ನಿತ್ಯ ಯೋಗ ಮಾಡುವುದರಿಂದ ರೋಗ ಮುಕ್ತಿಯಾಗಿ ಮನುಷ್ಯನ ಆರೋಗ್ಯ ವೃದ್ಧಿಯಾಗಲಿದೆ. ಮನುಷ್ಯನು ಸದಾ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಹೃದಯಾಘಾತ, ಮಧುಮೇಹದಂಥ ಅನೇಕ ಕಾಯಿಲೆಗಳು ಇಲ್ಲವಾಗಲಿವೆ ಎಂದು ಯೋಗಪಟು, ಶಿಕ್ಷಕ ವಿ.ಎ.ಕುಂಬಾರ ಹೇಳಿದರು
ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿ ಶುಕ್ರವಾರ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಗಜೇಂದ್ರಗಡ ಹಾಗೂ ಅಥರ್ವ ನವೋದಯ ಕೋಚಿಂಗ್ ಸೆಂಟರ್ ಕಾಲಕಾಲೇಶ್ವರ, ಕಾಯಕ ಚಾರೀಟಬಲ್ ಟ್ರಷ್ಟ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪ್ರತಿದಿನ, ಪ್ರತಿ ಕೆಲಸಕ್ಕೂ ನಾವು ಸಮಯ ಕೊಡುತ್ತೇವೆ. ಆದ್ರೆ, ನಮಗೆ ನಾವು ಸಮಯ ಕೊಡದಿರುವುದು ವಿಪರ್ಯಾಸ. ಆರೋಗ್ಯ ವೃದ್ಧಿಗೆ ಕೇವಲ ದಿನದ ಒಂದು ಗಂಟೆ ಕೂಡ ಮೀಸಲಿರಿಸದೇ, ಆಧುನಿಕ ಭರಾಟೆಯಲ್ಲಿ ಮುಳುಗಿರುವುದು ವಿಪರ್ಯಾಸ ಎಂದು ಕಳವಳ ವ್ಯಕ್ತಪಡಿಸಿದರು.
ಇದೆ ವೇಳೆ, ಶಶಿಧರ್ ಹೂಗಾರ್ ಮತ್ತು ರವಿ ಗಡೇದವರ್ ಮಾತನಾಡಿ, ಅಂತಾರಾಷ್ಟ್ರೀಯ ಯೋಗದಿನ ಕೇವಲ ಒಂದೆ ದಿನಕ್ಕೆ ಸೀಮಿತವಾಗದಿರಲಿ ಎಂದು ಹೇಳಿದರು. ಜೊತೆಗೆ ವಿಶ್ವಕ್ಕೆ ಭಾರತದ ಕೊಡುಗೆ ಯೋಗವಾಗಿದ್ದು, ನಮಗೆಲ್ಲರಿಗೂ ಸಂತಸ ಎನ್ನುತ್ತಲೇ, ಯೋಗ ಮಾಡುವುದರಿಂದ ರೋಗದಿಂದ ದೂರ ವಿರಬಹುದು. ಯುವ ಸಮೂಹ ಜಂಕ್ ಫುಡ್ ದಾಸರಾಗುವುದು ಬಿಡಬೇಕು. ಆಹಾರ ಪದ್ಧತಿಯಲ್ಲಿ ಬೇಳೆಕಾಳು, ತರಕಾರಿಗಳ ಬಳಕೆ ಹೆಚ್ಚಾಗಿರಲಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಇದೇ ಸಂಧರ್ಭದಲ್ಲಿ ಕಾಲಕಾಲೇಶ್ವರ ದೇವಸ್ಥಾನ ಧರ್ಮದರ್ಶಿಗಳಾದ ಮಂಗಳಾದೇವಿ ದೇಶಮುಖ್, ನಿವೃತ್ತ ಸೈನಿಕ ಶಾಂತಪ್ಪ, ಸಮಾಜ ಸೇವಕ ರವಿಗಡೇದವರ್, ಪತ್ರಕರ್ತ ಮಂಜುನಾಥ್ ರಾಠೋಡ, ಪ್ರಾಚಾರ್ಯರರಾದ ವಸಂತ ಗಾರ್ಗಿ, ಯೋಗ ಪಟು ವಿ.ಎ ಕುಂಬಾರ ಅವರಿಗೆ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.
ಅತ್ಯಂತ ಚಿಕ್ಕ ಗ್ರಾಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಯೋಗ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಲಾಯಿತು. ಸಾರ್ವಜನಿಕರು ಮತ್ತು ಗ್ರಾಮಸ್ಥರು ಸ್ಮೃತಿಪಟಲದಲ್ಲಿ ನೆನಪಿಡುವಂತಹ ಕಾರ್ಯಕ್ರಮ ನಡೆಯಿತು.
ಇದೇ ಸಂಧರ್ಭದಲ್ಲಿ ಮಲ್ಲಯ್ಯ ಪೂಜಾರ, ಮೃತ್ಯುಂಜಯ ಹಿರೇಮ, ಪರಶುರಾಮ ಚಿಲಝರಿ, ಬಸವರಾಜ ಹುಚ್ಚಯ್ಯನಮಠ, ಡಿ.ಜಿ.ತಾಳಿಕೋಟಿ ,
ಮಂಜುನಾಥ ಎಸ್.ರಾಠೋಡ, ಆನಂದ ಭಾಂಡಗೆ, ಮಲ್ಲಯ್ಯ ಭಿಕ್ಷಾವತಿಮಠ, ಬಸಣ್ಣ ಹೊಗರಿ, ವಿರೇಶ ರಾಠೋಡ, ಚಂದ್ರು ರಾಠೋಡ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು
Post a Comment