-->
Bookmark

Gajendragad : ಮೈಸೂರು ಮಠದಲ್ಲಿ ಷಟಸ್ಥಲ ದ್ವಜಾರೋಹಣ ಕಾರ್ಯಕ್ರಮ

Gajendragad : ಮೈಸೂರು ಮಠದಲ್ಲಿ ಷಟಸ್ಥಲ ದ್ವಜಾರೋಹಣ ಕಾರ್ಯಕ್ರಮ 

ಗಜೇಂದ್ರಗಡ:(Aug_05_2024)
ಪಟ್ಟಣದ ಮೈಸೂರಮಠದಲ್ಲಿ ವೀರಶೈವ ಲಿಂಗಾಯತ ಸಮಾಜ ಗಜೇಂದ್ರಗಡ ಉಣಚಗೇರಿ ವತಿಯಿಂದ ಶ್ರಾವಣ ಮಾಸದ ನಿಮಿತ್ಯ ಶ್ರೀ ಗುಡ್ಡಾಪುರ ದಾನಮ್ಮದೇವಿಯ ಪುರಾಣ ಪ್ರಾರಂಭದ ಅಂಗವಾಗಿ ಸೋಮವಾರ ಷಟಸ್ಥಲ ದ್ವಜಾರೋಹಣ ಕಾರ್ಯಕ್ರಮ ಜರುಗಿತು.
ಈ ಸಂದರ್ಬದಲ್ಲಿ ಪ್ರವಚನ ಕಮೀಟಿಯ ಅಧ್ಯಕ್ಷ ಟಿ.ಎಸ್.ರಾಜೂರ ಮಾತನಾಡಿ, ಶ್ರಾವಣ ಮಾಸದ ನಿಮಿತ್ಯ ೧ ತಿಂಗಳು ಕಾಲ ನಡೆಯುವ ಶ್ರಿ ಗುಡ್ಡಾಪುರ ದಾನಮ್ಮದೇವಿ ಪುರಾಣ ಶ್ರಾವಣ ಮಾಸ ಮುಗಿಯುವವರೆಗೂ ಪ್ರತಿನಿತ್ಯ ೭ ಘಂಟೆಗೆ ಪ್ರಾರಂಭವಾಗಲಿದ್ದು. ಪುರಾಣ ಪ್ರವಚನಕಾರರಾದ ಗಿಣಿವಾರದ ಶಿವಾಚಾರ್ಯಸ್ವಾಮೀಜಿ ಹಿರೇಮಠ, ಸಂಗೀತ ಸೇವೆ ಸುರೇಶ ಕಲಬುರ್ಗಿ ಹಾಗೂ ತಬಲಾ ಸೇವೆಯನ್ನು ರಾಮಲಿಂಗಪ್ಪ ಹೂಗಾರ ನೀಡಲಿದ್ದಾರೆ. ಹೀಗಾಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಳ್ಳುವ ಜತೆಗೆ ಇಂದಿನ ಮಕ್ಕಳನ್ನು, ಯುವ ಸಮೂದಾಯವನ್ನು ಪುರಾಣಕ್ಕೆ ಕರೆತರುವ ಮೂಲಕ ಧಾರ್ಮೀಕ ನೆಲೆಗಟ್ಟನ್ನು ಭದ್ರಗೊಳಿಸಬೇಕಾದದು ನಮ್ಮ ಕರ್ತವ್ಯವಾಗಿದೆ ಎಂದರು.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳು ನಡೆಯುವ ಈ ಪುರಾಣ ಕಾರ್ಯಕ್ರಮದಲ್ಲಿ ಅನೇಕ ಸ್ವಾಮೀಜಿಗಳು, ಸಾಹಿತಿಗಳು ಭಾಗವಹಿಸಿ ಪ್ರವಚನ ನೀಡಲಿದ್ದಾರೆ. ಪ್ರತಿನಿತ್ಯ ಪುರಾಣ ಮುಗಿದ ಮೇಲೆ ಪ್ರಸಾದ ಸೇವೆಯೂ ಪ್ರತಿದಿನ ಇರುತ್ತದೆ ಎಂದರು.
ವೀರಶೈವ ಲಿಂಗಾಯತ ಸಮಾಜ ಗಜೇಂದ್ರಗಡ ತರುಣ ಸಂಘದ ಅಧ್ಯಕ್ಷ ಅಪ್ಪು ಮತ್ತಿಕಟ್ಟಿ, ಎಸ್.ಎಸ್.ವಾಲಿ, ಕಲ್ಲಪ್ಪ ಸಜ್ಜನರ, ಎ.ಪಿ.ಗಾಣಿಗೇರ, ಶಿವಕುಮಾರ ಕೋರಧಾನ್ಯಮಠ, ಶರಣಪ್ಪ ರೇವಡಿ, ಬಸವರಾಜ ಬೇಲೆರಿ, ಕಳಕಯ್ಯ ಸಾಲಿಮಠ, ನಾಗಯ್ಯ ಗೊಂಗಡಶೆಟ್ಟಿಮಠ, ಶಿವಯ್ಯ ಚಕ್ಕಡಿಮಠ, ಪ್ರಭು ಹಿರೇಮಠ,  ಹುಚ್ಚಪ್ಪ ಹಾವೇರಿ, ಜಗದೀಶ ಹೊಸಳ್ಳಿ ಸೇರಿದಂತೆ ಇತರರು ಇದ್ದರು.
Post a Comment

Post a Comment