ಗಜೇಂದ್ರಗಡ : (Jun_26_2024)
ಗಜೇಂದ್ರಗಡ ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-4 ಗಜೇಂದ್ರಗಡ ಇವುಗಳ ಸಂಯುಕ್ತ ಆಶ್ರಯದಲ್ಲಿ 'ಅಂತಾರಾಷ್ಟ್ರೀಯ ಪರಿಸರ ದಿನಾಚರಣೆ' ಹಮ್ಮಿಕೊಳ್ಳಲಾಗಿತ್ತು.ಗಜೇಂದ್ರಗಡ ತಾಲೂಕ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗರಾಜ್ ನಾಯಕ್ ಮಾತನಾಡಿ, ಪರಿಸರ ದಿನಾಚರಣೆ ಕೇವಲ ಒಂದೆ ದಿನಕ್ಕೆ ಸೀಮಿತವಾಗದಿರಲಿ ಎಂದು ಕಿವಿಮಾತು ಹೇಳಿದರು. ಇನ್ನೂ, ಜಾಗತಿಕ ತಾಪಮಾನ ಹೆಚ್ಚಾಗಲು ಪರಿಸರ ನಾಶ ಕೂಡ ಒಂದಾಗಿದ್ದು, ಪ್ರತಿಯೊಬ್ಬರು ನಾಲ್ಕರಿಂದ ಐದು ಗಿಡಗಳನ್ನ ನೆಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಬಿ.ನಾಯಕ್, ಶಿಕ್ಷಕಿಯರು, ಪದಾಧಿಕಾರಿಗಳಾದ ಅಮರೇಶ ಗಾಣಗೇರ, ಪಿರು ರಾಠೋಡ, ಗಣೇಶ ರಾಠೋಡ, ಸಾವಿತ್ರಿ, ಸಿಕ್ರಿ, ನೇತ್ರಾ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.
Post a Comment