ಹುಬ್ಬಳ್ಳಿ : (Jul_27_07_2024)
ನಾಡಿನ ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಪ್ರತಿಷ್ಠಾಪನೆಗೊಂಡ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಇದರಿಂದ ಈ ವರ್ಷ ಕಾವ್ಯ ಕ್ಷೇತ್ರದಲ್ಲಿನ ಸಾಧಕರಿಗೆ ರಾಜ್ಯಮಟ್ಟದ "ಸಂಗಮ ಸಿರಿ" ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. 2023ರ ಸಾಲಿನಲ್ಲಿ ಪ್ರಕಟಗೊಂಡ ಕವನ ಸಂಕಲನದ ಎರಡು ಪ್ರತಿಗಳನ್ನು ಕಳಿಸಿಕೊಡಬೇಕು. ಈ ಪ್ರಶಸ್ತಿಯು 10,000 ರೂ. ಮೊತ್ತದೊಂದಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು. ಎರಡು ವರ್ಷ ಈ ಪ್ರತಿಷ್ಠಾನದಿಂದ ವಚನ ಸಾಹಿತ್ಯದಲ್ಲಿನ ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು .ಈ ವರ್ಷ ಕಾವ್ಯ ಕ್ಷೇತ್ರಕ್ಕೆ ನೀಡಲು ನಿರ್ಧರಿಸಲಾಗಿದೆ .ಕವನ ಸಂಕಲನದ ಪುಸ್ತಕಗಳನ್ನು ಆ 16 ರೊಳಗೆ ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ, ಮನೆ ನಂ.338 ಎರಡನೇ ಹಂತ ಅಕ್ಷಯ ಕಾಲೊನಿ ಗೋಕುಲ ರಸ್ತೆ,ಹುಬ್ಬಳ್ಳಿ ಇಲ್ಲಿಗೆ ಕಳಿಸಿಕೊಡಲು ಕೋರಲಾಗಿದೆ ಮಾಹಿತಿಗೆ ಮೊ.9060933596, 9986476733 ಗೆ ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಜಿ.ಬಿ. ಗೌಡಪ್ಪಗೊಳ, ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ ತಿಳಿಸಿದ್ದಾರೆ.
-ವರದಿ
ಡಾ.ಪ್ರಭು ಗಂಜಿಹಾಳ.
ಮೊ:9448775346
Post a Comment