-->
Bookmark

ಯುವಕರನ್ನ ಸಾಹಿತ್ಯದೆಡೆಗೆ ಸೆಳೆಯುವುದು ಸವಾಲಿನ ಕೆಲಸ : ನಾಗರಾಜ್ ನಾಯಕ್

ಯುವಕರನ್ನ ಸಾಹಿತ್ಯದೆಡೆಗೆ ಸೆಳೆಯುವುದು ಸವಾಲಿನ ಕೆಲಸ : ನಾಗರಾಜ್ ನಾಯಕ್ 
ಗಜೇಂದ್ರಗಡ : (Jul_18_2024)
ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಹಾಗೂ ಕಾರ್ಯಚಟುವಟಿಕೆಗಳ ಕಾರ್ಯಕ್ರಮ ಸರಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆ ಗಜೇಂದ್ರಗಡದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾದ ಹಿರಿಯ ಸಾಹಿತಿ ಬಾಲ ವಿಕಾಸ ಅಕಾಡೆಮಿಯ ವಿಶೇಷ ಪ್ರಶಸ್ತಿ ವಿಜೇತರಾದ ಡಾ.ರಾಜೇಂದ್ರವ ಗಡಾದ ಮಾತನಾಡಿ, ಮಕ್ಕಳ ಸಾಹಿತ್ಯದ ಹುಟ್ಟು ಬೆಳವಣಿಗೆ ಮತ್ತು ಇಂದಿನ ಪರಿಸ್ಥಿತಿ ಕುರಿತಾಗಿ ಮಾರ್ಮಿಕವಾಗಿ ನುಡಿದರು. 
ಇನ್ನೂ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ  ಹಿರಿಯ ಸಾಹಿತಿ ಬಿ.ಎ ಕೆಂಚ ರೆಡ್ಡಿ, ಇಂದಿನ ತಾಂತ್ರಿಕ ಯುಗದಲ್ಲಿ ಯುವ ಪೀಳಿಗೆ ಹಾಳಾಗುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು.
ಇತ್ತ, ಕದಳಿ ಮಂಡಳದ ಅಧ್ಯಕ್ಷರಾದ ಶ್ರೀಮತಿ ಮಂಜಳಾ  ರೇವಡಿ ಮಾತನಾಡಿ, ಮಕ್ಕಳ ಸಾಹಿತ್ಯ ಪರಿಷತ್ತು ಬೆಳೆಯಲು ನಾವೆಲ್ಲರೂ ಸಹಕಾರ ನೀಡೋಣ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ಪರಿಷತ್ತಿನ ಅಧ್ಯಕ್ಷರಾದ ನಾಗರಾಜ್ ನಾಯಕ, ಮಕ್ಕಳ ಸಾಹಿತ್ಯ ಪರಿಷತ್ತಿನ ಗುರಿ ಉದ್ದೇಶಗಳು, ಮುಂದಿನ ಕಾರ್ಯಚಟುವಟಿಕೆಗಳ ಕುರಿತಾಗಿ ಮಾಹಿತಿ ನೀಡಿದರು. ಜೊತೆಗೆ, ಯುವ ಪೀಳಿಗೆಯನ್ನ ಸಾಹಿತ್ಯದ‌ ಕಡೆಗೆ ಸೆಳೆಯುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದರು. 
ಕಾರ್ಯಕ್ರಮದಲ್ಲಿ ಬಸವರಾಜ್ ಕೋಟಗಿ, ಹೋಸಮನಿ, ಶೇರಣಮ್ಮ, ಬಸವರಾಜ್ ಹಿರೆಮಠ, ಶಿವಶರಣಪ್ಪ ಮಠದ್, ಆರ್.ಎಸ್.ಕೊಪ್ಪದ ,ಮಧು ಜೆ.ಎಲ್.ಗಣೇಶ್ ರಾಠೋಡ್, ಸಾವಿತ್ರಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Post a Comment

Post a Comment

Design By Raushan Design and MafiaXDesign and ThemeXDesign