-->
Bookmark

Gajendragad : ಬೆಳ್ಳಂ ಬೆಳಗ್ಗೆ ಟ್ಯಾಕ್ಸ್ ಕಟ್ಟದ ಅಂಗಡಿಗಳ

Gajendragad : ಬೆಳ್ಳಂ ಬೆಳಗ್ಗೆ ಟ್ಯಾಕ್ಸ್ ಕಟ್ಟದ ಅಂಗಡಿಗಳ
ಗಜೇಂದ್ರಗಡ : (Jul_03_2024)
ಬೆಳ್ಳಂ ಬೆಳಗ್ಗೆ ಗಜೇಂದ್ರಗಡದಲ್ಲಿ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು. ಟ್ಯಾಕ್ಸ್ ಕಟ್ಟದ ಅಂಗಡಿಗಳಿಗೆ ಈಗಾಗಲೇ ನೋಟೀಸ್ ನೀಡಲಾಗಿದ್ದು, ಟ್ಯಾಕ್ಸ್ ತುಂಬಲು ಗಡುವು ಸಹ ನೀಡಲಾಗಿತ್ತು. ಆದ್ರೆ, ನೀಡಿದ ಗಡುವನ್ನ ಸಹ ಪರಿಗಣಿಸಲ್ಲ ಎಂಬ ಆರೋಪವೂ ಇದೆ‌. ಜೊತೆಗೆ, ಬಜಿ, ಎಗ್ ರೈಸ್ ನಲ್ಲಿ ಟೇಸ್ಟಿಂಗ್ ಪೌಡರ್ ಸೇರಿಸಲಾಗುತ್ತಿದೆ ಎಂಬ ಆರೋಪವೂ ಇದ್ದು, ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. 
ಈ ಮಧ್ಯೆ, ಅಂಗಡಿಗಳಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟ ಗುಟ್ಕಾ ಸಹ ಜಪ್ತಿ ಮಾಡಲಾಗಿದೆ.
ತಹಶಿಲ್ದಾರ್ ಕಿರಣಕುಮಾರ್ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ಬೆವರಾಜ್ ಬಳಗಾನೂರ್, ಆಹಾರ ಇಲಾಖೆ ಅಧಿಕಾರಿಗಳು ಜೊತೆಗಿದ್ದರು. ಇನ್ನೂ, ಪೊಲೀಸ್ ಸಿಬ್ಬಂದಿಗಳು  ಸಾತ್ ನೀಡಿದರು. 

ವರದಿ : ಶಂಕರ್ ರಾಠೋಡ್, ವರದಿಗಾರರು ಕಿರಾ ನ್ಯೂಸ್ ಕನ್ನಡ
Post a Comment

Post a Comment

Design By Raushan Design and MafiaXDesign and ThemeXDesign