂಡೇಲ್ ನಿಧನಕ್ಕೆ ಸಂತಾಪ ಸೂಚಿಸಿದ ಬಂಜಾರ ಸಮುದಾಯ

Karwar : ರಾಜು ತಾಂಡೇಲ್ ನಿಧನಕ್ಕೆ ಸಂತಾಪ ಸೂಚಿಸಿದ ಬಂಜಾರ ಸಮುದಾಯ 

ಕಾರವಾರ: (Aug_20_2024)
ಉತ್ತರ ಕನ್ನಡ ಜಿಲ್ಲಾ ಮೀನುಗಾರ ಸಹಕಾರ ಫೆಡರೇಶನ್‌ ಅಧ್ಯಕ್ಷರಾಗಿದ್ದ ರಾಜು ತಾಂಡೇಲ್ ಹೃದಯಾಘಾತದಿಂದ ನಿಧನರಾಗಿರುವುದು ನಂಬಲಾಗುತ್ತಿಲ್ಲ. ಈ ಘಟನೆ ನೋವುಂಟು ಮಾಡಿದೆ ಎಂದು ಉತ್ತರ ಕನ್ನಡ ಬಿಣಗಾದ ಮಹಾನಾಯಕ (ಸೀತಾ ನಗರ) ತಾಂಡಾದ ಬಂಜಾರ ಸಮಾಜ ಬಾಂಧವರು ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಾದ ಇವರು, ಸಮಾಜ ಸೇವೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ರಾಜು ತಾಂಡೇಲ್ ಅವರ ಕುಟುಂಬಕ್ಕೆ ಭಗವಂತ ನೋವು ಭರಿಸುವ ಶಕ್ತಿ ನೀಡಲಿ ಎಂದು ಬಂಜಾರ ಸಮುದಾಯದ ಗೌರವಾಧ್ಯಕ್ಷ ಡಾ. ಜಗನ್ನಾಥ್ ರಾಠೋಡ್ ಹೇಳಿದರು. 

ಇದೇವೇಳೆ, ಮಂಜುನಾಥ್ ಬಿ ರಾಠೋಡ್ ಮಾತನಾಡಿ, ಮೀನಿಗಾರರು ಸೇರಿದಂತೆ ಬಡವರ ಪರ ಅತೀವ ಕಾಳಜಿ ವಹಿಸಿದ್ದರು. ಅಜಾತಶತ್ರುವಾಗಿದ್ರು. ಇಂತಹ ನಾಯಕನ್ನು ಕಳೆದುಕೊಂಡಿದ್ದು ನೊವು ತಂದಿದೆ ಎಂದು ರಾಜು ತಾಂಡೇಲ್ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು. 

ಇನ್ನೂ, ರಾಜು ತಾಂಡೇಲ್ ನಿಧನದಿಂದ ನಾಡು ಬರಡಾಗಿದೆ. ಉತ್ತರ ಕನ್ನಡ ಜಿಲ್ಲೆ ಮಾತ್ರ ಅಲ್ಲ. ರಾಜ್ಯದ ರಾಜಕಾರಣದಲ್ಲಿ ಗುರುತಿಸಿಕೊಳ್ಳುವ ವ್ಯಕ್ತಿತ್ವ ಅವರದ್ದಾಗಿತ್ತು. ಭಗವಂತ ರಾಜು ತಾಂಡೇಲ್ ಕುಟುಂಬದಕ್ಕೆ ನೋವು ಭರಿಸುವ ಶಕ್ತಿ ನೀಡಲಿ, ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಬಂಜಾರ ಸಮುದಾಯದ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಹೇಳಿದರು.

ಅಖಂಡ ಬಂಜಾರ ಸಮುದಾಯವೇ ರಾಜು ತಾಂಡೇಲ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Post a Comment

Post a Comment