BUDS ಫೂರ್ವ ಭಾವಿ ಸಭೆ : ವಂಚಿತರ ಬೆನ್ನಿಗೆ ನಿಂತ ಸಂಘಟನೆ
ಗಜೇಂದ್ರಗಡದ ಎಪಿಎಂಸಿ ಆವರಣದಲ್ಲಿ BUDS ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಗದಗ ಜಿಲ್ಲಾಧ್ಯಕ್ಷರಾದ ಹೇಮಂತ್ ಮಾಲಿ ಪಾಟೀಲ್, ಬಡ್ಸ್ ಆ್ಯಕ್ಟ್ ೨೦೧೯ ರ ಕಾನೂನು ಅಡಿಯಲ್ಲಿ ವಂಚಿತ ಗ್ರಾಹಕರ ಹಣವನ್ನ ಹಿಂದಿರುಗಿಸಲು, ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ತಾಲೂಕಾಧ್ಯಕ್ಷರಾ ಸುಮಂಗಲಾ ರಾಠೋಡ್ ಮಾತನಾಡಿ, ಒಗ್ಗಟ್ಟಾಗಿ ಹೋರಾಡಿದರೇ ಜಯ ಸಿಗಲಿದೆ ಎಂದು ಹೇಳಿದರು. ಲಕ್ಷಾಂತರ ರೂಪಾಯಿ ಹಣವನ್ನ ಫಲಾನುಭವಿಗಳು ಕೊಟ್ಟಿದ್ದು, ಪತ್ರ ಚಳುವಳಿ ಮಾಡಬೇಕಿದೆ ಎಂದು ಜಿಲ್ಲಾಧ್ಯಕ್ಷರ ಮಾತಿಗೆ ಧ್ವನಿ ಗೂಡಿಸಿದರು. ಜನರನ್ನ ವಂಚಿಸಿದ್ದು, ಘನ ಘೋರ ಅಪರಾಧವಾಗಿದೆ. ವಂಚಿತ ಫಲಾನುಭವಿಗಳಿಗೆ ಜಯ ಸಿಗುವ ವರೆಗೆ ಹೋರಾಟ ನಿರಂತರ ಎಂದು ಸ್ಪಷ್ಟ ಪಡಿಸಿದರು.
ಧಾರವಾಡ ಜಿಲ್ಲಾಧ್ಯಕ್ಷರಾದ ವೀರಣ್ಣ ಚಾಕಲಬ್ಬಿ ಮಾತನಾಡಿ, ಕಂಪನಿ ಪ್ರಾರಂಭಿಸಿ, ಬಡವರನ್ನ ವಂಚಿಸಿದ್ದಾರೆ. BUDS ಆ್ಯಕ್ಟ್ ಎಲ್ಲರಿಗೂ ನ್ಯಾಯ ಒದಗಿಸಲಿದೆ. ಯಾರು ಭಯ ಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ಹಸ್ತ ನೀಡಿದರು.
ರಾಜ್ಯಾದ್ಯಕ್ಷರಾದ ಅಪ್ಪಸಾಬ್ ಬೊಗಡೆ ಮಾತನಾಡಿ, ವಂಚಿತರಿಗೆ ಹಣ ಪಾವತಿ ಮಾಡದೇ ಇರುವವರ ವಿರುದ್ಧ ಅನಿರ್ದಿಷ್ಟಾವಧಿ ಚಳುವಳಿ ಮಾಡಲಿದ್ದೇವೆ ಎಂದು ಘೋಷಿಸಿದರು. ಜುಲೈ 31 ರಂದು ನವದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ. ಪ್ರತಿಭಟನೆಯಲ್ಲಿ ಲಕ್ಷಾಂತರ ವಂಚಿತ ಫಲಾನುಭವಿಗಳು ಭಾಗವಹಿಸಿ, ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಿದ್ದಾರೆ ಎಂದು ಹೇಳಿದರು.
ಪೂರ್ವಭಾವಿ ಸಭೆಯಲ್ಲಿ ಅಶೋಕ್ ಕುರ್ತಕೋಟಿ, ಹೆಚ್.ಎಸ್. ನರ್ಸಾಪೂರ್, ಶಿವಕುಮಾರ್ ಮಠದ್, ಬಾಳಪ್ಪ ಅನಗೌಡರ್, ಗಿರೀಶ್ ಕಾಲವಾಡ, ಶಿವಪ್ಪ ನೆಲ್ಲೂರ್, ಶೇಖಪ್ಪ ಹಿರೇಮನಿ, ಹನಮಂತ ಹಡಪದ್, ರಮೇಶ್ ರಾಠೋಡ್, ಚನ್ನಪ್ಪ ಮ್ಯಾಗೇರಿ, ಸಂಗಯ್ಯ ಹಿರೇಮಠ, ರವಿ ಮ್ಯಾಗೇರಿ, ಶಿವಕುಮಾರ್ ಮಾವಿನಕಾಯಿ, ಅನ್ನಪೂರ್ಣ ಸಂಕನೂರ್, ಅನ್ನಪೂರ್ಣ ಧರನಾ, ಶೋಭಾ ಅರಮನಿ, ಸಾವಿತ್ರಿ ಸವದಿ, ಮಾಲಾ ಪಾಟೀಲ್, ರೇಣುಕಾ ಪವಾರ್, ಲಕ್ಷ್ಮೀಬಾಯಿ ಚವ್ಹಾಣ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Post a Comment