ಗಜೇಂದ್ರಗಡ: (Aug_06_2024)
ಪವಿತ್ರವಾದ ಶ್ರಾವಣ ಮಾಸ ಭಕ್ತಿಯ ವೈಭವ ಪ್ರತೀಕವಾಗಿದೆ. ಸತ್ಕಾರ್ಯ ಮಾಡುವುದು ಜತೆಗೆ ಪ್ರಸನ್ನ ಚಿತ್ತದ ಭಕ್ತಿಯ ಮಾತುಗಳು, ಮಹಾತ್ಮರ ಪುರಾಣ, ಪ್ರವಚನ ಶ್ರವಣ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದೆ ಎಂದು ವಿಜಯಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಮೈಸೂರಮಠದಲ್ಲಿ ಗಜೇಂದ್ರಗಡ ಉಣಚಗೇರಿ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಸೋಮವಾರ ಶ್ರಾವಣ ಮಾಸ ಪ್ರಯುಕ್ತ ತಿಂಗಳವರೆಗೆ ನಡೆಯುವ ಶ್ರೀ ಗುಡ್ಡಾಪುರ ದಾನಮ್ಮದೇವಿಯ ಪುರಾಣ ಪ್ರಾರಂಭೋತ್ಸವ ಸಾನ್ನಿಧ್ಯ ವಹಿಸಿ ಉದ್ಘಾಟಿಸಿ ಮಾತನಾಡಿದರು.
ಒತ್ತಡದ ಬದಕುನಲ್ಲಿ ಜೀವನ ಸಾಗಿಸುತ್ತಿರುವ ಜನತೆ ಧರ್ಮ ಕಾರ್ಯ ಕಡಿಮೆ ಮಾಡುತ್ತಿದ್ದಾರೆ. ಇದರಿಂದ ಮನುಷ್ಯನ ನೆಮ್ಮದಿ ಕಡಿಮೆಯಾಗುತ್ತಿದೆ. ಪುರಾಣ ಕೇಳಲು ಸಮಯ ಮೀಸಲಿಡಿ. ನಿತ್ಯ ನಡೆಯುವ ಪುರಾಣ ಕೇಳುವುದರಿಂದ ವರ್ಷಪೂರ್ತಿ ಎದುರಾಗುವ ಸಮಸ್ಯೆಗಳಿಂದ ಪರಿಹಾರ ಲಭಿಸಲಿವೆ. ಪುರಾಣದಲ್ಲಿ ಬರುವ ಸನ್ನಿವೇಷಗಳು ಎಲ್ಲರ ಬದುಕಿನಲ್ಲಿ ನಿತ್ಯ ಎದುರಾಗಲಿವೆ. ಸಮಸ್ಯೆಗಳಿಂದ ಭಕ್ತಿ ಮಾರ್ಗ ಮೂಲಕ ಪರಿಹಾರ ದೊರೆಯಲಿದೆ ಎಂಬುದು ಮನಗಾಣಬೇಕು ಎಂದರು.
ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ಪುರಾಣ ಪ್ರವಚನಗಳು ಬದಕನ್ನು ಹಸನುಗೊಳಿಸುವುದರ ಜೊತೆಗೆ ಪ್ರವಚನಗಳ ತತ್ವ ಆದಶ್ ಬದುಕನ್ನು ರೂಪಿಸುತ್ತವೆ. ಶ್ರೀಮಠ ದಲ್ಲಿ ಒಂದು ತಿಂಗಳುಕಾಲ ಜರುಗುವ ಪುರಾಣವನ್ನು ಕೇಳುವುದರ ಜೊತೆಗೆ ಪುರಾಣಗಳ ಸಾರ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.
ಪುರಾಣ ಸಮಿತಿ ಅಧ್ಯಕ್ಷ ಟಿ.ಎಸ್.ರಾಜೂರ, ಸಮಾಜದ ಯುವ ಘಟಕದ ಅಧ್ಯಕ್ಷ ಅಪ್ಪು ಮತ್ತಿಕಟ್ಟಿ, ಎಸ್.ಎಸ್.ವಾಲಿ, ಕಲ್ಲಪ್ಪ ಸಜ್ಜನರ, ಪ್ರಭು ಚವಡಿ, ಎ.ಪಿ.ಗಾಣಿಗೇರ, ಶಿವಕುಮಾರ ಕೋರಧಾನಮಠ, ಶರಣಪ್ಪ ರೇವಡಿ, ಬಸವರಾಜ ಕೊಟಗಿ, ಪ್ರಭು ಹಿರೇಮಠ, ನಾಗಯ್ಯ ಗೊಂಗಡಶೆಟ್ಟಿಮಠ, ಶಿವಯ್ಯ ಚಕ್ಕಡಿಮಠ, ಅಮರಯ್ಯ ಗೌರಿಮಠ, ಬಸವರಾಜ ಚನ್ನಿ, ಚಂದ್ರು ಕುಷ್ಟಗಿ, ಮಲ್ಲು ಶಾಸ್ತ್ರೀ, ಬಸವರಾಜ ರೇವಡಿ, ಪ್ರಕಾಶ ಕಾರಡಗಿಮಠ ಸೇರಿದಂತೆ ಇತರರು ಇದ್ದರು.
Post a Comment