-->
Bookmark

Gajendragad : ಪರಿಸರ ಸ್ನೇಹಿ "ಪರಮೇಶ ಸುತ"

Gajendragad : ಪರಿಸರ ಸ್ನೇಹಿ "ಪರಮೇಶ ಸುತ" 
ಗಣಪತಿ ತಯಾರಕ ಶಂಕ್ರಪ್ಪ ಬಡಿಗೇರ್ ಕೈ ಚಳಕ 
ಮನೆಮನಗಳಲ್ಲಿ ಪೂಜಿಸಲು ತಯಾರಾಗಿವೆ ತಹರೆವಾರಿ ಗಣಪ 
ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪಿಸಲು ಮನವಿ 
ಗಜೇಂದ್ರಗಡ : (Aug_30_2024)
ಶಂಕ್ರಪ್ಪ ಬಡಿಗೇರ್ ಕುಟುಂಬ ಹಲವು ವರ್ಷಗಳಿಂದ ಪರಿಸರ ಸ್ನೇಹಿ ಗಣೇಶನ ತಯಾರು ಮಾಡುತ್ತಾರೆ. ಗಜೇಂದ್ರಗಡ ಸೇರಿದಂತೆ ಸುತ್ತಮುತ್ತ ತಾಲೂಕು ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದ ಜನರು ಇಲ್ಲಿಗೆ ಬಂದು ಪರಿಸರ ಸ್ನೇಹಿ ಗಣೇಶನನ್ನ ಒಯ್ಯುವುದು ವಾಡಿಕೆ. 
ಇನ್ನೂ, ಪಟ್ಟಣದಲ್ಲಿ ಮನೆ ಮಾತಾಗಿರುವ ಇವರು ತಲೆ ತಲೆ ಮಾರುಗಳಿಂದ ಗಣೇಶನ ಮೂರ್ತಿ ತಯಾರು ಮಾಡುತ್ತಾರೆ.
ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಆದೇಶವನ್ನು ಚಾಚುತಪ್ಪದೆ ಪಾಲಿಸುತ್ತಾರೆ. ಸರ್ಕಾರದ ಆದೇಶ ಬರುವ ಮೊದಲೇ ಪರಿಸರ ಉಳಿಸುವ ವಿಘ್ನ ನಿವಾರಕನನ್ನ ತಯಾರು ಮಾಡುತ್ತಾರೆ. ವಿಶೇಷವಾಗಿ ಸಾರ್ವಜನಿಕರೆ ಬಂದು ನಮಗೆ ಗಣೇಶನ ಮೂರ್ತಿಗಳು ಬೇಕು ಎಂದು ಮೊದಲೇ ಹೆಳುವ ಪರಂಪರೆಯನ್ನು ರೂಢಿಸಿಕೊಂಡಿದ್ದಾರೆ.
ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ನಮ್ಮ ಪೂರ್ವಜರು ಈ ಕಾಯಕ ಮಾಡಿಕೊಂಡು ಬಂದಿದ್ದಾರೆ ಎಂದು ಶಂಕ್ರಪ್ಪ ಬಡಿಗೇರ್ ಭಾವುಕರಾದ್ರು. ಇತ್ತೀಚಿನ ದಿನಗಳಲ್ಲಿ ಬೇರೆಡೆಯಿಂದ ಗಣಪತಿ ಆಮದು ಮಾಡಿಕೊಂಡು ವ್ಯಾಪಾರ ಮಾಡುವವರು ಹೆಚ್ಚಾಗಿದ್ದಾರೆ. ಜೊತೆಗೆ ಇದು ಉದ್ಯಮವಾಗಿ ಬೆಳೆದಿದ್ದರಿಂದ ಪೈಪೋಟಿ ಹೆಚ್ಚಾಗಿದೆ ಎಂದು ಹೇಳುತ್ತ, ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದರಿಂದ ರೈತರು ಸಂತಸದಲ್ಲಿದ್ದಾರೆ. ಹಬ್ಬದ ವಾತಾವರಣ ಕಳೆ‌ ಕಟ್ಟಿದೆ ಎಂದು ಸಂತಸದ ಕ್ಷಣ ಹಂಚಿಕೊಂಡರು. 

ಹಬ್ಬ ಇನ್ನೂ ದೂರ ಇರುವುದರಿಂದ ಈಗಲೇ ವ್ಯಾಪರ ವಹಿವಾಟಿನ ಬಗ್ಗೆ ಹೇಳುವುದು ಸಮಂಜಸ ಅಲ್ಲ ಎಂದು ಸಮಜಾಯಿಷಿಯೂ ನೀಡಿದರು. ನಮ್ಮಲ್ಲಿ ಪ್ರತಿ ವರ್ಷ ಮೂರು ನೂರರಿಂದ ನಾಲ್ಕು ನೂರು ಗಣಪತಿ ಮಾರಾಟವಾಗುತ್ತವೆ ಎಂದು ಶಂಕ್ರಪ್ಪ ಬಡಿಗೇರ್ ಮಾಹಿತಿ ನೀಡಿದರು.


ಈ ಕಲೆಯನ್ನ ಮುಂದಿನ ಪೀಳಿಗೆಗೂ ಕಲಿಸುತ್ತೇವೆ. ನಮ್ಮ ಮನೆಯಲ್ಲಿ ಮೊಮ್ಮಕ್ಕಳು ಗಣಪತಿ ಮಾಡುತ್ತಾರೆ. ಜೊಗೆತೆ ಬೇರೆಡೆಯಿಂದ ಇತರೆ ಮಕ್ಕಳು ಕಲಿಯಲು ಬರುತ್ತಾರೆ. ಈ ಕಲೆ ಉಳಿಸಿ ಬೆಳೆಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಕಲೆಯ ನೆಲೆಯ ಬಗ್ಗೆಯೂ ವಿವರಿಸಿದರು. ಹೀಗಾಗಿ ಬೇರೆಡೆಯಿಂದ ಮಕ್ಕಳು ಕಲಿಯಲು ಆಗಮಿಸುತ್ತಾರೆ ಎಂದು ತಿಳಿಸಿದರು.

ಎಲ್ಲರೂ ಪರಿಸರ ಸ್ನೇಹಿ ಗಣೇಶನನ್ನ ಪ್ರತಿಷ್ಠಾಪಿಸಿ  ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಇವರ ಮನೆಯಲ್ಲಿ ಶಂಕ್ರಪ್ಪ ಅವರ ಮಡದಿ, ದೇವಿಕಾ ಶಂಕ್ರಪ್ಪ ಬಡಿಗೇರ್, ರಾಹುಲ್ ಕಮ್ಮಾರ್  ವಿಘ್ನ ನಿವಾರಕನ ತಯಾರಿಕೆ ಮಾಡುತ್ತಾರೆ. 

ಪ್ರತೀ ವರ್ಷ ಬಾದ್ರಪದ ಮಾಸದ ಚೌತಿಯಂದು ಪ್ರಪಂಚಾದ್ಯಂತ ಅತ್ಯಂತ ಸಂಭ್ರಮ ಸಡಗರಗಳಿಂದ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಸ್ವಾತ್ರಂತ್ರ್ಯ ಸಮಯದಲ್ಲಿ ಬ್ರಿಟೀಷರ ವಿರುದ್ಧ ಭಾರತೀಯರನ್ನು ಒಗ್ಗೂಡಿಸಲು ಲೋಕಮಾನ್ಯ ತಿಲಕರು ಮನೆ ಮನೆಗಳಲ್ಲಿ ಆಚರಿಸುತ್ತಿದ್ದ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಆರಂಭಿಸಿದ ನಂತರವಂತೂ ದೇಶಾದ್ಯಾಂತ ಗಲ್ಲಿ ಗಲ್ಲಿಗಳಲ್ಲಿ ಬಗೆ ಬಗೆಯ ಕೋಟ್ಯಾಂತರ ಗಣಪತಿಮೂರ್ತಿಗಳನ್ನಿಟ್ಟು ಅನಂತ ಚತುರ್ದಶಿಯವರೆಗೂ ಭಕ್ತಿಯಿಂದ ಪೂಜಿಸಿ ನಂತರ ವಿಸರ್ಜಿಸುವ ಸಂಪ್ರದಾಯ ಎಲ್ಲೆಡೆಯಲ್ಲೂ ಜಾರಿಯಲ್ಲಿದೆ.
Post a Comment

Post a Comment