-->
Bookmark

Gajendragad : ಗಜೇಂದ್ರಗಡ ತಾಲ್ಲೂಕು ಮಟ್ಟದ ಪಿಯು ಕಾಲೇಜು ಕ್ರೀಡಾಕೂಟ ಆ. 2 ರಿಂದ

Gajendragad : ಗಜೇಂದ್ರಗಡ ತಾಲ್ಲೂಕು ಮಟ್ಟದಪಿಯು ಕಾಲೇಜು ಕ್ರೀಡಾಕೂಟ ಆ. 2 ರಿಂದ

ಗಜೇಂದ್ರಗಡ : ( Jul_30_2024) ಪಟ್ಟಣದ ಪುರ್ತಗೇರಿ ಕ್ರಾಸ್‌ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರ ಕಾರ್ಯಾಲಯ ಗದಗ ಇವರ ಆಶ್ರಯದಲ್ಲಿ 2024-25 ನೇ ಸಾಲಿನ ಗಜೇಂದ್ರಗಡ ತಾಲ್ಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟವು ಆಗಸ್ಟ್‌ 2 ರಿಂದ 4 ವರೆಗೆ ನಡೆಯಲಿವೆ. 

ಕ್ರೀಡಾಕೂಟದ ಉದ್ಘಾಟನ ಕಾರ್ಯಕ್ರಮವು ಕಾಲೇಜಿನ ಆವರಣದಲ್ಲಿ ಆಗಸ್ಟ್‌ 2 ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ ನರೇಗಲ್‌ನ  ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆಯನ್ನು ರೋಣ ಮತಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಜಿ. ಎಸ್. ಪಾಟೀಲರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಎಸ್. ವಿ. ಸಂಕನೂರ ಮಾನ್ಯ ಶಾಸಕರು (ವಿಧಾನ ಪರಿಷತ್), ಶಾಲಾ ಶಿಕ್ಷಣ ಇಲಾಖೆ (ಪಿಯು) ಗದಗ ಜಿಲ್ಲೆಯ ಉಪನಿರ್ದೇಶಕರಾದ ಶ್ರೀ ಜಿ. ಎನ್. ಕುರ್ತಕೋಟಿ, ಶ್ರೀ ವಿ. ವಿ. ವಸ್ತ್ರದ ಚೇರಮನ್ನರು ಆಡಳಿತ ಮಂಡಳಿ ಅನ್ನದಾನೇಶ್ವರ ಪಿಯು ಕಾಲೇಜು ಗಜೇಂದ್ರಗಡ, ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರವೀಂದ್ರನಾಥ ದೊಡ್ಡಮೇಟಿ , ಆಡಳಿತಾಧಿಕಾರಿ ಶ್ರೀ ಎನ್. ಆರ್. ಗೌಡರ, ರೋಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರುದ್ರಪ್ಪ ಹುರಳಿ ಭಾಗವಹಿಸಲಿದ್ದಾರೆ. 
ಗಜೇಂದ್ರಗಡ ತಾಲ್ಲೂಕಿನ 14 ಪಿಯು ಕಾಲೇಜುಗಳ ವಿದ್ಯಾರ್ಥಿಗಳು, ತರಬೇತುದಾರರು, ಉಪನ್ಯಾಸಕರು ಭಾಗವಹಿಸಲಿದ್ದಾರೆ. ಗುಂಪು ಆಟಗಳು ಶ್ರೀ ಅನ್ನದಾನೇಶ್ವರ ಕಾಲೇಜಿನ ಆವರಣದಲ್ಲಿ ಹಾಗೂ ವೈಯಕ್ತಿಕ ಆಟಗಳು ಬಂಡಿ ಗಾರ್ಡನ್ ಎದುರಿನ ಬಯಲು ಜಾಗೆಯಲ್ಲಿ ನಡೆಯಲಿವೆ ಎಂದು ಪಿಯು ಪ್ರಾಚಾರ್ಯ ವಸಂತರಾವ್‌ ಗಾರಗಿ ಪ್ರಕಟಣೆಯಲ್ಲಿ ತಿಳಿಸಿದರು.
Post a Comment

Post a Comment