-->
Bookmark

Gajendragad : ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ : ಪೋಷಕರಿಂದ ಪ್ರತಿಭಟನೆ

Gajendragad : ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ : ಪೋಷಕರಿಂದ ಪ್ರತಿಭಟನೆ 
ಗಜೇಂದ್ರಗಡ : ( Jul_03_2024)

ಗದಗ ಜಿಲ್ಲೆ ಗಜೇಂದ್ರಗಡದ ಕೂಗಳತೆ ದೂರದಲ್ಲಿರುವ ಕಾಲಕಾಲೇಶ್ವರದಲ್ಲಿ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಬಾಸುಂಡೆ ಬರುವಂತೆ ಥಳಿಸಿದ್ದಾರೆ. 

ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ..!
ಕಾಲಕಾಲೇಶ್ವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಯ ಶಿಕ್ಷಕಿ ರೇಣುಕಾ ಎಂಬುವವರು ಹೊಡೆದಿದ್ದಾರೆ ಎಂದು ಆರೋಪಿಸಿ, ಪೋಷಕರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳು ತರಗತಿ ಬಹಿಷ್ಕಾರಿಸಿದರು. ಇದೇ ವೇಳೆ,  ತಕ್ಷಣ ಶಿಕ್ಷಕಿಯನ್ನ ಅಮಾನತು ಮಾಡಬೇಕು. ಇಲ್ಲವಾದ್ರೆ, ಬೇರೆ ಶಾಲೆಗೆ ವರ್ಗಾಯಿಸಬೇಕೆಂದು ಪೋಷಕರು ಒತ್ತಾಯಿಸಿದರು. 

ಸಾಕಷ್ಟು ಬಾರಿ BEO ಗಮನಕ್ಕೆ ತಂದ್ರು ಡೋಂಟ್ ಕೇರ್ ಎನ್ನುತ್ತಿದ್ದಾರೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಡಿಡಿಪಿಐ ಸ್ಥಳಕ್ಕೆ‌ ಆಗಮಿಸುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದಾರೆ.
Post a Comment

Post a Comment