ಗಜೇಂದ್ರಗಡದಲ್ಲಿ ಕನ್ನಡದ ಬಾವುಟದ ಮೇಲೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವಿಡಿಯೋ ಮತ್ತು ಫೋಟೋಗಳನ್ನ ಭಾಷೆಸಾಬ್ ಕರ್ನಾಚಿ ಎಂಬುವವರು ತಮ್ಮ
ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಾವು ಜೀವನದಲ್ಲಿ ಏನೋ ಸಾದಿಸಿದ್ದೇವೆ ಎನ್ನುವ ಹಾಗೆ ಸಂಭ್ರಮಿಸಿದ್ದಾರೆ. ಪ್ರತಿಷ್ಠಿತ ತಾರೆಯರ ಅಭಿಮಾನಿಗಳು ಎಂದು ಓಡಾಡುವ ಇವರು, ಆ ನಟರು ಕನ್ನಡ ನಾಡಿಗಾಗಿ, ಕನ್ನಡಕ್ಕಾಗಿ ಶ್ರಮಿಸಿರುವುದು ಕಾಣಲಿಲ್ಲವೇ ? ಇವರು ಕನ್ನಡದ ಏಕತೆಯನ್ನ ಹಾಳು ಮಾಡಿದ್ದಾರೆ. ಹೇಳುವವರಿಲ್ಲ, ಕೇಳುವವರಿಲ್ಲ, ತಾವು ಮಾಡಿದ್ದೇ ಸರಿ ಎನ್ನುವ ರೀತಿ ತಮ್ಮನ್ನ ತಾವು ಸಂಭ್ರಮಿಸಿದ್ದಾರೆ. ಇವರೊಂದಿಗೆ ಕಾಣಿಸಿಕೊಂಡವರಿಗೂ ಕನ್ನಡಕ್ಕೆ ಮಾಡಿದ ಅವಮಾನ ಕಾಣಲಿಲ್ಲವೇ...? ಕನ್ನಡಾಂಬೆಗೆ ಮಾಡಿದ ಅವಮಾನ ಕೇವಲ ಹುಟ್ಟುಹಬ್ಬ ಆಚರಿಸಿಕೊಂಡವರಿಗೆ ಮಾತ್ರ ವಲ್ಲ. ಅಲ್ಲಿದ್ದವರೆಲ್ಲರೂ ಸೇರಿ ಅವಮಾನಿದ್ದಾರೆ. ಬೇಜವಾಬ್ದಾರಿಯಿಂದ ವರ್ತಿಸಿ, ಪುಂಡರಂತೆ ಓಡಾಡಿಕೊಂಡವರಿಗೆ ಕನ್ನಡಾಭಿಮಾನ, ಕನ್ನಡಾಂಬೆ ಎನ್ನುವುದು ತಿಳಿಯುವುದಾದರೂ ಹೇಗೆ ಎಂದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ.
ಇತ್ತ, ಗಜೇಂದ್ರಗಡ ಸೇರಿ ಸುತ್ತಮುತ್ತ ಸಂಘಟನೆಗಳು, ಅಭಿಮಾನಿಗಳ ಸಂಘನೆಗಳ ಹೆಸರಿನಲ್ಲಿ ಪುಂಡಾಟಿಕೆ ಮಾಡುವ ಜನರಿಗೆ ಪಾಠ ಕಲಿಸುವ ದಿನಗಳು ದೂರವಿಲ್ಲ.
ವರದಿ : ಕೃಷ್ಣ ರಾಠೋಡ್,
ಸಂಪಾದಕರು ಕಿರಾ ನ್ಯೂಸ್ ಕನ್ನಡ
Post a Comment