-->
Bookmark

Yaragatti : ಬರಗಾಲದಿಂದ ಪಾರು ಮಾಡಲು ಕಾಳಮ್ಮದೇವಿಗೆ ಪ್ರಾರ್ಥನೆ : ರೇಣುಕಾ ಏವೂರ್

Yaragatti : ಬರಗಾಲದಿಂದ ಪಾರು ಮಾಡಲು ಕಾಳಮ್ಮದೇವಿಗೆ ಪ್ರಾರ್ಥನೆ :  ರೇಣುಕಾ ಏವೂರ್ 
ದೇವಸ್ಥಾನಕ್ಕೆ ಸೀಲಿಂಗ್ ಫ್ಯಾನ್ ಕೊಡುಗೆ : 
ಯರಗಟ್ಟಿ : (Aprl_08_2024
ಯರಗಟ್ಟಿಯ ಕಾಳಮ್ಮ ದೇವಸ್ಥಾನಕ್ಕೆ ಕನಸು ಸೇವಾ ಫೌಂಡೇಶನ್ ವತಿಯಿಂದ ಸೀಲಿಂಗ್ ಫ್ಯಾನ್ ಕೊಡುಗೆಯಾಗಿ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಕನಸು ಸೇವಾ ಫೌಂಡೇಶನ್ ನಿಂದ ಆರಿ ವರ್ಕ್ ತರಬೇತಿ ನೀಡಲಾಗುತ್ತಿದೆ. ಆರಿ ವರ್ಕ್ ತರಬೇತಿ ನೀಡಲು ದೇವಸ್ಥಾನ ಆಡಳಿತ ಮಂಡಳಿ ದೇವಸ್ಥಾನದಲ್ಲಿ ಆರಿ ವರ್ಕ್ ತರಬೇರಿ ನೀಡಲು ಅವಕಾಶ ಮಾಡಿ ಕೊಟ್ಟಿದೆ. ಹೀಗಾಗಿ, ಕನಸು ಸೇವಾ ಫೌಂಡೇಶನ್ ವತಿಯಿಂದ ದೇವಸ್ಥಾನಕ್ಕೆ ಸೀಲಿಂಗ್ ಫ್ಯಾನ್ ಕೊಡುಗೆಯಾಗಿ ನೀಡಿದ್ದಾರೆ.  ಕೊಡುಗೆ ನೀಡಿದ್ದಕ್ಕೆ ಕನಸು ಸೇವಾ ಫೌಂಡೇಶನ್ ಕಾರ್ಯಕ್ಕೆ  ದೇವಸ್ಥಾನದ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. 
ಈ ವೇಳೆ, ಮಾತನಾಡಿದ ಕನಸು ಸೇವಾ ಫೌಂಡೇಶನ್ ಸಂಸ್ಥಾಪಕರಾದ ರೇಣುಕಾ ಏವೂರ್ ಅವರು, ರಾಜ್ಯದಲ್ಲಿ ಬರಗಾಲದಿಂದ ರೈತರು ಸೇರಿದಂತೆ ಎಲ್ಲರಿಗೂ ತೊಂದರೆಯಾಗಿದೆ. ಯುಗಾದಿ ನಮ್ಮೆಲ್ಲರನ್ನು ಬರಗಾಲದಿಂದ ಪಾರು ಮಾಡಲಿದೆ. ಕಾಳಮ್ಮ ದೇವಿಯಲ್ಲಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿರುವುದಾಗಿ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಇತ್ತ, ಶುಭ ಕಾರ್ಯಕ್ಕೆ ಕನಸು ಸೇವಾ ಫೌಂಡೇಶನನ ಮುಖ್ಯ ಕಾರ್ಯದರ್ಶಿ ಶಂಕರ್ ಏವೂರ್ ಅವರು ಸಾಕ್ಷಿಯಾದ್ರು. ಇನ್ನೂ, ಕನಸು ಸೇವಾ ಫೌಂಡೇಶನ್ ನ ಎಲ್ಲ ಸದಸ್ಯರು ಭಾಗವಹಿಸಿದ್ದರು
Post a Comment

Post a Comment